ಸವಿತಾ ಸಮಾಜದ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾಗಿ ತುಮಕೂರಿನ ರಘುನಾಥ ಆಯ್ಕೆ

ತುಮಕೂರು : ಸವಿತಾ ಸಮಾಜದ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾಗಿ ತುಮಕೂರಿನ ರಘುನಾಥ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

2025ರ ಜನವರಿ 21ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಸವಿತಾ ಸಮಾಜದ ಸಂಸ್ಥಾಪಕರಾದ ಡಾ.ಎಂ.ಎಸ್.ಮುತ್ತುರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸವಿತಾ ಸಮಾಜದ ಮೀಸಲಾತಿ ಹೋರಾಟ ಸಮಿತಿ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಗೌರವಾಧ್ಯಕ್ಷರಾದ ಮಂಜುನಾಥ, ಕಾರ್ಯಾಧ್ಯಕ್ಷರಾದ ದೇವನಹಳ್ಳಿ ಮಂಜುನಾಥ, ತುಮಕೂರಿನ ವಿಶ್ವನಾಥ, ದಾವಣಗೆರೆಯ ಮಲ್ಲಿಕಾ ಸಿಂಹ, ಶ್ರವಣಬೆಳಗೋಳದ ಎಸ್.ವಿ.ಆನಂದ್, ಯಲ್ಲಾಪುರ ಶಾಂತರಾಜ್, ತುಮಕೂರು ಟಿವಿ ರಂಗನಾಥ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *