ತುಮಕೂರು: 2024 – 25 ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು ಇದೀಗ ಶಾಲಾ ಮಕ್ಕಳಿಗೆ ಪರೀಕ್ಷೆ ಬಿಸಿ ಕಾಡುತ್ತಿದೆ ಈ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯದಲ್ಲಿ ಎಸ್ ಎಸ್ ಐ ಟಿ ಕಾಲೇಜ್ ಕ್ಯಾಂಪಸ್ ನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಎಸ್‍ಎಸ್ ಎಲ್ ಸಿ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆಯ್ದ ವಿವಿಧ ಸರ್ಕಾರಿ ಶಾಲಾ ಶಿಕ್ಷಕರಿಂದ ರೇಡಿಯೋ ಸಿದ್ದಾರ್ಥ ಸಮುದಾಯ ಬಾನುಲಿ ಕೇಂದ್ರ 90.8ರಲ್ಲಿ ವಿಶೇಷ ಪೋನ್ ಇನ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ರೇಡಿಯೋ ಸಿದ್ಧಾರ್ಥ ಇವರ ಸಂಯುಕ್ತ ಆಶ್ರಯದಲ್ಲಿ ಮಾ.5 ಬುಧವಾರ ಬೆಳ್ಳಗೆ 10:30ಕ್ಕೆ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರೇಡಿಯೋ ಲಾಂಜ್ ನಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳೆ ಪರೀಕ್ಷೆಗೆ ಸಿದ್ಧರಾಗಿ ಎಂಬ ಪೋನ್ಇನ್ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಗಾರವನ್ನ ತುಮಕೂರು ಸಿಇಓ, ಜಿ ಪ್ರಭು ಅವರು ಉದ್ಘಾಟನೆ ಮಾಡಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಚೇತನ್ ಎಂ ಎನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ .
ಮುಖ್ಯ ಅತಿಥಿಗಳಾಗಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮನಮೋಹನ ಹೆಚ್ ಕೆ ಇವರು ಭಾಗವಹಿಸಲಿದ್ದಾರೆ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸರ್ಕಾರಿ ಪ್ರೌಢಶಾಲೆಯ ಲೋಕೇಶ್, ಮಸ್ಕಲ್ ಸರ್ಕಾರಿ ಪ್ರೌಢಶಾಲೆಯ ಶಶಿಕುಮಾರ್, ಚೇಳೂರು ಸರ್ಕಾರಿ ಫ್ರೌಡಶಾಲೆ ರಾಘವೇಂದ್ರ, ಹಿಂಡಸಗೇರೆ ಫ್ರೌಡಶಾಲೆಯ ವೀಣಾ ಜಿ.ಎಲ್ ಅವರು ಭಾಗವಹಿಸಲಿದ್ದಾರೆ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹಾಗೂ ರೇಡಿಯೋ ಸಿದ್ದಾರ್ಥ ನಿರ್ದೇಶಕರಾದ ಡಾ.ಬಿ.ಟಿ ಮುದ್ದೇಶ್ ಅವರು ಉಪಸ್ಥಿತಲಿರಲಿದ್ದಾರೆ.