ಕುಲಾಂತರಿ ಬೀಜ ರಾಷ್ಟ್ರೀಯ ನೀತಿಗೆ ವಿರೋಧ-ಸೆ.29ರಿಂದ 4ದಿನ ಸತ್ಯಾಗ್ರಹ

ತುಮಕೂರು:ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಹಿಂದೆ ಸರಿಯಬೇಕು.ರಾಷ್ಟ್ರೀಯ ನೀತಿ ರೂಪಿಸುವ ವೇಳೆ ರೈತರು, ಕೃಷಿತಜ್ಞರು,ರೈತಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ನೀತಿ ರೂಪಿಸುವಂತೆ ಒತ್ತಾಯಿಸಿ 2024ರ ಸೆಪ್ಟಂಬರ್ 29ರಿಂದ ಅಕ್ಟೋಬರ್ 02ರವರಗೆ ನಾಲ್ಕು ದಿನಗಳ ಕಾಲ ದೊಡ್ಡಹೊಸೂರು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನಿ ಡಾ.ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಬಿ.ಟಿ.ಹತ್ತಿ ಬಿತ್ತನೆಯಿಂದ ಕರ್ನಾಟಕದ ಹತ್ತಿಬೆಳೆಯವ ಪ್ರದೇಶಗಳ ಮೇಲಾದ ದುಷ್ಪರಿಣಾಮಗಳು ಚಿತ್ರಣ್ಣ ನಮ್ಮ ಮುಂದಿದೆ.20 ವರ್ಷಗಳಲ್ಲಿ ಮಣ್ಣಿನ ಫಲವತ್ತತೆಯ ಜೊತೆಗೆ,ಜೀವ ವೈವಿದ್ಯೆತೆ ಗಳನ್ನು ಕಳೆಕೊಂಡಿದ್ದೇವೆ.ಅದೇ ಪರಿಸ್ಥಿತಿ ರಾಜ್ಯದ ಇತರೆ ಭಾಗಗಗಳಲ್ಲಿಯೂ ತಲೆದೊರದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ “ದೊಡ್ಡ ಹೊಸೂರು” ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೇಯರ್ಸ್ ಕಂಪನಿ ಮತ್ತು ಬಿಲ್‍ಗೇಟ್ಸ್ ಪೌಂಢೇಷನ್ ವತಿಯಿಂದ ಹಮ್ಮಿಕೊಂಡಿರುವ ಕೆಲಸ ಕಾರ್ಯಕ್ರಮಗಳ ಒಕ್ಕೂಟ ಸರಕಾರ ಕುಲಾಂತರಿ ತಳಿಗಳ ಬೆಳೆಗಳನ್ನು ನಮ್ಮ ದೇಶದಲ್ಲಿ ಜಾರಿಗೆ ತರಲು ಹೊರಟಿದೆ.ಒಂದು ವೇಳೆ ಇದು ಜಾರಿಗೆ ಬಂದರೆ,ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬೆಳೆಯುವ ವಿವಿಧ ಬೆಳೆಗಳು ಕೈಬಿಟ್ಟು ಹೋಗಲಿದ್ದು,ಕಂಪನಿಗಳು ನೀಡುವ ಬೆಳೆಗಳನ್ನು ಮಾತ್ರ ಬೆಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.ಇದು ದೊಡ್ಡ ಬೀಜದ ಕಂಪನಿಗಳಿಗೆ ಲಾಭ ಮಾಡಿ ಕೊಟ್ಟರೆ,ರೈತರಿಗೆ ತುಂಬ ನಷ್ಟವಾಗಲಿದೆ.ವಿವಿಧೆತೆ ಹೋಗಿ,ಬೇಯರ್ಸ್, ಮಾನ್ಸೆಂಟೋ ನಂತಹ ಬೀಜ ಕಂಪನಿಗಳ ಮುಂದೆ ರೈತರು ಮಂಡಿಯೂರಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಲಿದೆ.ಅಲ್ಲದೆ ಕುಲಾಂತರಿ ಬೀಜಗಳ ಹೆಚ್ಚು ಬಳಕೆಯಿಂದ ಭೂಮಿ ಬರುಡಾಗಿ,ರೈತ ಸಂಕಷ್ಟಕ್ಕೆ ಸಿಲುಕುವುದಲ್ಲದೆ,ಆಹಾರ ಪಧಾರ್ಥಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಹಾಗಾಗಿ ಸರಕಾರ,ಜನಪ್ರತಿನಿಗಳು ಹಾಗೂ ರೈತರನ್ನು ಎಚ್ಚರಿಸುವ ಸಲುವಾಗಿ ಸೆಪ್ಟಂಬರ್ 29,30,ಅಕ್ಟೋಬರ್ 01 ಮತ್ತು 02ರಂದು ನಾಲ್ಕು ದಿನಗಳ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಡಾ.ಮಂಜುನಾಥ್ ತಿಳಿಸಿದರು.

