ಮಳೆ-ಜನ ಜೀವನ ಅಸ್ತವ್ಯಸ್ತ- ಚರಂಡಿ ಕೊಚ್ಚೆ ರಸ್ತೆಗೆ,ಗಿನ್ನೀಸ್- ರೆಕಾರ್ಡ್ ನತ್ತ ತರಕಾರಿ ಬೆಲೆ

ತುಮಕೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಕಾರ ಮಳೆ ಬೀಳುತ್ತಿದ್ದು, ಜಿಲ್ಲೆಯಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮುಂಗಾರು ಮಳೆ ಪ್ರಾರಂಭಕ್ಕಿಂತ ಮೊದಲೇ ಚಂಡಮಾರುತದಿಂದ ಮಳೆ ಪ್ರಾರಂಭವಾಗಿದ್ದು, ದಕ್ಷಿಣ ಒಳ ನಾಡಿನ ಹಲವಾರು ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಾ ಇದ್ದು, ಬೆಂಗಳೂರು ಮತ್ತು ತುಮಕೂರು ಜಿಲ್ಲೆ ಮತ್ತು ನಗರ ಪ್ರದೇಶಗಳಲ್ಲಿ ಧಾರಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿರುವುದಲ್ಲದೆ, ರೈತರು ಮತ್ತು ಶಾಲಾ ಮಕ್ಕಳು ಪರದಾಡುವಂತಾಗಿದೆ.

Sarvodaya Collge, Near Amanikere, Tumkur.

ಮುಂಗಾರು ಮಳೆಯು ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತಿತ್ತು, ಆದರೆ ಈ ಬಾರಿ 15 ದಿನ ಮುಂಚಿತವಾಗಿ ಮಳೆ ಪ್ರಾರಂಭವಾಗಿದ್ದು, ಮೇ ಮೊದಲ ವಾರ ಅಲ್ಪ ಪ್ರಾಮಾಣದಲ್ಲಿ ಮಳೆ ಬಿದ್ದಾಗ, ಮುಂಗಾರು ಬೆಳೆಗಳಾದ ಹೆಸರು, ಉದ್ದು, ಜೋಳ, ಎಳ್ಳು ಬಿತ್ತನೆಗೆ ರೈತರು ಹೊಲಗಳನ್ನು ಅಚ್ಚುಕಟ್ಟು ಮಾಡಿಕೊಂಡಿದ್ದರು. ಈಗ ಮಳೆಯು ನಿರೀಕ್ಷೆಗೂ ಮೀರಿ ಬೀಳುತ್ತಿರುವುದರಿಂದ ಬಿತ್ತನೆಗೆ ಅಡ್ಡಿಯಾಗಿದೆ.

Hemavathi Office Opp Road, Tumkur.

ಇನ್ನ ನಗರ ಪ್ರದೇಶದಲ್ಲಿ ಕಛೇರಿ ಮತ್ತು ಶಾಲಾ ಕಾಲೇಜುಗಳಿಗೆ ತೆರಳಲು ಮಳೆಯಿಂದ ಪರದಾಡುವಂತಾಗಿದ್ದು, ಆಟೋ ದರವನ್ನು ದುಪ್ಪಟ್ಟು ಮಾಡಿರುವುದರಿಂದ ತುಮಕೂರು ನಗರದಲ್ಲಿ ಜನರು ಕೆಲಸ-ಕಾರ್ಯಗಳಿಗೆ ತೆರಳುವುದು ದುಸ್ತರವಾಗಿದೆ.
ಮಳೆಗೆ ಜಿಲ್ಲೆಯ ಹಲವಾರು ಸಣ್ಣ ಪುಟ್ಟ ಕೆರೆಗಳು ಈಗಾಗಲೇ ಕೋಡಿ ಬಿದಿದ್ದು, ಜನರಲ್ಲಿ ಒಂದು ಕಡೆ ಸಂತಸ ತಂದರೆ ಮತ್ತೊಂದು ಕಡೆ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಕೆಲಸ ಕಾರ್ಯಗಳನ್ನು ಮಾಡಲಾಗದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ.
ಕೆಲಸ ಕಾರ್ಯಗಳಿಗೆ ತೆರಳುವವರು ಛತ್ರಿ ಹಿಡಿದು. ಜರೀಕಿನ್ ಗಳನ್ನು ಹಾಕಿಕೊಂಡು ಓಡುತ್ತಿರುವುದು ಕಂಡು ಬಂದಿತು.

B.H. Road, Tumkur

ಮಳೆಯು ನಿರಂತರವಾಗಿ ಬೀಳುತ್ತಿರುವುದರಿಂದ ಎಲ್ಲಾ ತರಕಾರಿಯ ಬೆಲೆಯು ಗಗನ ಮುಖಿಯಾಗಿ, ವಿಪರೀತ ಬೆಲೆ ಏರಿಕೆಯಾಗಿದೆ, ಇದಕ್ಕೆ ಸಾಕ್ಷಿ ಎಂಬಂತೆ ಟೊಮೋಟೋ ಮತ್ತು ಬೀನ್ಸ್ ಕೆ.ಜಿ.ಗೆ 100ರ ಗಡಿ ದಾಟಿ ದಾಖಲೆ ನಿರ್ಮಿಸಿವೆ. ಇನ್ನೇನಿದ್ದರೂ ಗಿನ್ನೀಸ್ ರೆಕಾರ್ಡ್‍ನತ್ತ ತರಕಾರಿ ಬೆಲೆ ಏರಿದರೂ ಅಚ್ಚರಿಯಿಲ್ಲ. ಇದರಿಂದ ತರಕಾರಿ ತಿನ್ನುವುದು ಹೇಗೆ ಅನ್ನುವಂತಾಗಿದೆ ಎಂಬುದು ಜನರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

RAdakrishna Road, Tumkur.

ತುಮಕೂರು ನಗರದಲ್ಲಿ ಹಲವಾರು ಚರಂಡಿಗಳು ಕಟ್ಟಿಕೊಂಡು ಮಳೆ ನೀರು, ಚರಂಡಿಯ ಕಸ ಕಡ್ಡಿಗಳೆಲ್ಲಾ ರಸ್ತೆಗೆ ಬಂದು ಹರಯುತ್ತಾ ಇವೆ, ಇದನ್ನು ನೋಡಿದರೆ ಇದೊಂದು ಸ್ಮಾರ್ಟ್ ಸಿಟಿಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಳೆಯು ಇನ್ನೂ ಮೂರ್ನಾಲ್ಕು ದಿನ ಬೀಳಲಿದೆ ಎಂದು ಹವಮಾನ ಇಲಾಖೆಯು ತಿಳಿಸಿದ್ದು, ಹಲವು ಜಿಲ್ಲೆಗಳನ್ನು ರೆಡ್ ಅಲರ್ಟ್ ಜಿಲ್ಲಗಳನ್ನಾಗಿ ಘೋಷಿಸಿದೆ.

Leave a Reply

Your email address will not be published. Required fields are marked *