ತುಮಕೂರು ಜಿಲ್ಲೆ ಡಿ.ಹೆಚ್.ಓ. ಆಗಿ ಡಾ||ಮಂಜುನಾಥ ಅಧಿಕಾರ ಸ್ವೀಕಾರ.


ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಡಾ||ಮಂಜುನಾಥ ಅವರು ಇಂದು ಅಧಿಕಾರ ವಹಿಸಿಕೊಂಡರು.
ದಾವಣಗೆರೆಯಿಂದ ವರ್ಗಾವಣೆಗೊಂಡು ಬಂದಿರುವ ಡಾ||ಮಂಜುನಾಥ ಅವರು ದಾವಣಗೆರೆಯ ಸರ್ಕಾರಿ ಚಿಗಟೇರಿ ಆಸ್ಪತ್ರೆಯಲ್ಲಿ ಇ.ಎನ್.ಟಿ.ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಇಂದು ತುಮಕೂರು ಜಿಲ್ಲೆ ಡಿ.ಹೆಚ್.ಓ ಆಗಿ ಅಧಿಕಾರವನ್ನು ಸ್ವೀಕರಿಸಿದರು. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ|| ನಾಗೇಂದ್ರಪ್ಪ ಅವರಿಗೆ ಯಾವುದೆ ಸ್ಥಳವನ್ನು ತೋರಿಸಿಲ್ಲ.

ಹೊಸದಾಗಿ ಡಿಹಚ್‍ಓ ಆಗಿ ಬಂದ ಡಾ|| ಮಂಜುನಾಥ ಅವರನ್ನು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ|| ವೀರಭದ್ರಯ್ಯ ಅವರು ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.

Leave a Reply

Your email address will not be published. Required fields are marked *