ಈ ದಿನ ನನ್ನ ಹಿರಿಯ ಮಗ ಹುಟ್ಟಿದ ದಿನ ಅವನಿಗೆ ಶೂಭಾಶಯ ಹೇಳವ ಮೊದಲೆ ನಮಗೆ ಸದಾ ತುಮಕೂರಿನ ಸಾಂಸ್ಕøತಿಕ ವ್ಯಕ್ತಿ, ನಾವೆಲ್ಲಾ ನೀವು ಬಲು ಸುಂದರ ಎಂದು ರೇಗಿಸುತ್ತಿದ್ದ, ಬರಗೂರು ರಾಮಚಂದ್ರಪ್ಪ, ಪಿ.ಶೇಷಾದ್ರಿ ಚಲನ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಿದ್ದಾಗ ಬಾ ಇಲ್ಲಿ ಪ್ರೆಸ್ ಮೀಟ್ ಕರೆಯಬೇಕು, ಎಂದು ಕರೆಯುತ್ತಿದ್ದ ಆತ್ಮೀಯ ಮತ್ತು ಸಿಡುಕಿನ ಧ್ವನಿಯೊಂದನ್ನು ಇಷ್ಟು ಬೇಗ ನಾವು ಕಳೆದುಕೊಂಡು ಬಿಡುತ್ತೇವೆ ಅಂದು ಕೊಂಡಿರಲಿಲ್ಲ, ಆ ವ್ಯಕ್ತಿಯೇ ಭೂಮಿ ಬಳಗದ ಜಿ.ಎಸ್.ಸೋಮಣ್ಣ.(ಜಿ.ಎಸ್.ಸೋಮಶೇಖರ್)
ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಅವರು ತುಮಕೂರಿನ ಒಂದು ಬಂಗಾರವಾಗಿದ್ದರು, ಒಬ್ಬ ಸಾಹಿತಿ ಕಾಣಬೇಕಾ, ಸ್ವಾಮೀಜಿ ಕಾಣಬೇಕಾ, ಹಾಸ್ಟಲ್ ಸೀಟು ಬೇಕಾ, ಸ್ಕೂಲ್, ಕಾಲೇಜ್, ಸೀಟು ಹೀಗೆ ಉದ್ದಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಸೋಮಣ್ಣನವರು ಮಾಡುತ್ತಿದ್ದ ತಣ್ಣನೆಯ ಕೆಲಸಗಳು, ಅವರಿಗೆ ಒಂದು ಆಸೆ ಇತ್ತು ಒಮ್ಮೆ ತುಮಕೂರಿನ ಶಾಸಕರಾಗ ಬೇಕು, ನಾನು ತುಮಕೂರನ್ನು ಹೇಗೆ ಮಾಡುತ್ತೇನೆ ಎಂಬುದನ್ನು ತೋರಿಸಬೇಕು ಎಂಬುದು, ಆದರೆ ಅವರ ಆಸೆ ನೆರವೇರಲಿಲ್ಲ, ಇದರ ಜೊತೆಗೆ ಅವರು ಹಲವಾರು ಸಲ ಹೇಳುತ್ತಿದ್ದರು, ನಾನು ಸತ್ತಾಗ ಜನ ಸಾಲುಗಟ್ಟಬೇಕು, ನನಗೆ ಗುದ್ದಲಿಯಲ್ಲಿ ಮಣ್ಣು ಹಾಕಬಾರದು, ಕೈಯಲ್ಲಿಯೇ ಮಣ್ಣು ಹಾಕಿ ನನ್ನ ಪ್ರೀತಿಸುವ ಜನ ಮುಚ್ಚಬೇಕು ಎಂಬ ಆಸೆಯೂ ಇತ್ತು ಆದರೆ ಆ ಎರಡೂ ಆಸೆಗಳು ಈಡೇರಲಿಲ್ಲ.
ಸೋಮಣ್ಣ ಇಂತಹ ಜನರಿಗೆ ಸಹಾಯ ಮಾಡಲಿಲ್ಲ ಎಂಬಂತಿಲ್ಲ, ಎಲ್ಲರೂ ನಮ್ಮವರೆ ಬನ್ರಿ ಮೊದಲು ಅವರ ಪುಸ್ತಕ ಮಾಡೋಣ, ಸನ್ಮಾನ ಮಾಡೋಣ, ಸಹಾಯ ಮಾಡೋಣ ಎಂದು ಎದ್ದು ಹೊರಟೇ ಬಿಡುತ್ತಿದ್ದರು, ಅವರೊಬ್ಬರೆ ಹೊರಡುತ್ತಿರಲಿಲ್ಲ, ಜೊತೆಯವರನ್ನೆಲ್ಲಾ ಪೋನ್ ಮಾಡಿ ಸಮಯ ನಿಗದಿ ಮಾಡಿ ಕರೆಯುತ್ತಿದ್ದರು, ಆ ಸಮಯಕ್ಕೆ ಬರಲಿಲ್ಲವೆಂದರೆ ಸುಪ್ರಭಾತ ನಿಶ್ಚಿತ.
