ಹಿಂದೂ ಎಂಬುದು ಧರ್ಮ ಸೂಚಕ ಪದವಲ್ಲ-ಕುಂ. ವೀರಭದ್ರಪ್ಪ

ಹುಬ್ಬಳ್ಳಿ: ಹಿಂದೂ ಎಂಬುದು ಧರ್ಮ ಸೂಚಕ ಪದವಲ್ಲ. ಅದು ಇರಾಕ್ನಲ್ಲಿರುವ ಪ್ರದೇಶದ ಹೆಸರು. ನಮ್ಮಲ್ಲಿ ಹರಿಯುವುದು ಒಂದೇ ರಕ್ತ, ಅದು ಭಾರತೀಯ ರಕ್ತ. ಇನ್ನು ಮುಂದೆ ಎಲ್ಲಿಯೇ ಆದರೂ ಹಿಂದೂ ಬದಲಾಗಿ ಇಂಡಿಯನ್ ಅಥವಾ ಭಾರತೀಯ ಎಂದು ಬರೆಸುವಂತೆ ಲೇಖಕ ಕುಂ. ವೀರಭದ್ರಪ್ಪ ಸಲಹೆ ನೀಡಿದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಸವ ಜಯಂತಿ, ರಂಜಾನ್ ಹಬ್ಬದ ಅಂಗವಾಗಿ ಸೌಹಾರ್ದ ದಿನಾಚರಣೆ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಶರಣ ಸೇನೆ ಸಂಘಟನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಿಟಿಷ್ ಅಧಿಕಾರಿಯೊಬ್ಬರು ಭಾರತದಲ್ಲಿ ಹಿಂದೂ ಎಂಬ ಪದವನ್ನು ಬಳಸಿದರು. ಅದನ್ನು ಎತ್ತಿಕೊಂಡ ಒಂದು ಸಮುದಾಯ ಹಿಂದೂ ಧರ್ಮ ಎಂದು ಪ್ರಚಾರ ಮಾಡಿದರು ಎಂದು ಪ್ರತಿಪಾದಿಸಿದರು.ವಿದ್ಯಾರ್ಥಿ ಮುಖಂಡ ರಾಯಸಂದ್ರ ರವಿಕುಮಾರ್ ಮಾತನಾಡಿ, ಇಂದಿನ ಎಲ್ಲಾ ಸಮಸ್ಯೆಗಳಿಗೆ ಬಸವ, ಬುದ್ಧ, ಅಂಬೇಡ್ಕರ್ ವಿಚಾರಧಾರೆಗಳು ಅಗತ್ಯವಾಗಿವೆ, ಜಾತಿ, ಧರ್ಮದ ಹೆಸರಿನ ಸಂಘಟನೆಗಳು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದ ಅವರು, 12ನೇ ಶತಮಾನದಲ್ಲಿ ನಡೆಯುತ್ತಿದ್ದ ಶೋಷಣೆ ಇಂದು ನಿಧಾನವಾಗಿ ಆವರಿಸಿಕೊಳ್ಳುತ್ತಾ ಇದೆ ಎಂದರು.
ಮುಸ್ಲಿಂ ಧರ್ಮಗುರು ತಾಜುದ್ದೀನ್ ಖಾದ್ರಿ ಮಾತನಾಡಿ ಧರ್ಮಗಳ ನಡುವಿನ ತಿಕ್ಕಾಟದ ರೋಗವನ್ನು ಪತ್ತೆ ಹಚ್ಚಿ ಬುಡಸಮೇತ ಕಿತ್ತು ಹಾಕಬೇಕು ಎಂದರು.

ಮಾಜಿ ಸಂಸದ ಬಿ.ಜಿ., ಸನದಿ ಚೀನಾದ ಲೋಗೊ ಬಿಡುಗಡೆ ಮಾಡಿದರು. ಮಾಜಿ ಮೇಯರ್ ಗಳಾದ ಪ್ರಕಾಶ ಕ್ಯಾರಕಟ್ಟಿ, ಅನಿಲಕುಮಾರ ಪಾಟೀಲ, ಸಾಹಿತಿ ಹನುಮಾಕ್ಷಿ ಗೋಗಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಡಾ. ಅಬ್ದುಲ್ ಕರೀಮ್, ಸಮತಾ ಸೈನಿಕ ದಳದ ಅಧ್ಯಕ್ಷ ಶಂಕರ ಅಜಮನಿ, ಪಾಲಿಕೆ ಸದಸ್ಯ ಇಮ್ರಾನ್ ಎಲಿಗಾರ, ಚಿಂತಾಮಣಿ ಸಿಂದಗಿ ಇದ್ದರು. ಜಾಕೀರ ಹುಸೇನ್ ಸ್ವಾಗತಿಸಿದರು. ಸಂವರ್ತನ ಗುರುಕುಲದ ಶಕುರ್ಬು ಕಾರ್ಯಕ್ರಮ ಅನನ್ಯಾ ಹಾಗೂ ಆಪೂರ್ವ ನೃತ್ಯ ಪದರ್ಶಿಸಿದರು.

Leave a Reply

Your email address will not be published. Required fields are marked *