ತುಮಕೂರು : ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಜನವರಿ 11ರ ಶನಿವಾರ ಸಂಜೆ 4ಗಂಟೆಗೆ ಕನ್ನಡ ಭವನದಲ್ಲಿ ಗೀತಾ ವಸಂತರವರ ‘ಪ್ರಾಣಪಕ್ಷಿಯ ರೆಕ್ಕೆ’ ಕವನ ಸಂಕಲನ ಬಿಡುಗಡೆಯಾಗಲಿದೆ.
ಬಿಡುಗಡೆಯನ್ನು ಕವಯತ್ರಿ ಪ್ರತಿಭಾನಂದಕುಮಾರ್ ಮಾಡಲಿದ್ದು, ಅನುಸಂಧಾನಗಾರರಾಗಿ ನಟರಾಜ ಬೂದಾಳು, ಗೋವಿಂದರಾಜು ಎಂ.ಕಲ್ಲೂರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ವಹಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಲಿಂಗಪ್ಪ ಉಪಸ್ಥಿತರಿರುವರು.