ಅವರು ಕೊರೊನಾ ಬಂದ ಮೇಲೆ ಯಾರು ಹೇಳಿದರು ಮುಖಕ್ಕೆ ಮಾಸ್ಕ್ ಹಾಕಿ ಎಂದು ಹೇಳಿದರು ಹಾಕಲಿಲ್ಲ, ಹಾಕಿ ಎಂದವರಿಗೆಲ್ಲ ಉಗಿದು ಉಪ್ಪಿನ ಕಾಯಿ ಹಾಕಿದರು, ಅವರ ಸ್ನೇಹಿತರಾಗಿದ್ದ ಶಾಂತಿಲಾಲ್ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮವೇ ಅವರ ಕೊನೆಯ ಕಾರ್ಯಕ್ರಮ, ಅವರು ಕೊರೊನಾದಿಂದ ಆಸ್ಪತ್ರೆ ಸೇರುವ ಮುನ್ನ ಕೆಂಚಮಾರಯ್ಯನವರೊಂದಿಗೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿ ಬಂದಿದ್ದರು.
ಯಾವ ಜಾತಿಯನ್ನು ಮಾಡದ, ತಮ್ಮ ಜಾತಿಯವರ ಏಳ್ಗೆಗಾಗಿಯೂ ಹಗಲು ರಾತ್ರಿ ಶ್ರಮಿಸಿದ ಜಿ.ಎಸ್.ಸೋಮಣ್ಣನವರು ಮೃತ ಪಟ್ಟಾಗ ಆರಡಿ-ಮೂರಡಿ ಜಾಗ ನೀಡಲು ಯಾರೂ ಮುಂದೆ ಬರಲಿಲ್ಲ. ಇದನ್ನು ಕಂಡು ಸೋಮಣ್ಣನವರ ದೇಹ ಅದೆಷ್ಟು ನೊಂದುಕೊಂಡಿತೋ ತಿಳಿಯದು, ಕೊನೆಗೆ ಸಿದ್ದಗಂಗಾ ಮಠದ ತೋಟದಲ್ಲಿ ಅವರು ಮಲಗಿದರು, ಸದಾ ಮಠದ ಭಕ್ತರಾಗಿದ್ದ ಅವರಿಗೆ ಮಠದಲ್ಲಿಯೇ ಮಲಗುವ ಅವಕಾಶ ಸಿಕ್ಕಿದ್ದು ಸಿದ್ದಗಂಗಾ ಮಠದ ಅವಿನಾಭವ ಸಂಬಂಧವು ಇರಬಹುದು.
ಇಂದಿಗೂ ಸೋಮಣ್ಣ ಸತ್ತಾಗ ಒಂದಿಡಿ ಮಣ್ಣು ಹಾಕಲು, ಮುಖ ನೋಡಲು ಆಗಲಿಲ್ಲ ಎಂದು ಕೊರಗುತ್ತಲೇ ಇರುವ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ನರಸೀಯಪ್ಪ, ಇತರರು ಸದಾ ಸೋಮಣ್ಣನ ಧ್ಯಾನದಲ್ಲಿರುತ್ತಾರೆ.
ಅವರ ದೇಹ ಇಲ್ಲದಿರಬಹುದು, ಅವರ ಮನಸು, ಹೃದಯವಂತಿಕೆ ಅವರು ಮಾಡಿದ ಉಪಕಾರ, ಸ್ನೇಹಿತರ ತಬ್ಬಿಕೊಳ್ಳುವಿಕೆ, ಶಿಷ್ಯರಲ್ಲಿ ಅವರು ಎಂದೆಂದಿಗೂ ಬದುಕಿದ್ದಾರೆ, ಅಮರರಾಗಿದ್ದರೆ.
ಸೋಮಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು
ವೆಂಕಟಾಚಲ.ಹೆಚ್.ವಿ.
ಮೈತ್ರಿನ್ಯೂಸ್, ತುಮಕೂರು