ಡಾ.ಪರಮೇಶ್ವರ್‍ಗೆ ಸಿಎಂ ಸ್ಥಾನಕ್ಕೆ ಬೆಂಬಲಿಗರ ಪ್ರಾರ್ಥನೆ101 ಈಡುಗಾಯಿ ಹೊಡೆದು ಆಂಜನೇಯನಿಗೆ ಹರಕೆ ಸಲ್ಲಿಕೆ

ತುಮಕೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್‍ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯಲೆಂದುಸಚಿವರ ಬೆಂಬಲಿಗರು ಮಂಗಳವಾರ ಹನುಮ ಜಯಂತಿಯಂದು ನಗರದಕೋಟೆಆಂಜನೇಯಸ್ವಾಮಿದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ನಂತರದೇವಸ್ಥಾನದ ಬಳಿ 101 ಈಡುಗಾಯಿ ಹೊಡೆದು ಹರಕೆ ತೀರಿಸಿದರು.ಡಾ.ಪರಮೇಶ್ವರ್‍ಅವರ ಭಾವಚಿತ್ರ ಪ್ರದರ್ಶಿಸಿ, ಅವರನ್ನು ಮುಖ್ಯಮಂತ್ರಿ ಮಾಡಿಬೇಕು, ದಲಿತ ಮುಖ್ಯಮಂತ್ರಿ ಆಗಲೇಬೇಕು ಎಂಬಘೋಷಣೆ ಕೂಗಿದ ಬೆಂಬಲಿಗರು, ಕೆಲ ಹೊತ್ತುಕೋಡಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ಮುಖಂಡ ಮಾಗಡಿಜಯರಾಮ್ ಮಾತನಾಡಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕುಎಂದು ಕೇಳುತ್ತಿಲ್ಲ, ಅವರುಉತ್ತಮ ಆಡಳಿತ ನೀಡುತ್ತಿದ್ದಾರೆ.ಆದರೆ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಈಗ ಚರ್ಚೆಯಲ್ಲಿದೆ.ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವುದಾದರೆ ಡಾ.ಜಿ.ಪರಮೇಶ್ವರ್‍ಅವರನ್ನೇ ಮಾಡಬೇಕುಎಂದು ಒತ್ತಾಯಿಸಿದರು.

ಡಾ.ಪರಮೇಶ್ವರ್‍ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ, ವಿವಿಧ ಸಚಿವ ಪದವಿ ಪಡೆದು ಉತ್ತಮ ಕೆಲಸ ಮಾಡಿಅನುಭವಇರುವ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸರ್ವ ರೀತಿಯಲ್ಲೂ ಅರ್ಹರಾಗಿದ್ದಾರೆ. ಸ್ವಾತಂತ್ರ ಬಂದಾಗಿನಿಂದದಲಿತ ನಾಯಕರೊಬ್ಬರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿಲ್ಲ. ಈಗ ಕಾಲ ಕೂಡಿಬಂದಿದೆ, ಎಲ್ಲೆಡೆದಲಿತ ಮುಖ್ಯಮಂತ್ರಿ ಕೂಗು ಕೇಳಿಬಂದಿದೆ.ಎಲ್ಲಾಜಾತಿ, ಧರ್ಮದವರೂಒಪ್ಪುವಂತಹ ನಾಯಕರಾಗಿರುವ ಡಾ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮಾಗಡಿ ಜಯರಾಮ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ಮತ್ತೊಬ್ಬ ಮುಖಂಡ ಸತೀಶ್ ಮಾತನಾಡಿ, ಸಜ್ಜನರು, ಜನಾನುರಾಗಿ ನಾಯಕರಾಗಿರುವ ಡಾ.ಜಿ.ಪರಮೇಶ್ವರ್‍ಅವರಿಗೆ ಈ ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ಸಿಗಬೇಕು. ಅದಕ್ಕಾಗಿ ಪಕ್ಷದ ವರಿಷ್ಠರ ಗಮನ ಸೆಳೆಯುತ್ತಿರುವುದಾಗಿ ಹೇಳಿದರು. ಹನುಮ ಜಯಂತಿಯಂದು ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಸಿಎಂ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಿಷ್ಠ ನಾಯಕರಾಗಿ, ಉತ್ತಮ ಆಡಳಿತಗಾರರಾಗಿ ಹೆಸರಾಗಿರುವಡಾ.ಪರಮೇಶ್ವರ್‍ಅವರು ಮುಖ್ಯಮಂತ್ರಿಯಾದರೆರಾಜ್ಯದಅಭಿವೃದ್ಧಿ ಹೊಸ ದಿಕ್ಕಿನತ್ತ ಸಾಗುತ್ತದೆ. ಹಲವು ವರ್ಷಗಳ ಬೇಡಿಕೆಯಾದದಲಿತ ಮುಖ್ಯಮಂತ್ರಿ ಬೇಕೆಂಬ ಹೋರಾಟಕ್ಕೂ ನ್ಯಾಯದೊರೆಯುತ್ತದೆಎಂದು ಸತೀಶ್ ಹೇಳಿದರು.

ಮುಖಂಡರಾದ ಕೇಶವಮೂರ್ತಿ, ಯೋಗೀಶ್ ದಿಬ್ಬೂರು, ಡಿಎಸ್‍ಎಸ್ ಮುಖಂಡ ಹರೀಶ್, ದೀಕ್ಷಿತ್, ಶಿವರಾಜ್ ಮೊದಲಾದವರು ನೇತೃತ್ವವಹಿಸಿದ್ದರು.

Leave a Reply

Your email address will not be published. Required fields are marked *