ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣ ವಿಚಾರ ಸಂಕಿರಣವನ್ನು ನವೆಂಬರ್ 4 ರ ಸೋಮವಾರ, ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರು ಉರಿಲಿಂಗಪೆದ್ದಿಗಳ ಮಠದ ಶ್ರೀಗಳಾದ ಜ್ಞಾನಪ್ರಕಾಶ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿಗಳು ಹಾಗೂ ಬಸವ ತತ್ವ ಚಿಂತಕರಾದ ರಂಜಾನ್ ದರ್ಗಾ ಉದ್ಘಾಟಿಸಲಿದ್ದಾರೆ.
ಬಸವ ಸಮಿತಿ, ಅಧ್ಯಕ್ಷರಾದ ಅರವಿಂದ ಜತ್ತಿ, ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ವೆಂಕಟೇಶ್ವರುಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ಧಲಿಂಗಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಪರಮೇಶ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಬಿ. ಪ್ರದೀಪ್‍ಕುಮಾರ್, ವೀರಶೈವ ಸಮಾಜ, ತುಮಕೂರು ನಗರ ಘಟಕದ ಅಧ್ಯಕ್ಷರಾದ ಟಿ.ಬಿ. ಶೇಖರ್, ಸಂಶೋಧಕರಾದ ಡಾ. ಬಿ. ನಂಜುಂಡಸ್ವಾಮಿ, ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಶಾಖೆ, ಅಧ್ಯಕ್ಷರು, ಶ್ರೀಮತಿ ಮಲ್ಲಿಕಾ ಬಸವರಾಜು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಎಂ.ಎಚ್. ನಾಗರಾಜು ಉಪಸ್ಥಿತರಿರುತ್ತಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
1ರ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಕುಲಪತಿಗಳಾದ ಪ್ರೊ. ಡಿ.ವಿ. ಪರಮಶಿವಮೂರ್ತಿಗಳು ಬಸವಣ್ಣ ಮತ್ತು ಕನ್ನಡ ಸಮುದಾಯ ಪ್ರಜ್ಞೆ ಈ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ.
ಹಿರಿಯ ವಿಮರ್ಶಕರಾದ ಡಾ. ಎಂ. ಎಸ್. ಆಶಾದೇವಿ ಶರಣರು ಮತ್ತು ಸ್ತ್ರೀ ಸಮಾನತೆಯ ಮಾನವೀಯ ನೆಲೆಗಳು ಈ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ. ಹಿರಿಯ ಲೇಖಕರಾದ ಬಾ.ಹ. ರಮಾಕುಮಾರಿ ಸಮನ್ವಯ ವಹಿಸಲಿದ್ದಾರೆ.
ಮಧ್ಯಾಹ್ನ 2:30ರ 2ನೇ ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಹಿರಿಯ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿಯವರು ಬಸವಣ್ಣನವರ ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪರಿಕಲ್ಪನೆ ಈ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ.
ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ, ಬೆಂಗಳೂರು, ಸಹಾಯಕ ಪ್ರಾಧ್ಯಾಪಕರಾದ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಬಸವಣ್ಣ ಮತ್ತು ಪ್ರಜಾಪ್ರಭುತ್ವದ ಆಶಯಗಳು ಈ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ಜಿ.ವಿ. ಆನಂದ ಮೂರ್ತಿ ಸಮನ್ವಯ ವಹಿಸಲಿದ್ದಾರೆ. ಸಂಜೆ 4.30 ರ ಸಮಾರೋಪ ಸಮಾರಂಭದ ದಿವ್ಯಾ ಸಾನಿಧ್ಯವನ್ನು ಬಾರ್ಕೂರು ಮಹಾಸಂಸ್ಥಾನ ಪೀಠಾಧಿಪತಿಗಳಾದ ಶ್ರೀ ಡಾ|| ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ವಹಿಸಲಿದ್ದಾರೆ. ಹಿರಿಯ ಕವಿಗಳು ಹಾಗೂ ಚಿಂತಕರಾದ ವಚನ ಚಳವಳಿ ಮರುಚಿಂತನೆ ವಿಷಯ ಪ್ರಸ್ತುತಿ ಹಾಗೂ ಸಮಾರೋಪ ನುಡಿಗಳನ್ನಾಡಲಿದ್ದಾರೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ಧಲಿಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಸದಸ್ಯ ಸಂಚಾಲಕರಾದ ಶ್ರೀಮತಿ ಸುಮಾ ಸತೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿ.ಹೆಚ್. ಮಹದೇವಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಎಸ್. ಯೋಗಾನಂದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಸಹ ಕಾರ್ಯದರ್ಶಿ ಕೆ.ಎಸ್. ತೇಜಸ್ವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಸಹ ಕಾರ್ಯದರ್ಶಿ ಡಾ. ಅಜಯ್‍ಕುಮಾರ್ ಉಪಸ್ಥಿತರಿರುತ್ತಾರೆ.