ಏಪ್ರಿಲ್ 1ರಂದು ಮೂರ್ಖರ ದಿನಾಚರಣೆ

ತುಮಕೂರು : ನಗೆಮಲ್ಲಿಗೆ ಬಳಗ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏಪ್ರಿಲ್ 1ರಂದು ಸಂಜೆ 4ಗಂಟೆಗೆ 30ನೇ ವರ್ಷದ ಮೂರ್ಖರ ದಿನಾಚರಣೆಯನ್ನು ಅಮಾನಿಕೆರೆ ಎದುರಿನ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷತೆಯನ್ನು ನಗೆ ಬಳಗದ ಅಧ್ಯಕ್ಷರಾದ ಬಾ.ಹ.ರಮಾಕುಮಾರಿಯವರು ವಹಿಸಲಿದ್ದು, ಉದ್ಘಾಟನೆಯನ್ನು ತುಮಕೂರು ಸಂಸ್ಕಾರ ಭಾರತಿ ಅಧ್ಯಕ್ಷರಾದ ಬಿ.ಆರ್.ನಟರಾಜಶೆಟ್ಟಿ ಮಾಡಲಿದ್ದು, ಆಶಯ ನುಡಿಗಳನ್ನು ಸಂಸ್ಕøತ ಉಪನ್ಯಾಸಕರಾದ ವೆಂಕಟಾಚಲ.ಗೌ.ತಿ. ಆಡಲಿದ್ದಾರೆ, ಗೌ.ತಿ. ದತ್ತಿ ಪ್ರಶಸ್ತಿಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪನವರು ಪ್ರದಾನ ಮಾಡುವರು.

ಸಂಜೆ 4.30ಕ್ಕೆ ಹಾಸ್ಯ ಕವಿಗೋಷ್ಠಿಯನ್ನು ಲೇಖಕಿ ಬಿ.ಸಿ.ಶೈಲಾನಾಗರಾಜು ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಂಜೆ 5.15ಕ್ಕೆ ಹಾಸ್ಯ ರಸಾಯನ ಕಾರ್ಯಕ್ರಮದಲ್ಲಿ ಹರಟೆ ಖ್ಯಾತಿಯ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಸಾಹಿತಿ ಗಂಗಾವತಿ ಲಿಂಗಾರೆಡ್ಡಿ ಅವರು ಹಾಸ್ಯ ರಸಾಯನ ಉಣಬಡಿಸಲಿದ್ದು, ಅತಿಥಿಗಳಾಗಿ ತಮಿಳುನಾಡು ಕೊಯಮತ್ತೂರು ವಿಜಯ್ ಕಾರ್ಪೋರೇಷನ್ ನ ಸಿಇಓ ಬಿ.ಎಂ.ಮಂಜುನಾಥ ಭಾಗವಹಿಸಲಿದ್ದು, ಇಂಜಿನಿಯರ್ ಜಿ.ಎನ್.ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಈ ಸಂದರ್ಭದಲ್ಲಿ ಜಿ.ವಿ.ವಿ.ಶಾಸ್ತ್ರಿ, ಸಿ.ಎ.ಸೋಮೇಶ್ವರ ಗುಪ್ತ, ತು.ಮ.ಬಸವರಾಜು ಅವರುಗಳನ್ನು ಸನ್ಮಾನಿಸಲಾಗುವುದು. ಅಂದು ಬೆಳಿಗ್ಗೆ 10.30ಕ್ಕೆ ವ್ಯಂಗ್ಯಚಿತ್ರ ಕಲಾವಿದರ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸ¯

Leave a Reply

Your email address will not be published. Required fields are marked *