“ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಕಾಡಶೆಟ್ಟಿಹಳ್ಳಿ ಸತೀಶ್ ಆಯ್ಕೆ”


ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮ ಪಂಚಾಯತಿ ಸದಸ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್ ರವರು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಒಕ್ಕೂಟದ ರಾಜ್ಯ ಸಂಚಾಲನ ಸಮಿತಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಭಾರತ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕರಣ 40 ರಲ್ಲಿ “ ರಾಜ್ಯವು ಗ್ರಾಮ ಪಂಚಾಯತಿಗಳನ್ನು ಸಂಘಟಿಸಲು ಕ್ರಮ ಕೈಗೊಳ್ಳತಕ್ಕದ್ದು ಮತ್ತು ಸ್ವಯಂ ಆಡಳಿತ ಘಟಕಗಾಗಳಾಗಿ ಅವು ಕೆಲಸ ಮಾಡುವುದಕ್ಕೆ ಅವಶ್ಯಕವಾಗಬಹುದಂತ ಅಧಿಕಾರಗಳನ್ನು ಮತ್ತು ಪ್ರಾಧಿಕಾರಗಳನ್ನು ಅವುಗಳಿಗೆ ಕೊಡತಕ್ಕದ್ದು.” ಎಂದು ಹೇಳಿದ್ದರೂ, 1992 ರಲ್ಲಿ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳು ಆಗುವ ತನಕ ದೇಶದ ಎಲ್ಲಾ ರಾಜ್ಯಗಳಲ್ಲಿ ಗ್ರಾಮ ಪಂಚಾಯತಿಗಳು ಸಮರ್ಕವಾಗಿ ಅಸ್ತಿತ್ವದಲ್ಲಿರಲಿಲ್ಲ. 1992 ರಲ್ಲಿ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳಾದ ಮೇಲೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿರುವುದನ್ನು ನೋಡಬಹುದು. ಆದರೆ ಸಂವಿಧಾನದ ಪ್ರಕರಣ 40 ಮತ್ತು 243 ಜಿ ರ ಅನ್ವಯ ಗ್ರಾಮ ಪಂಚಾಯತಿಗಳು ಸ್ವಯಂ ಸಕಾರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರೂ, ಸಂವಿಧಾನದ ಆಶಯ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಕೇವಲ ಕನಸಾಗಿಯೇ ಉಳಿದಿರುವುದು ಒಂದು ವಿಪರ್ಯಾಸ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪಂಚಾಯತ್ ರಾಜ್ ಸಂಸ್ಥೆಗಳ ಬೆಳವಣಿಗೆ ಆಶಾದಾಯಕವಾಗಿದ್ದರು, ಅದು ಅಗತ್ಯದ ಮಟ್ಟಿಗಿಲ್ಲ ಎಂಬುದು ಸತ್ಯ. ಇದಕ್ಕೆ ಕಾರಣಗಳನ್ನು ಅವಲೋಕಿಸಿದಾಗ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಆಧಿಕಾರಿ ವರ್ಗ ತಮ್ಮ ಅಧಿಕಾರವನ್ನು ಸಂವಿಧಾನದ ಆಶಯಗಳಿಗನುಗುಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಸಿದ್ದವಿಲ್ಲ ಹಾಗೂ ತಮಗೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಆಧಿಕಾರವನ್ನು ಕೊಡುವಂತೆ ಒತ್ತಾಯಿಸುವ ಸಂಘಟಿತ ಪ್ರಯತ್ನ ಗ್ರಾಮ ಪಂಚಾಯತಿ ಮಟ್ಟದಿಂದ ಆಗದಿರುವುದೂ ಪ್ರಮುಖ ಕಾರಣ ಮತ್ತು ಕೊರತೆಯಾಗಿದೆ.
ಈ ಕೊರತೆಯನ್ನು ನೀಗಿಸುವ ಹಾಗೂ ಗ್ರಾಮ ಪಂಚಾಯತಿಗಳನ್ನು ಸಂವಿಧಾನದ ಆಶಯಕ್ಕನುಗುಣವಾಗಿ ಸಬಲೀಕರಣಗೊಳಿಸಲು ಹೊರಾಡುವ ಸಲುವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರುಗಳನ್ನು ಒಗ್ಗೂಡಿಸು ದೃಷ್ಠಿಯಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂವನ್ನು ರಚಿಸಲಾಗಿದ್ದು, ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಕಾಡಶೆಟ್ಟಿಹಳ್ಳಿ ಸತೀಶ್ ರವರು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಒಕ್ಕೂಟದ ರಾಜ್ಯ ಸಂಚಾಲನ ಸಮಿತಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *