ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಭೂ ಹಗರಣದ ಪ್ರಮುಖರೆಂದು ಹೇಳಲಾಗುತ್ತಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿಯನ್ನು ವಿಚಾತರಣೆಯಿಂದ ಹೊರಗಿಟ್ಟು ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇವರ ಜೊತೆಗೆ ಅಣ್ಣಪ್ಪಸ್ವಾಮಿಯವರ ಅಕ್ಕನನ್ನು ಬಿಡುಗಡೆ ಮಾಡಿರುವುದು ರಾಜಕೀಯ ಒತ್ತಡವೆ ಕಾರಣ ಎಂದು ಹೇಳಲಾಗುತ್ತಿದೆ.
ನಿನ್ನೆ ವಿಚಾರಣೆ ಗಾಗಿ ಕರೆತಂದಿದ್ದ ವರ ಪೈಕಿ, ಕೆ.ಎನ್.ಆರ್. ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜು, ಲೇ ಔಟ್ ವಿನಯ, ಮತ್ತು ಯಕ್ಕಲ ಕಟ್ಟೆ ರಾಮಚಂದ್ರ ರವರನ್ನ ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಲಾಗಿದೆ.
ಉಳಿಕೆ ಗುಬ್ಬಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಶಾಂತ ರವರನ್ನು ರಾಜಕೀಯ ಪ್ರಭಾವದ ಮೇರೆಗೆ ಬಿಡುಗಡೆ ಮಾಡಿ, ಕರುನಾಡು ಸೇನೆಯ ಅಧ್ಯಕ್ಷ ವಿನಯ್ ರವರನ್ನ. ಹೆಚ್ಚಿನ ವಿಚಾರಣೆಗಾಗಿ ಪೊಲೀಸಗ ಕಸ್ಟಡಿಯಲ್ಲಿ ಇಟ್ಟು ಕೊಂಡಿದ್ದಾರೆ,
ಈ ತಾರತಮ್ಯ ದಬಗ್ಗೆ ಸಾರ್ವಜನಿಕರು ಗುಸು ಗುಸು ಚರ್ಚೆ ನೆಡೆಯುತಿದ್ದು, ಕೆಲವು ಸಂಘಟನೆಗಳು ಮುಸ್ಕರ ಮಾಡುವುದಾಗಿ ಚರ್ಚೆ ನಡೆಯುತಾ ಇದೆ ಎನ್ನಲಾಗಿದೆ.