ತುಮಕೂರು: ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯ ಚೆಕ್ಕನಹಳ್ಳಿ ಬಳಿ ಉರುಳಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಮೃತರನ್ನು ಶುಬಾಳಿ ಸಿಂಗ್,ಪೂರ್ವಿ ಮತ್ತು
ಪ್ರಿಯಾಂಕ ಎಂದು ಗುರುತಿಸಲಸಗಿದೆ.
ಬೆಳಗಿನ ಜಾವ 4:45 ರಲ್ಲಿ ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ತುಮಕೂರು ಸಿದ್ದಗಂಗಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದ ಗಾಯಾಳುಗಳಿಗೆ ಕಳ್ಳಂಬೆಳ್ಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು.
(ಪೋಟೋ : ಮುರಳಿ)