15ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 1,18,287 ಮತಗಳ ಭಾರೀ ಮುನ್ನಡೆ, ಗೆಲುವಿನತ್ತ ವಿ. ಸೋಮಣ್ಣ

ತುಮಕೂರು : 15ನೇ ಸುತ್ತು ಮತ ಎಣಿಕೆ ಮುಗಿದರೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ತೀವ್ರ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1,18,287 ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದಾರೆ.

ಆರಂಭಿಕ ಸುತ್ತಿನಿಂದಲೇ ಮುನ್ನಡೆಯನ್ನು ಕಾಯ್ದುಕೊಂಡು ಬಂದಿರುವ ವಿ.ಸೋಮಣ್ಣ ಗೆಲುವಿನತ್ತ ಸಾಗುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಆರಂಭಿಕ ಸುತ್ತಿನಿಂದಲೇ ಹಿನ್ನಡೆ ಪಡೆದುಕೊಂಡಿದ್ದು, 15ನೇ ಸುತ್ತಿನಲ್ಲಿ ವಿ.ಸೋಮಣ್ಣ 4,19,763 ಮತ ಪಡೆದರೆ, ಎಸ್.ಪಿ.ಮುದ್ದಹನುಮೇಗೌಡರು 3,18,287 ಮತ ಪಡೆದು 1,18,287 ಮತಗಳ ಹಿನ್ನಡೆಯನ್ನು ಪಡೆದುಕೊಂಡಿದ್ದಾರೆ.

15ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1 ಲಕ್ಷದ 18 ಸಾವಿರ ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದು, ಈಗಿನ ಲೆಕ್ಕಚಾರವನ್ನು ನೋಡಿದರೆ ಬಹುತೇಕ ಸೋಮಣ್ಣ ಗೆಲುವನ್ನು ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *