ಗುಬ್ಬಿ : ರಾಷ್ಟ್ರಧ್ವಜವನ್ನು ಸೂರ್ಯಾಸ್ತಮಕ್ಕಿಂತ ಮೊದಲೇ ಇಳಿಸದೆ ಅಗೌರವ ತೋರಿಸಿರುವ ಗುಬ್ಬಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಗುಬ್ಬಿ ಪಟ್ಟಣ ಹಿತ ರಕ್ಷಣಾ ಸಮತಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿದೆ.
ಪಟ್ಟಣ ಪಂಚಾಯಿತಿಯ ಕಛೇರಿ ಆವರಣದಲ್ಲಿ ಜನವರಿ 26ರ ಗಣರಾಜ್ಯೋತ್ಸವಕ್ಕೆ ಹಾರಿಸಿದ್ದ ರಾಷ್ಟ್ರಧ್ವಜವನ್ನು ಸೂರ್ಯ ಮುಳುಗು ಮುನ್ನ ಕೆಳಗಿಸಿ ಗೌರವ ಸಲ್ಲಿಬೇಕು, 1973ರ ಧ್ವಜ ಸಂಹಿತೆ ನಿಯಮದಂತೆ ಸೂರ್ಯಾಸ್ತಮಕ್ಕೂ ಮುನ್ನ ರಾಷ್ಟ್ರ ಧ್ವಜವನ್ನು ಇಳಿಸದೆ, ರಾತ್ರಿ 8.30ರವರೆಗೂ ಇಳಿಸದೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾಷ್ಟ್ರಧ್ವಜಕ್ಕೆ ಮಾಡಿದ ಅಗೌರವ ಮತ್ತು ಕರ್ತವ್ಯ ಲೋಪ ಎಸಗಿರುವುದರಿಂದ ಈ ಕೂಡಲೇ ಕ್ರಮತೆಗೆದುಕೊಳ್ಳುವಂತೆ ತಹಶೀಲ್ದಾರ್‍ರವರಿಗೆ ಮನವಿ ಮಾಡಿದ್ದಾರೆ.
ಮಾಧ್ಯಗಳಲ್ಲಿ ರಾಷ್ಟ್ರಧ್ವಜ ಇಳಿಸದೆ ಇರುವುರ ಬಗ್ಗೆ ್ಲ ಸುದ್ದಿ ಬಿತ್ತರಗೊಂಡಾಗ ರಾತ್ರಿ 8.30ರ ನಂತರ ಪಟ್ಟಣ ಪಂಚಾಯತಿ ಅಧಿಕಾರಿಗಳು ತರಾತುರಿಯಲ್ಲಿ ಇಳಿಸಿರುವುದು ಖಂಡನೀಯ ಮತ್ತು ರಾಷ್ಟಧ್ವಜದ ಬಗ್ಗೆ ಗೌರವವಿಲ್ಲದಿರುವುದು ಕಂಡು ಬಂದಿದ್ದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೇಲೆ ಕ್ರಮಕೈಗೊಳ್ಳಲು ತಹಶೀಲ್ದಾರ್ ಅವರನ್ನು ಆಗ್ರಹಿಸಿದ್ದಾರೆ.