ದೊಡ್ಡ ಹೊಸೂರಿನಲ್ಲಿ 2024ರ ಸೆಪ್ಟಂಬರ್ 29ರಿಂದ ಅಕ್ಟೋಬರ್ 02ರವರಗೆ ನಡೆಯುವ ದೊಡ್ಡ ಹೊಸೂರು ಸತ್ಯಾಗ್ರಹಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮೀಜಿಗಳು ಚಾಲನೆ ನೀಡುವರು.ರಾಜ್ಯಸರಕಾರದ ಗೃಹ, ಕೃಷಿ, ಇತರೆ ಇಲಾಖೆಗಳ ಮಂತ್ರಿಗಳು,ಶಾಸಕರು, ಸಂಸದರು,ಹಿರಿಯ ಕೃಷಿ ವಿಜ್ಞಾನಿಗಳು, ರೈತ ಹೋರಾಟಗಾರರು ಆಗಮಿಸಲಿ ದ್ದಾರೆ.ಕುಲಾಂತರಿ ನೀತಿಯನ್ನು ಒಕ್ಕೂಟ ಸರಕಾರ ಹಿಂಪಡೆಯಬೇಕು, ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯ ಎಂದು ಘೋಷಿಸಬೇಕು, ಭಾರತೀಯ ಕೃಷಿ ಅನುಸಂದಾನ ಪರಿಷತ್ ಮತ್ತು ಬೇಯರ್ ಕಂಪನಿ ನಡುವೆ ಆಗಿರುವ ಒಪ್ಪಂದವನ್ನು ರದ್ದು ಪಡಿಸಬೇಕು.ದೇಶ ಒಳಗೆ ಮತ್ತು ಹೊರಗೆ ಕುಲಾಂತರಿ ಸಂಬಂಧಿತ ತಂತ್ರಜ್ಞಾನಕ್ಕೆ ಧನ ಸಹಾಯಕವನ್ನು ನಿಲ್ಲಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.

