ಇಂದಿನಿಂದ ಹಾಸ್ಯಬ್ರಹ್ಮ ನರಸಿಂಹರಾಜು ನಾಟಕೋತ್ಸವ

ಗುಬ್ಬಿ : ಪಟ್ಟಣದಲ್ಲಿರುವ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇದೇ ತಿಂಗಳ 6 ರಿಂದ ಮೂರು ದಿವಸಗಳ ಕಾಲ ಹಾಸ್ಯಬ್ರಹ್ಮ ನರಸಿಂಹರಾಜು ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಹಾಗೂ ಗುಬ್ಬಿ ವೀರಣ್ಣ ಟ್ರಸ್ಟ್ ನ ಖಜಾಂಚಿ ರಾಜೇಶ್ ಗುಬ್ಬಿ ತಿಳಿಸಿದ್ದಾರೆ.

ಡಿಸಂಬರ್ ತಿಂಗಳ 25 ರಿಂದ 29 ರವರೆಗೆ 5 ದಿನಗಳ ಕಾಲ ನರಸಿಂಹರಾಜು ಜನ್ಮ ಶತಮಾನೋತ್ಸವ ನಾಟಕೋತ್ಸವವನ್ನು ಕರ್ನಾಟಕ ನಾಟಕ ಅಕಾಡೆಮಿ ಮತ್ತು ಡಾ ಗುಬ್ಬಿ ವೀರಣ್ಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿತ್ತು, ಆದರೆ ಮಾಜಿ ಪ್ರಧಾನಿ “ಮನಮೋಹನ್‌ಸಿಂಗ್”ರವರ ನಿಧನದ ಕಾರಣದಿಂದಾಗಿ ನಾಟಕ ಪ್ರದರ್ಶನ ಮುಂದೂಡಲಾಗಿತ್ತು.

ಜ, 6 ಸೋಮವಾರ ದಂದು ಚನ್ನಪ್ಪ ಚನ್ನೇಗೌಡ ನಾಟಕ ಪ್ರದರ್ಶನವಿದೆ. ಈ ನಾಟಕದ ಸಭಾ ಕಾರ್ಯಕ್ರಮಕ್ಕೆ ಗುಬ್ಬಿ ವೀರಣ್ಣ ಟ್ರಸ್ಟ್ ನ ಸದಸ್ಯ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಅತಿಥಿಯಾಗಿ ನಾಟಕ ಆಕಾಡೆಮಿ ಸದಸ್ಯ ಟಿ.ಹೆಚ್. ಲವಕುಮಾರ್ ಆಗಮಿಸಲಿದ್ದಾರೆ.

ಜ, 7 ಮಂಗಳವಾರ ದಂದು ಗೌಡ ಮೆಚ್ಚಿದ ಹುಡುಗಿ ನಾಟಕ ಪ್ರದರ್ಶನವಿದೆ. ಅಂದು ವೇದಿಕೆಯಲ್ಲಿ ನರಸಿಂಹರಾಜು ಮೊಮ್ಮಗ ಅರವಿಂದ್ ಎಸ್.ಡಿ. ಆವಿನಾಶ್ ಎಸ್.ಡಿ. , ಗುಬ್ಬಿ ವೀರಣ್ಣ ಟ್ರಸ್ಟ್ ನ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಆಗಮಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯ ಜಿಪಿಓ ಚಂದ್ರು ಉಪಸ್ಥಿತರಿರುತ್ತಾರೆ.

ಜ,08 ಬುಧವಾರ ದಂದು ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರೋಪ ನುಡಿಯನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಆಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಚಲನಚಿತ್ರ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಆಗಮಿಸಲಿದ್ದಾರೆ. ಆಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ವಹಿಸಲಿದ್ದಾರೆ. ಸಂಜೆ ತಾಜ್ ಮಹಲ್ ಟೆಂಡರ್ ನಾಟಕ ಪ್ರದರ್ಶನವಿದೆ.

Leave a Reply

Your email address will not be published. Required fields are marked *