ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲೋತ್ಸವ ಚಟುವಟಿಕೆಗಳಿಗೆ ಚಾಲನೆ: ಹೂವಾಗಿ ಅರಳಿದ ವಿದ್ಯಾಥಿಗಳು

ತುಮಕೂರು: ಕೋವಿಡ್ ಸೊಂಕಿನ ಆರ್ಭಟದಿಂದಾಗಿ ಸ್ಥಗಿತಗೊಂಡಿದ್ದ ಕಾಲೇಜಿನ ಸಾಂಸ್ಕøತಿಕ ಚಟುವಟಿಕೆಗಳು ಗರಿಗೆದರುತ್ತಿವೆ. ಈ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ನಡೆಯುವ ಸಾಂಸ್ಕøತಿಕ ಕಲಾವೈಭವದ ಮೆರಗಿನ ‘ಕಲೋತ್ಸವ-22’ ಕಾರ್ಯಕ್ರಮದ ಪೂರ್ವಸಿದ್ದತೆಗಳಿಗೆ ಚಾಲನೆ ಶನಿವಾರದಂದು(ಮೇ.14) ಅಧಿಕೃತ ಚಾಲನೆ ನೀಡಲಾಯಿತು.
ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಕಲೋತ್ಸವದ ಕಾರ್ಯಕ್ರಮ ಭಿತ್ತಿಪತ್ರ ಫಲಕವನ್ನು ಪ್ರಾಂಶುಪಾಲರಾದ ಡಾ.ಎಂ ಎಸ್ ರವಿಪ್ರಕಾಶ್ ಅನಾವರಣ ಮಾಡುವುದರ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ ಕರೋನಾ ಕಾರಣದಿಂದ ನಿಂತಿದ್ದ ಕಲೋತ್ಸವಕ್ಕೆ ಇಂದು ಮತ್ತೆ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸಾಂಸ್ಕøತಿಕ ಸ್ಪರ್ಧೆಗಳನ್ನು ಶ್ರೀಮಂತಗೊಳಿಸುವಂತೆ ಕರೆ ನೀಡಿದರು.
ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಎಂ.ಝಡ್.ಕುರಿಯನ್ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಸಾಂಸ್ಕøತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ ಎಂದರು.

ಕಲೋತ್ಸವ-22ರ ಸಾಂಸ್ಕøತಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರು ಹಾಗೂ ಡೀನ್ ಆದ ಡಾ.ಎಂ ಸಿದ್ದಪ್ಪ, ಪ್ರಾಧ್ಯಾಪಕರಾದ ಪ್ರೊ.ರಮೇಶ್, ಪ್ರೊ. ಎಲ್. ಸಂಜೀವ್ ಕುಮಾರ್, ಪ್ರೊ.ಹರೀಶ್‍ಕುಮಾರ್, ಎನ್‍ಸಿಸಿ ಅಧಿಕಾರಿ ಡಾ. ಜಯಪ್ರಕಾಶ್, ಕಲೋತ್ಸವ-22 ಸಮಿತಿ ವಿದ್ಯಾರ್ಥಿ ಸಂಘನೆಗ¼ ಪ್ರತಿನಿಧಿಗಳಾದ ಮನು ಎಂ.ಎಲ್., ಸೋಹಾನ್ ರಾಜ್, ಪ್ರದೀಪ್ ಕುಮಾರ್,ದೀಪ್ತಿ ಮತ್ತು ರಮಿತ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಂಕೇತಿಕ ಹಾಡು, ನೃತ್ಯ ಮತ್ತು ಕಲಾಪ್ರದರ್ಶನಗಳು ನಡೆದವು.

Leave a Reply

Your email address will not be published. Required fields are marked *