ಡಿ.ಎಸ್.ನಾಗಭೂಷಣರವರ ಪರಿಚಯ

1952 ರ ಫೆಬ್ರುವರಿ 1ರಂದು ಬೆಂಗಳೂರು ಗ್ರಾಮುಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ, ಹಾಲಾ ಮಾಸ್ತರರಾಗಿದ್ದ ಸಿ.ಹೆಚ್ ಸೂರಾರ್ ಹಾಗೂ ಗೌರಮ್ಮ ರಂಪತಿಗಳ ಎರಡನೇ ಮಗನಾಗಿ ಜನಿಸಿದ ಡಿ.ಎಸ್.ನಾಗಭೂಷಣ, ಅದೇ ಜಿಲ್ಲೆಯ ಆಳ ಮತ್ತು ತ್ಯಾಮಗೊಂಡ್ಲು ಶಾಲಾ ಶಿಕ್ಷಣ ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ 1971ರಲ್ಲಿ ಆನರ್ಸ್ ಮತ್ತು 1978ರಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದವರು. 1975ರಲ್ಲಿ ದೆಹಲಿಯ ಆಕಾರವಾಣಿ ಕೇಂದ್ರರ ಸುದ್ದಿ ವಿಭಾಗದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು, ಅದೇ ಸಂಸ್ಥೆಯ ವಿವಿಧ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ 30 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಈಗ ಸ್ವಯಂ ನಿವೃತ್ತಿ ಪಡೆದು ತಮ್ಮ ಪತ್ನಿ ಸಮ ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.

ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆ ಹಾಗೂ ಮುಖ್ಯವಾಗಿ ಅಧುನಿಕತೆ, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಗಳನ್ನು ಬರಿತ ವಿಮರ್ಶೆಗಳನ್ನೊಳಗೊಂಡ ಸಮಾಜವಾದಿ ಚಿಂತನೆ ನಾಗಭೂಷಣ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ಹಲವು ಗ್ರಂಥಗಳನ್ನು ರಚಿಸಿದ್ದಾರೆ ಮತ್ತು ಪತ್ರಿಕಾ ಅಂಕಣಗಳನ್ನು ಬರೆದಿದ್ದಾರೆ ಸ್ವ ಸಂಸ್ಕೃತಿ ವಿಮರ್ಶೆಯ ಅವರ ಮುಖ್ಯ ಮಸ್ತಕಗಳೆಂದರೆ, ಗಮನ, ಆನೇಕ, ಕುವೆಂಪು ಸಾಹಿತ್ಯ ದರ್ಶನ, ಈ ಭೂಮಿಯಿಂದ ಆ ಆಕಾಶದವರೆಗೆ, ಕನ್ನಡ ಕಟಕ ಸಂಘನಗಳು ಮತ್ತು ಇಲ್ಲಿ ಯಾವುದೂ ಆಮುಖ್ಯವಲ್ಲ, ರೂಪರೂಪಗಳನು ದಾಟಿ ಇವರ ವರೆಗಿನ ಸಾಹಿತ್ಯ ವಿಮರ್ಶೆಗಳ ಸಮಗ್ರ ಸಂಕಲನ, ಲೋಹಿ ಯಾ ಸಮಾಜವಾರ ದರ್ಶನ, ಜೆ: ಒಂದು ಅಪೂರ್ಣ ಕ್ರಾಂತಿಯ ಜೆ ಬೇರು-ಅಳಲು, ಮರಳಿ ಬರಲಿದೆ ಸಮಾಜವಾದ, ಇದು ಭಾರತ ಇದು ಭಾರತ ರರು ಮತ್ತು ವಾಲ್ಮೀಕಿಯರು, ಕಂಡದ್ದು ಇಡಿದ್ದು, ರೈತ ಭಾರತ ಅವಸಾನದ ಅಂಚಿನಲ್ಲಿ, ಲೋಹಿಯ ಜೊತೆಯಲ್ಲಿ, ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು ಮತ್ತು ಕಾಲಕ್ರಮ ಮರ ಮು ಸಮಾಜವಾದಿ ಚಿಂತನೆಯ ಕೃತಿಗಳು, ಸಮತೆಯ ಸಾಕಾರಮೂರ್ತಿ ರಮಣ ಮಹ೯ ಇದರ ಕಿರುಪುಸ್ತಕಗಳಲ್ಲೊಂದು.

ಮಾಸ್ತಿ ಸಾಹಿತ್ಯ , ಸಮಗ್ರ ದರ್ಶನ (ಮಾ ವಮಾನೋತ್ಸವ ಸಂಪುಟ). ಕುವೆಂದು ಒಂದು ಮನರನ್ವೇಷಣೆ (ಬವೆಂದು ಶತಮಾನೋತ್ಸವ ಸಂಪುಟ), ಲೋಹಿಯಾ, ವ್ಯಕ್ತಿ ವಿಚಾರ ವಿರಾಜಿ (ಲೋಹಿಯಾ ಶತಮಾನೋತ್ಸವ ಸಂಪುಟ), ಲೋಹಿಯಾ: ವ್ಯಕ್ತಿ ವಿಚಾರ ವಿಮರ್ಶೆ (ಲೋಹಿಯಾ ಶತಮಾನೋತ್ಸವ ಸಂಪುಟ), ಕಾಡಿನ ಹುಡುಗ ಕೃಷ್ಣ (ಶ್ರೀ ಆಲನಹಳ್ಳಿ ಕೃಷ್ಣ ನೆನಪಿನ ಸಂಪುಟ), ಹಣತೆ (ಜಿ.ಎಸ್.ಎಸ್. ಅಭಿನಂದನಾ ಗ್ರಂಥ), ಆ ಗಣರಾಜ್ಯ- ಈ ಕರ್ನಾಟಕ (ಕರ್ನಾಟಕ ರಾಜ್ಯದ ಚಿನ್ನದ ಹಬ್ಬದ ಸಂಪುಟ) ಉರಿದ ಪಂಜು (ಕೆ.ರಾಮದಾಸ್ ಸ್ಮರಣ ಸಂಪುಟ), ನಮ್ಮ ಶಾಮಣ್ಣ( ಕಡಿದಾಳು ಶಾಮಣ್ಣ ಗೌರವ ಗ್ರಂಥ) ಇವರು ಸಂಪಾದಿಸಿರುವ -ಸಹ ಸಂಪಾದಿಸಿರುವ ಮುಖ್ಯ ಸಂಪುಟಗಳು.

ನಾಗಭೂಷಣ ಅವರು ಲೋಹಿಯಾ ಜನ್ಮ ಶತಾಬ್ಧಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾಗಿ ಸಂಸ್ಕøತಿ ಮತ್ತು ಸಮಾಜಗಳನ್ನು ಕುರಿತು ರಾಜ್ಯಾದ್ಯಂತ ಅನೇಕ ಅಧ್ಯಯನ ಶಿಬಿರಗಳನ್ನು ನಡೆಸುದ್ದಾರೆ. ‘ಹೊಸ ಮನುಷ್ಯ’ ಎಂಬ ಸಮಾಜವಾದಿ ಮಾಸಿಕವನ್ನೂ ಹೊರ ತರುತ್ತಿದ್ದರು.

ಇತ್ತೀಗೆ ಅನಾರೋಗ್ಯಕ್ಕೆ ತುತ್ತಾಗಿದ್ದ 70 ವರ್ಷದ ಡಿ.ಎಸ್.ನಾಗಭೂಷಣ ಅವರು 2022 ಮೇ 19ರ ರಾತ್ರಿ 12.5ರಲ್ಲಿ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *