ತುಮಕೂರು : ಅದ್ಧೂರಿ ದಸರಾಕ್ಕೆ ತುಮಕೂರು ಸಿ ಗಾರಗೊಂಡು ಮದುವೆ ಮನೆಯಂತೆ ಅಲಂಕಾರಗೊಂಡಿರುವ ತುಮಕೂರು ಪ್ರಮುಖ ರಸ್ತೆಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ.
ದಸರಾ ಪ್ರಯುಕ್ತ ಎಚ್ಎಎಲ್ನಿಂದ ಎರಡು ಹೆಲಿಕಾಪ್ಟರ್ಗಳನ್ನು ತರಿಸಲಾಗಿದ್ದು, ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಜನತೆ ಬೆರಗುಗಣ್ಣಿನಿಂದ ಹೆಲಿಕಾಪ್ಟರ್ಗಳನ್ನು ನೋಡಿ ಆನಂದಿಸುತ್ತಿದ್ದಾರೆ, ಹೆಲಿಕಾಪ್ಟರ್ ಪ್ರದರ್ಶನದ ಪಕ್ಕದಲ್ಲೇ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸಂಗೀತ ಸಂಜೆ ನಡೆಸಲು ಅಮರಶಿಲ್ಪಿ ಜಕಣಾಚಾರಿ ಮಹಾ ವೇದಿಕೆಯನ್ನು ಹಂಪಿ ಮಂಟಪದ ರೀತಿಯಲ್ಲಿ ಸಿದ್ದಪಡಿಸಲಾಗಿದ್ದು ಕಣ್ಮನ ಸೆಳೆಯುತ್ತಾ ಇದೆ, ಇದರ ಪಕ್ಕದಲ್ಲೇ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಮಾದರಿಯಲ್ಲಿ ದಸರಾ ಪೂಜಾ ಕಾರ್ಯಕ್ರಗಳ, ನಾಡದೇವತೆ ಪ್ರತಿಷ್ಠಾಪನೆ ನೆರವೇರಸಿಲಾಗಿದ್ದು, ಕಳೆದ 7 ದಿನಗಳಿಂದ ವಿವಿಧ ಧಾರ್ಮಿಕ ಪೂಜೆಗಳು ನಡೆಯುತ್ತಾ ಇವೆ.
ಡಾ.ಜಿ.ಪರಮೇಶ್ವರ್ ಅವರ ಇಚ್ಛಾಶಕ್ತಿಯಿಂದ ಈ ಬಾರಿ ತುಮಕೂರುಇನಲ್ಲಿ ಮೈಸೂರಿನಂತಹ ಮಿನಿ ದಸರಾ ಆಚರಣೆ ನಡೆಯುತ್ತಿದ್ದು, ಇಂದು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ.ಸಿಇಓ ಜಿ.ಪ್ರಭು ಅವರುಗಳು ದಸರಾ ಉದ್ಘಾಟನೆಗೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ.
ಅಕ್ಟೋಬರ್ 12ರಂದು ನಡೆಯುವ ದಸರಾ ಮೆರವಣಿಗೆಯಲ್ಲಿ ವಿಂಟೇಜ್ ಕಾರು ಮೇಳ ನಡೆಯಲಿದ್ದು ತುಮಕೂರಿನ ಜನತೆಯನ್ನು ಈ ಬಾರಿಯ ದಸರಾ ಮುದಗೊಳಿಸಲಿದೆ. ಮೊದಲ ಬಾರಿಗೆ ತುಮಕೂರಿನಲ್ಲಿ ಆನೆಯ ಮೇಲೆ ನಾಡದೇವತೆಯನ್ನು ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಿರುವುದರಿಂದ ತುಮಕೂರಿಗೆ ಒಂದು ಮೆರಗು ತಂದಿದ್ದು, ಜಿಲ್ಲಾಡಳಿತ ದಸರಾ ಯಶಸಿಗೆ ಟೊಂಕ ಕಟ್ಟಿ ನಿಂತಿದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವಕ್ಕೆ ಮುಖ್ಯದ್ವಾರ, ವೇದಿಕೆಗಳು ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 11 ಮತ್ತು 12ರಂದು ನಡೆಯುವ ಜಂಬೂಸವಾರಿ ಮೆರವಣಿಗೆ ಸೇರಿದಂತೆ ವೇದಿಕೆ ಕಾರ್ಯಕ್ರಮಗಳಲ್ಲಿ ಕುಟುಂಬ ಸಮೇತ ಪಾಲ್ಗೊಳ್ಳುವಂತೆ ಜಿಲ್ಲೆಯ ಜನತೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಶಾರದಾ ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಮಾತನಾಡಿದ ಅವರು, ದಸರಾ ಉತ್ಸವದ 9ನೇ ದಿನವಾದ ಅಕ್ಟೋಬರ್ 11ರಂದು ಜಿಲ್ಲೆಯ ಜನರ ಮನಸ್ಸನ್ನು ರಂಜಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದು, ಖ್ಯಾತ ಗಾಯಕ ಗುರು ಕಿರಣ್ ಮತ್ತು ಕಂಬದ ರಂಗಯ್ಯ ಅವರ ತಂಡಗಳಿಂದ ಸಂಗೀತ ರಸಸಂಜೆ, ಕುಸ್ತಿ, ಆಕರ್ಷಕ ಲೇಸರ್ ಶೋ ಕಾರ್ಯಕ್ರಮವಲ್ಲದೆ, ಅ.12ರಂದು ಮಧ್ಯಾಹ್ನ 1 ಗಂಟೆಯಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಆನೆ ಎಲ್ಲರ ಗಮನ ಸೆಳೆಯಲಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪೆÇಲೀಸ್ ಇಲಾಖೆಯ ಅಶ್ವದಳ, ಜಾನಪದ ಕಲಾ ತಂಡಗಳು, ವಿಂಟೇಜ್ ಕಾರ್ಗಳು, ಪೆÇಲೀಸ್ ಹಾಗೂ ಎನ್.ಸಿ.ಸಿ ಬ್ಯಾಂಡ್, ಹಳ್ಳಿಕಾರ್ ಎತ್ತುಗಳು ಸೇರಿದಂತೆ ಅಲಂಕೃತಗೊಂಡ ಟ್ರ್ಯಾಕ್ಟರ್ನಲ್ಲಿ ಜಿಲ್ಲೆಯ 70 ದೇವರುಗಳು ಇರಲಿವೆ ಎಂದು ತಿಳಿಸಿದರು.