ತುಮಕೂರಿನಲ್ಲಿ ಮೇ22ರ ಭಾನುವಾರ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಚಾರ, ಅಲ್ಪಸಂಖ್ಯಾತರ ಮೇಲೆ ವಿನಾ ಕಾರಣ ವಿವಧ ರೀತಿಯಲ್ಲಿ ಕಿರುಕುಳ, ಬೆಲೆ ಏರಿಕೆ ಕುರಿತಂತೆ ಮನದಟ್ಟು ಮಾಡಲು ಅಲ್ಪಸಂಖ್ಯಾತರ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಯು.ಟಿ.ಖಾದರ್ ಮುಂತಾದವರು ಸೇರಿದಂತೆ ಜಿಲ್ಲೆಯ ಕಾಂಗ್ರೆಸ್‍ನ ಹಾಲಿ-ಮಾಜಿ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿರುವ ಸರ್ಕಾರದ ವೈಫಲ್ಯಗಳನ್ನು ಕುರಿತು ಸಮಾವೇಶದಲ್ಲಿ ನಾಯಕರುಗಳು ಮಾತನಾಡಲಿದ್ದಾರೆ, ಇಡೀ ರಾಜ್ಜಕ್ಕೆ ಈ ಸರ್ಕಾರವು ಭ್ರಷ್ಟಚಾರವನ್ನು ಹಬ್ಬಿಸದ್ದು, ಇಂತಹ ಸಮಾವೇಶಗಳಿಂದ ಭ್ರಷ್ಟ ಸರ್ಕಾರವೊಂದನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯುವ ತಯಾರಿಯು ಇದಾಗಲಿದೆ ಎಂದರು.
ಸಿ.ಎಂ.ಇಬ್ರಾಹಿಂ ಅವರು ಬಿಜೆಪಿ ‘ಬಿ’ಟೀಮ್ ಸೇರಿದ್ದಾರೆ. ಕಾಂಗ್ರೆಸ್‍ನಿಂದ ಎರಡು ಭಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಇಬ್ರಹಿಂ, ಕಾಂಗ್ರೆಸ್ ಏನು ಮಾಡಲಿಲ್ಲ ಎಂದು ಬಿಜೆಪಿಯ ‘ಬಿ’ಟೀಮ್‍ಗೆ ಸೇರಿರುವುದು ಅವರ ಹತಾಸೆಯಾಗಿದೆ ಎಂದು ಕುಟಿಕಿದರು.
ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಪರವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದರು. ಮಾಜಿ ಶಾಕರಾದ ರಫೀಕ್ ಅಹ್ಮದ್, ಷಫೀಅಹ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ, ಅತಿಕ್ ಅಹ್ಮದ್, ಇಕ್ಬಾಲ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.