ಮಹಾರಾಷ್ಟ್ರ ಶಿವಸೇನಾ ಸರ್ಕಾರ ಎರಡು ನಗರಗಳ ಹೆಸರನ್ನು ಹಿಂದುತ್ವದಡಿ ಬದಲಾಯಿಸಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದೆ ಕಾಂಗ್ರಸ್ ಮತ್ತು ಎನ್.ಸಿ.ಪಿ. ಸಮ್ಮಿತಿ ಸೂಚಿಸಿವೆ.
ಮಹಾರಾಷ್ಟ್ರದ ಪ್ರಮುಖ ನಗರಗಳಾದ ಔರಂಗಬಾದ್ ನಗರವನ್ನು ಶಂಬಾಜಿ ನಗರವೆಂದು ಮತ್ತು ಓಸಾಮಾಬಾದ್ ನಗರವನ್ನು ಧಾರಶಿವ್ ಎಂದು ಬದಲಾಯಿಸಕಾಗಿದೆ.
ಈ ಬದಲಾವಣೆಯನ್ನು ಶಿವಸೇನೆ ಹಿಂದುತ್ವ ಬಿಟ್ಟಿಲ್ಲ ಎಂದು ತೋರಿಸಲು ಮತ್ತು ಪಕ್ಷ ಹಿಂದುತ್ವಕ್ಕೆ ಬದ್ಧವಾಗುದೆ ಎಂದು ತಾವು ಮುಖ್ಯಮಂತ್ರಿ ಸ್ಥಾನದಿಂದ ತೆರಳುವ ಮುನ್ನ ಸಂದೇಶವನ್ನು ರವಾನಿಸಿದ್ದಾರೆ.
ಎರಡು ನಗರಗಳ ಹೆಸರನ್ನು ಇಸ್ಲಾಂಮಿಕ್ ಹೆಸರನ್ನು ಹಿಂದುತ್ವದಡಿಯ ನಗರಗಳಾಗಿ ಹೆಸರನ್ನು ಬದಲಾಯಿಸಲಾಗಿದೆ.
ಶಿವಸೇನೆ ಸರ್ಕಾರ ರಚನೆಗೆ ಬೆಂಬಲ ಸೂಚಿಸಿರುವ ಅಲ್ಪಸಂಖ್ಯಾತರ ಹಿತ ಕಾಯುವವರು ಎಂದು ಹೇಳಿಕೊಳ್ಳುತ್ತಲೇ ಬರುತ್ತಿದ್ದ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಕೂಡ ಹಿಂದುತ್ವದ ಒತ್ತಡಕ್ಕೆ ತಲೆ ಭಾಗಿರುವುದು ಆಶ್ಚರ್ಯವಾಗಿದ್ದು,
ಇತ್ತಿಚಿನ ದಿನಗಳಲ್ಲಿ ಹಿಂದುತ್ವ ಮುನ್ನಲೆಗೆ ಬರುತ್ತಿದೆ ಎಂದು ಭಾವಿಸಿಕೊಂಡು ಈ ಎರಡು ಪಕ್ಷಗಳು ಶಿವಸೇನಾ ಸರ್ಕಾರದ ತೀರ್ಮಾನಕ್ಕೆ ತಲೆಭಾಗಿವೆ ಎಂಬುದೆ ಈಗ ದೊಡ್ಡ ಚರ್ಚೆ ಗೆ ಎಡೆ ಮಾಡಿಕೊಟ್ಟಿದೆ. ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ನೇತೃತ್ವದ ಶಿವಸೇನೆಯನ್ನು ಮೂಲೆಗುಂಪು ಮಾಡಲು ವಿರೋಧ ಪಕ್ಷ ಬಿಜೆಪಿ ಪ್ರಯತ್ನಿಸುತ್ತಿದೆ, ಈ ಹಿನ್ನಲೆಯಲ್ಲಿ ಶಿವಸೇನಾ ಪಕ್ಷ ಉಳಿಸಿಕೊಳ್ಳಲು ಈ ತೀರ್ಮಾನ ತೆಗದುಕೊಂಡಿದೆ ಎಂದು ಹೇಳಲಾಗುತ್ತಿದೆ