ತುಮಕೂರು : ಯಲ್ಲಾಪುರದ ಶ್ರೀವನಿತಾ ವಿದ್ಯಾ ಕೇಂದ್ರ ಪ್ರೌಢಶಾಲೆಗೆ 2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.

ಶ್ರೀವನಿತಾ ವಿದ್ಯಾ ಕೇಂದ್ರದ ಶಾಲೆಯಲ್ಲಿ ಇದೇ ಪ್ರಥಮ ಬಾರಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅವಕಾಶ ಸಿಕ್ಕಿದ್ದು, ಮೊದಲ ವರ್ಷದಲ್ಲಿಯೇ ಶಾಲೆಗೆ ಶೇಕಡ 100%ರಷ್ಟು ಫಲಿತಾಂಶ ಲಭಿಸಿದ್ದು ಇದರಲ್ಲಿ ವಿದ್ಯಾರ್ಥಿ ಭರತ್.ಕೆ. 617, ಶ್ರೀವಿಷ್ಣು ಶರ್ಮ.ವೈ. 615, ಉಜ್ವಲ.ಹೆಚ್. 609 ಮತ್ತು ಮೋಹಿತ್.ಎಸ್. 601 ಅಂಕಗಳನ್ನು ಗಳಿಸಿ ಟಾಪರ್ಗಳಾಗಿದ್ದಾರೆ, ಒಟ್ಟಾರೆ 5 ವಿದ್ಯಾರ್ಥಿಗಳು ಡಿಸ್ಟಿಕ್ಷನ್, 6 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಯಲ್ಲಿ ತೇರ್ಗಡೆಯಾಗಿದ್ದು, ಶ್ರೀವನಿತಾ ವಿದ್ಯಾ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಓದುತ್ತಿದ್ದ 13 ಮಕ್ಕಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇಕಡ 100%ರಷ್ಟು ಫಲಿತಾಂಶ ತರುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಶ್ರೀವನಿತಾ ವಿದ್ಯಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಹತ್ತನೇ ತರಗತಿ ಪ್ರಾರಂಭವಾಗಿದ್ದು, ಪ್ರಥಮ ಹಂತದಲ್ಲೇ ಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಂಸ್ಥೆಯ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದನೆಗಳನ್ನು ತಿಳಿಸಿರುತ್ತಾರೆ.