ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್. ರವಿ ನಿಧನ

ತುಮಕೂರು:ಹೊಟೇಲ್ ಉದ್ಯಮಿ ಹಾಗು ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಕೆ.ಜಿ.ಎಲ್.ರವಿ(57)  ಬುಧವಾರ ಮಧ್ಯಾಹ್ನ 12 ರ ಹೊತ್ತಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಕ್ಷವನ್ನು ಬಲವಾಗಿ ಕಟ್ಟುವ ಉದ್ದೇಶದಿಂದ ಇತ್ತೀಚೆಗೆ ಜಿಲ್ಲಾ ಜೆಡಿಯು ಕಚೇರಿಯನ್ನು ಸಹ ಕರಿಬಸವೇಶ್ವರ ವೃತ್ತದಲ್ಲಿ ತೆರೆದಿದ್ದರು. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜೆಡಿಯು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು,ಜೆ.ಹೆಚ್.ಪಟೇಲ್, ಎಂ.ಪಿ.ನಾಡಗೌಡ,ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ.ಪಟೇಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಮೂಲತಃ ತುಮಕೂರಿನವರೇ ಆದ ಕೆಜಿಎಲ್ ರವಿ ಅವರು ನಗರದ ಅರಳೇಪೇಟೆಯಲ್ಲಿ ವಾಸವಾಸವಾಗಿದ್ದ ಹೊರಪೇಟೆ ಸರ್ಕಲ್ ನಿಂದ ಕೆ.ಆರ್ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಚಂದ್ರಮೌಳೇಶ್ವರ ಹೆಸರಿನ ಹೋಟೆಲ್ ಒಂದನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ನಡೆಸುತ್ತಿದ್ದರು.ಒರ್ವ ಗಂಡು ಮತ್ತು ಹೆಣ್ಣು ಮಕ್ಕಳಿದ್ದು,ಹೆಂಡತಿ,ಸಹೋದರರು, ಬಂಧು, ಬಳಗವನ್ನು ಆಗಲಿದ್ದಾರೆ.ಇವರ ಅಂತ್ಯಕ್ರಿಯೆ ಅಕ್ಟೋಬರ್ 24ರ ಗುರುವಾರ ಬೆಳಗ್ಗೆ ಕುಣಿಗಲ್ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದೆ.

ಸಂತಾಪ

ಆತ್ಮೀಯರು, ಗೆಳೆಯರು ಆಗಿದ್ದ ಕೆಜಿಎಲ್ ರವಿ ನಿಧನ ಅಘಾತವನ್ನುಂಟು ಮಾಡಿದ್ದು, ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಂತಾಗಿದೆ ಎಂದು ಮೈತ್ರಿನ್ಯೂಸ್ ಬಳಗ ದು:ಖ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ,  ಮೃತರ ಕುಟುಂಬ ವರ್ಗಕ್ಕೆ ದು:ಖ ತಡೆಯುವ ಶಕ್ತಿ ನೀಡಲೆಂದು ಮೈತ್ರಿನ್ಯೂಸ ಬಳಗ ಬುದ್ಧನಲ್ಲಿ ಪ್ರಾರ್ಥಿಸಿದೆ.

ReplyForwardAdd reaction

Leave a Reply

Your email address will not be published. Required fields are marked *