ತುಮಕೂರು ಜಿಲ್ಲೆಯ ಹೆಗ್ಗರೆ ಗೇಟ್ ರಸ್ತೆ ಮೇಲ್ಸೇತುವೆ ಹಾಗೂ ಬಿಳಿಪಾಳ್ಯ ಗೇಟ್ ರಸ್ತೆ ಕೆಳಸೇತುವೆಗೆ ಸೇರಿ ಒಟ್ಟು 35.61 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಸೌತ್ ವೆಸ್ಟ್ರನ್ ರೈಲ್ವೆ ಇಲಾಖೆ ತಿಳಿಸಿದೆ.
ತುಮಕೂರು ಲೋಕಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಹೊಣೆಯನ್ನು ಹೊಂದಿರುವಂತ ಹಾಗೂ ಕ್ಷೇತ್ರದ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣರವರ ವಿಶೇಷ ಕಾಳಜಿಯಿಂದ ಒಟ್ಟು ರೂ 35.61 ಕೋಟಿ ರೂ ವೆಚ್ಚದಲ್ಲಿ ಈ ಕೆಳಗಿನ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಹೆಗ್ಗರೆ ಗೇಟ್ ರೈಲ್ವೆ ನಿಲ್ದಾಣ ರಸ್ತೆ ಮೇಲ್ಸೇತುವೆ ( ಎಲ್ ಸಿ ನಂ 44) ಕಾಮಗಾರಿಗೆ . ಅಂದಾಜು ಮೊತ್ತ – ರೂ 28.53 ಕೋಟಿ , ಬಿಳಿಪಾಳ್ಯ ಗೇಟ್ , ರಸ್ತೆ ಕೆಳಸೇತುವೆ (ಎಲ್ ಸಿ ನಂ 50) ಕಾಮಗಾರಿಗೆ ಅಂದಾಜು ಮೊತ್ತ – ರೂ 7.08 ಕೋಟಿ ಬಿಡುಗಡೆಯಾಗಿದೆ. ಈ ಮೇಲಿನ ಕಾಮಗಾರಿಯು ಸಂಪೂರ್ಣ (ಶೇ 100) ರೈಲ್ವೆ ವೆಚ್ಚದ ಅನುದಾನದಡಿಯಲ್ಲಿ ನಡೆಯಲಿದೆ.
ಮಾನ್ಯ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣರವರು ಈಗಾಗಲೆ ಸರಿ ಸುಮಾರು ರೂ 440 ಕೋಟಿ ಯೋಜನಾ ಮೊತ್ತವನ್ನು ROB , RUB ಅಭಿವೃದ್ಧಿಗೆ ತಮ್ಮ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ದೊರಕಿಸಿ ಕೊಟ್ಟಿದ್ದಾರೆ.
ತುಮಕೂರು ಅಭಿವೃದ್ಧಿಗೆ ಸಹಕರಿಸಿದ ಪ್ರಧಾನಿ ಮೋದಿಯವರಿಗೆ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ರವರಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ಸೋಮಣ್ಣನವರು ತಮ್ಮ ಲೋಕಸಭಾ ಕ್ಷೇ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.