ಸೆ.29: ಜಿ.ಎಂ.ಶ್ರೀನಿವಾಸಯ್ಯರವರಿಗೆ ನುಡಿನಮನ ಕಾರ್ಯಕ್ರಮ

ತುಮಕೂರು : ತುಮಕೂರಿನ ಸಮತಾ ಬಳಗದ ವತಿಯಿಂದ ನಿವೃತ್ತ ಪ್ರಾಂಶುಪಾಲ ಮತ್ತು ಪ್ರಗತಿಪರ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರ ನುಡಿನಮನ ಕಾರ್ಯಕ್ರಮವನ್ನು ಸೆಪ್ಟಂಬರ್ 29ರಂದು ಬೆಳಗ್ಗೆ 10.30ಕ್ಕೆ ತುಮಕೂರಿನ ಟೌನ್ ಹಾಲ್ ವೃತ್ತದ ಐಎಂಎ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಜನಪರ ಚಿಂತಕ ಪ್ರೊ. ಕೆ. ದೊರೈರಾಜು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಕೀಲ ಹಾಗೂ ಮಾಜಿ ಅಡ್ಡೋಕೇಟ್ ಜನರಲ್ ರವಿವರ್ಮಕುಮಾರ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಭಾಗವಹಿಸುವರು.
ಜೊತೆಗೆ ಕವಿ ನಾಗರಾಜ್ ಶೆಟ್ಟಿ, ಲೇಖಕಿ ಬಾ.ಹ. ರಮಾಕುಮಾರಿ, ರಂಗಕರ್ಮಿ ಟಿ. ಎಸ್. ಹನುಮಂತೇಗೌಡ, ವೈ. ಕೆ. ಬಾಲಕೃಷ್ಣಪ್ಪ, ಡಾ. ಅರುಂಧತಿ, ಸೈಯದ್ ಅಹಮದ್ ಖಾನ್, ವಿರೂಪಾಕ್ಷ ಡ್ಯಾಗೇರಹಳ್ಳಿ, ರವಿಕುಮಾರ್ ನೀಹ, ಸುಪ್ರೀಂ ಸುಬ್ರಹ್ಮಣ್ಯ, ಸಿ.ಕೆ.ಉಮಾಪತಿ, ಡಿ.ಟಿ. ವೆಂಕಟೇಶ್ ನುಡಿನಮನ ಸಲ್ಲಿಸುವವರು.

ಡಾ. ಬಸವರಾಜು ಪ್ರಾಸ್ತವಿಕ ಮಾತನಾಡಲಿದ್ದು, ವಕೀಲ ಎಚ್.ವಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸುವರು.

Leave a Reply

Your email address will not be published. Required fields are marked *