ಕಿಸಾನ್ ಸಂಯುಕ್ತ ಹೋರಾಟದ ಸಿ.ಯತಿರಾಜು ಮಾತನಾಡಿ,ಕೃಷಿ ಎಂಬುದು ರಾಜ್ಯವಲಯಕ್ಕೆ ಸಂಬಂಧಿಸಿದ ವಿಷಯ ವಾಗಿದೆ.ಆದರೆ ಒಕ್ಕೂಟ ಸರಕಾರ ದೊಡ್ಡ ದೊಡ್ಡ ಉದ್ದಿಮೆಗಳಿಗೆ ಭಾರತ ಶೇ70 ಜನರ ದುಡಿಮೆಯ ಮೂಲವಾಗಿರುವ ಕೃಷಿಯನ್ನು ವಹಿಸಲು ತರಾತುರಿಯಲ್ಲಿ ಕೆಲಸ ಮಾಡುತ್ತಿದೆ.ಕುಲಾಂತರಿ ಬೀಜಗಳ ರಾಷ್ಟ್ರೀಯ ನೀತಿ ರೂಪಿಸುವ ವೇಳೆ ರೈತರಾಗಲಿ, ಕೃಷಿ ತಜ್ಞರೊಂದಿಗೆ ಆಗಲಿ ಚರ್ಚೆ ಮಾಡದೆ, ಸುಪ್ರಿಂಕೋರ್ಟು ನಿರ್ದೇಶನದಂತೆ ನಿಯಮ ರೂಪಿಸಿ, ಜಾರಿಗೆ ತರಲು ಹೊರಟಿದೆ.ಸರಕಾರಗಳು ಮತ್ತು ಬಹುರಾಷ್ಟ್ರೀಯ ಬೀಜ ಕಂಪನಿಗಳು ನೀಡುವ ರಿಯಾಯತಿಗಳಿಗೆ ಮಾರು ಹೋಗಿ ಒಮ್ಮೆ ಈ ಕುಲಾಂತರಿ ಬೀಜ ಖರೀದಿಗೆ ಮುಂದಾದರೆ, ಜೇಡನ ಬಲಗೆ ಸಿಕ್ಕಿಕೊಂಡ ಹುಳುವಿನಂತಾಗುತ್ತದೆ ರೈತನ ಸ್ಥಿತಿ. ಹಾಗಾಗಿ ಕುಲಾಂತರ ಬೀಜ ರಾಷ್ಟ್ರೀಯ ನೀತಿಗೆ ವಿರೋಧ ವ್ಯಕ್ತಪಡಿಸಿ, ದೊಡ್ಡ ಹೊಸೂರು ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುತ್ತಿದೆ.ಈ ಹಿಂದೆಯೇ ಪ್ರೊ.ನಂಜುಂಡಸ್ವಾಮಿ ನೇತೃತ್ವದಲ್ಲಿ ಇಂತಹ ಹೋರಾಟಗಳನ್ನು ನಡೆಸಲಾಗಿತ್ತು. ಈಗ ಮತ್ತೊಮ್ಮೆ ಅನಿವಾರ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಮಾನವ ಸಂತತಿಯ ಮೇಲೆ ದುಷ್ಪರಿಣಾಮ ಬೀರುವಂತಹ ಕುಲಾಂತರಿ ತಳಿಗಳನ್ನು ನಿಲ್ಲಿಸಬೇಕೆಂಬುದು ಹತ್ತಾರು ವರ್ಷಗಳ ಬೇಡಿಕೆ. ಆದರೆ ಸುಪ್ರೀಂಕೋರ್ಟು ಮೂಲಕ ಒಕ್ಕೂಟ ಸರಕಾರ ನಮ್ಮ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಸವಾರಿ ಮಾಡುವ ಅವಕಾಶವನ್ನು ಈ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿ ಮೂಲಕ ಮಾಡಲು ಹೊರಟಿದೆ. ಇದಕ್ಕೆ ದೇಶದ ಎಲ್ಲಾ ರೈತರ ವಿರೋಧವಿದೆ.ಹಾಗಾಗಿ ದೊಡ್ಡ ಹೊಸೂರು ಸತ್ಯಾಗ್ರಹದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯರು ಪಾಲ್ಗೊಳ್ಳಲಿದ್ದಾರೆ. ನಾವು ಸಹ ನಾಲ್ಕು ದಿನಗಳ ಕಾಲ ಈ ಹೋರಾಟದಲ್ಲಿ ನಮ್ಮ ಪದಾಧಿಕಾರಿಗಳೊಂದಿಗೆ ಭಾಗವಹಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್, ಎಐಕೆಕೆಎಂಎಸ್‍ನ ಕಂಬೇಗೌಡ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *