ತುಮಕೂರು : ಮೂಗಿನಲ್ಲಿ ಹುಣಸೆ ಬೀಜ ಸಿಕ್ಕಿಕೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ 5ವರ್ಷದ ಬಾಲಕಿಯೊಬ್ಬಳಿಗೆ ತುಮಕೂರಿನ ಎಸ್.ಎಸ್.ಪುರಂ 3ನೇ ಕ್ರಾಸ್‍ನ ಗಾಣದಾಳ್ ಕಿವಿ, ಮೂಗು, ಗಂಟಲು ಮತ್ತು ದಂತ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ.

ಕೊರಟಗೆರೆ ತಾಲ್ಲೂಕಿನ 5 ವರ್ಷದ ಬಾಲಕಿಗೆ ತನ್ಮಯ್ (ಹೆಸರು ಬದಲಾಯಿಸಲಾಗಿದೆ) ಸುಮಾರು ಎರಡೂವರೆ ತಿಂಗಳುಗಳಿಂದ ಬಾಲಕಿಗೆ ನೆಗಡಿ, ಉಸಿರಾಟ, ರಾತ್ರಿ-ಸಮಯದಲ್ಲಿ ಗೊರ-ಗೊರದಿಂದ ಬಳಲುತ್ತಿದ್ದವಳು. ಈ ಬಾಲಕಿಗೆ ತುಮಕೂರಿನ ಸುತ್ತಮುತ್ತನ ಖಾಸಗಿ ಆಸ್ಪತ್ರೆ ಹಾಗೂ ಆಯುರ್ವೇದ ಚಿಕಿತ್ಸೆ ನೀಡಿದರೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಆನಂತರ ತುಮಕೂರಿನ ಗಾಣದಾಳ್ ಕಿವಿ, ಮೂಗು, ಗಂಟಲು ಮತ್ತು ದಂತ ಆಸ್ಪತ್ರೆಯ ವೈದ್ಯರಾದ ಡಾ.ಮುನೀಶ್ವರ ಜಿ.ಬಿ.ರವರು ಆಸ್ಪತ್ರೆಗೆ ತೋರಿಸಿದಾಗ ಎಂಡೋಸ್ಕೋಪಿಯಿಂದ “ಮೂಗಿನಲ್ಲಿ ಹುಣಸೆ ಬೀಜ ಹೊಂದಿರುವುದು ತಿಳಿಯಿತು.
ಬಾಲಕಿಗೆ ವೈದ್ಯರು ಪರೀಕ್ಷಿಸಿದ ನಂತರ ಅವÀರಿಗೆ ಬೇಕಾದ ಪರೀಕ್ಷೆಗಳಾದ ಎಕ್ಸ್ ರೇ, ಸಿ.ಟಿ.ಸ್ಕಾನ್, ಎಂಡೋಸ್ಕೋಪಿ ಮಾಡಲಾಗಿತ್ತು. ಕಡಿಮೆ ಸಮಯದಲ್ಲಿ ನುರಿತ ವೈದ್ಯರ ಸಹಾಯದಿಂದ ಮೂಗಿನಲ್ಲಿ ಸಿಕ್ಕಿಕೊಂಡಿದ್ದ ಹುಣಸೆ ಬೀಜ ತೆಗೆದಿದ್ದಾರೆ. ಚಿಕಿತ್ಸೆಯಲ್ಲಿ ಹಾರೈಕೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ, ಸದರಿ ಯಶಸ್ವಿ ಆಪರೇಷನ್ ಮೊದಲು ರೋಗಿಯ ಕುಟುಂಬಸ್ಥರಿಗೆ ಶಸ್ತ್ರಚಿಕಿತ್ಸೆಗೆ ಧೈರ್ಯ ತುಂಬಿದ ಗಾಣದಾಳ್ ಕಿವಿ, ಮೂಗು, ಗಂಟಲು ಮತ್ತು ದಂತ ಆಸ್ಪತ್ರೆಯ ವೈದ್ಯರಾದ ಡಾ.ಮುನೀಶ್ವರ ಜಿ.ಬಿ.ರವರ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದರೆ, ಲಕ್ಷಾಂತರ ರೂ. ಖರ್ಚು ಮಾಡಬೇಕಾಗುತ್ತಿತ್ತು, ಆದರೆ ತುಮಕೂರಿನ ಎಸ್.ಎಸ್.ಪುರಂ 3ನೇ ಕ್ರಾಸ್‍ನ ಗಾಣದಾಳ್ ಕಿವಿ, ಮೂಗು, ಗಂಟಲು ಮತ್ತು ದಂತ ಆಸ್ಪತ್ರೆಗೆ ಬಂದಿರುವುದರಿಂದ ಅತಿ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯಾಗಿದೆ. ಗಾಣದಾಳ್ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ಸಾಧನೆಯನ್ನು ಸಾಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಮಕ್ಕಳು ಕಡಲೆಬೀಜ, ಹುಣಸೆಬೀಜ, ಶೆಲ್, ಕಲ್ಲು, ರಬ್ಬರ್, ಬಳಪ ಮೂಗಿನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಪೆÇೀಷಕರು ಮಕ್ಕಳನ್ನು ಮುತ್ತಮರ್ಜಿಯಿಂದ ನೋಡಿಕೊಳ್ಳಬೇಕು. ಪೆÇೀಷಕರಿಗೆ ಅನುಮಾನ ಬಂದರೆ ಕಿವಿ, ಮೂಗು, ಗಂಟಲು ಆಸ್ಪತ್ರೆಗೆ ತಕ್ಷಣ ತೋರಿಸುವಂತೆ ಎಂದು ಡಾ. ಮುನೀಶ್ವರ ಜಿ.ಬಿ.ರವರು ತಿಳಿಸಿದ್ದಾರೆ.