ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿಯಿಂದ ನ.26ರಂದು ಸಂವಿಧಾನ ದಿನಾಚರಣೆ

ತುಮಕೂರು : ಕರ್ನಾಟಕ ರಾಜ್ಯ ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿಯ ತುಮಕೂರು ಜಿಲ್ಲಾ ಶಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಸಂವಿಧಾನ ದಿನಾಚರಣೆಯನ್ನು ನವೆಂಬರ್ 26ರಂದು ಸಂಜೆ 5ಗಂಟೆಗೆ ರೈಲ್ವೆ ಸ್ಟೇಷನ್ ರಸ್ತೆಯ ಹೋಟೆಲ್ ಸಮೃದ್ಧಿ ಗ್ರಾö್ಯಂಡ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ  ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನಿಸಾ ಅವರು ಮಾಡಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿ ತುಮಕೂರು ಜಿಲ್ಲಾ ಶಾಖೆ ಅಧ್ಯಕ್ಷರಾದ ಡಾ.ವೈ.ಕೆ.ಬಾಲಕೃಷ್ಣಪ್ಪ ವಹಿಸಿಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷರಾದ ಡಿ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್, ಉಪಾಧ್ಯಕ್ಷರಾದ ಹೆಚ್.ಎಲ್.ಚಂದ್ರಕುಮಾರ್, ಕರ್ನಾಟಕ ರಾಜ್ಯ ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿ ತುಮಕೂರು ಜಿಲ್ಲಾ ಶಾಖೆಯ ಗೌರವ ಅಧ್ಯಕ್ಷರಾದ ವೈ.ಟಿ,ತಿಮ್ಮಯ್ಯ, ಹಿರಿಯ ಉಪಾಧ್ಯಕ್ಷ ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿ ತುಮಕೂರು ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ನಾಗರಾಜು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *