
ತುಮಕೂರು: ಆಡಿದ್ದೇ ಆಟ, ಹೂಡಿದ್ದೇ ಲಗ್ಗೆ ಎಂದು ಬಾಲ ಬಿಚ್ಚಿಕೊಂಡು ಮೆರೆಯುತ್ತಿದ್ದ ಪೊಲೀಸ್ ಇಲಾಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ.ಕೆ.ವಿ.ಅವರು ಬರೆ ಹಾಕಿ, ಮೂಗುದಾರ ಬಿಗಿಯುತ್ತಿರುವುದನ್ನು ಕಂಡು ಜಿಲ್ಲೆಯ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು ಬೆಚ್ಚಿ ಬಿದಿದ್ದಾರೆ.
ಪೊಲೀಸ್ ಠಾಣೆಗೆ ಬರುವ ದೂರುದಾರರಿಗೆ ದಮಿಕಿ ಹಾಕುವುದು, ಎಫ್‍ಐಆರ್ ಹಾಕದೆ ಅವರೇ ನ್ಯಾಯ ಪಂಚಾಯಿತಿ ಮಾಡಿ, ತಾನು ತಿಂದು ಮೇಕೆ ಗಡ್ಡಕ್ಕೆ ಒರೆಸಿದರು ಎಂಬಂತೆ ಮಾಡುತ್ತಿದ್ದ ಪೊಲೀಸರಿಗೆ ಈಗ ಕಾದ ಕಬ್ಬಿಣದ ಬರೆ ಎಳೆಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಿರುವುದರಿಂದ ಕೆಲ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರಂತೆ.
ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಮೂವರು ಪಿಎಸ್‍ಐಗಳು ಸೇರಿದಂತೆ ಐವರು ಪೊಲೀಸರನ್ನು ಜಿಲ್ಲಾ ಪೊಲೀಸ್, ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ತುರುವೇಕೆರೆ ಪಿ ಎಸ್ ಐಗಳಾದ ಗಣೇಶ್, ರಾಮಚಂದ್ರಯ್ಯ, ಹೆಡ್ ಕಾನ್‍ಸ್ಟೇಬಲ್ ರಘುನಂದನ್ ಅಮಾನತುಗೊಂಡಿದ್ದಾರೆ. ತುರುವೇಕೆರೆ ಪೊಲೀಸ್, ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಎಫ್‍ಐಆರ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಅಮಾನತುಗೊಳಿಸಲಾಗಿದೆ.
ಮಧುಗಿರಿ ತಾಲೂಕು ಬಡವನಹಳ್ಳಿ ಪೊಲೀಸ್, ಠಾಣೆಯ ಪಿಎಸ್‍ಐ ನಾಗರಾಜು, ಎಎಸ್‍ಐ ಸುರೇಶ್ ಅಮಾನತುಗೊಂಡಿದ್ದಾರೆ.
ಬಡವನಹಳ್ಳಿ ಪೊಲೀಸ್, ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ಮಾಡಿದ್ದ ಆರೋಪವಿತ್ತು. ಈ ಬಗ್ಗೆ ಬಡವನಹಳ್ಳಿ ಪೊಲೀಸ್, ಠಾಣೆಯಲ್ಲಿ ಸಂತ್ರಸ್ತರು ದೂರು ಸಂತ್ರಸ್ತರು ದೂರು ನೀಡಿದ್ದರು. ಆದರೇ ಎಫ್‍ಐಆರ್ ಮಾಡಿಕೊಳ್ಳದೆ ಪೆÇಲೀಸರು ನಿರ್ಲಕ್ಷ್ಯ ತೋರಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‍ಐ ಮತ್ತು ಎಎಸ್‍ಐ ಅವರನ್ನು ಅಮಾನತುಗೊಳಿಸಲಾಗಿದೆ.
ಪೆÇಲೀಸ್ ಇಲಾಖೆ ಶಾಖ್ ಒಂದೇ ದಿನ ಮೂವರು ಪಿಎಸ್‍ಐ, ಒಬ್ಬರು ಎಎಸ್‍ಐ, ಒಬ್ಬರು ಮುಖ್ಯಪೇದೆಯನ್ನು ಅಮಾನತು ಮಾಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ಸರಿಗೆ ಚುರುಕು ಮುಟ್ಟಿಸಿದ್ದಾರೆ. ಎಸ್.ಪಿ ನಡೆಗೆ ಪೊಲೀಸ್, ವಲಯ ಶಾಕ್ ಆಗಿದೆ. ಆದರೆ ತುಮಕೂರಿನ ಟೌನ್ ಹಾಲ್ ಸರ್ಕಲ್‍ನಲ್ಲಿ ಕಳ್ಳತನದ ವಿಚಾರಣೆ ನೆಪದಲ್ಲಿ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ ನಡೆಸಿರುವ ಪೊಲೀಸ್, ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕತ್ತಾ ಇದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.