ತುಮಕೂರು:ಸಂಸದರಾಗಿ ಒಳ್ಳೆಯ ಆಡಳಿತ ನೀಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿರುವ ಸಿ.ಪಿ.ಮೂಡ್ಲಗಿರಿಯಪ್ಪ ಅವರ ರೀತಿಯಲ್ಲಿಯೇ ಅವರ ಪುತ್ರರಾದ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಸಿರಾ ಕ್ಷೇತ್ರದ ಭವಿಷ್ಯದ ನಾಯಕರಾಗಲಿದ್ದಾರೆÉ ಎಂದು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶಿರಾ ತಾಲೂಕು ಚಿರತೆಹಳ್ಳಿಯಲ್ಲಿ ಮಾಜಿ ಸಂಸದರಾದ ಸಿ.ಪಿ.ಮೂಡ್ಲಗಿರಿಯಪ್ಪ ಅವರ ತೋಟದಲ್ಲಿ ದಿವಂಗತರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಅವರ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಿ.ಟಿ.ಮೂಡ್ಲಗಿರಿಯಪ್ಪ ಸದಾ ಜನರ ಬಗ್ಗೆ ಆಲೋಚಿಸುವ ವ್ಯಕ್ತಿಯಾಗಿದ್ದರು.ಅವರು ಸಂಸದರಾಗಿದ್ದ ಕಾಲದಲ್ಲಿ ಸಿರಾ ತಾಲೂಕಿನ ಬೆಳೆವಣಿಗೆಯ ವೇಗ ಹೆಚ್ಚಿತ್ತು. ಅಧಿವೇಶನದ ಸಂದರ್ಭದಲ್ಲಿ ದೆಹಲಿಯಲ್ಲಿ ಇರುತ್ತಿದ್ದ ಅವರು, ಉಳಿದ ಅವಧಿಯಲ್ಲಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಪ್ರವಾಸ ಮಾಡಿ, ಜನಪರ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುತಿದ್ದ ವ್ಯಕ್ತಿ. ಅವರ ಪುತ್ರರಾದ ಡಾ.ರಾಜೇಶ್ಗೌಡ ವೃತ್ತಿಯಲ್ಲಿ ವೈದ್ಯರಾದರೂ , ಪ್ರವೃತ್ತಿಯಲ್ಲಿ ರಾಜಕಾರಣಿ, 2020ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ಶಾಸಕರಾಗಿಯೂ ಕೆಲಸ ಮಾಡಿದ್ದಾರೆ.ಅವರ ತಂದೆಯಂತೆಯೇ ಶಿರಾ ಕ್ಷೇತ್ರದ ಅಭಿವೃದ್ದಿ ಸದಾ ತುಡಿಯುವ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಶ್ರೀಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನದ ಶ್ರೀಶ್ರೀ ನಂಜವಧೂತ ಸ್ವಾಮೀಜಿಗಳು ಮೂಡಲಗಿರಿಯಪ್ಪ ನವರ ಪ್ರತಿಮೆ ಹಾಗೂ ಧರ್ಮಚಕ್ರವನ್ನು ಅನಾವರಣ ಮಾಡಿ,ಪುಣ್ಯಭೂಮಿಯನ್ನು ಶ್ಲಾಘಿಸಿ, ಮುಂದೆ ಉತ್ತಮ ಕಾರ್ಯಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅರುಣ್ ಪೂಜಾರ್, ಜಿ.ಪಂ.ಮಾಜಿ ಸದಸ್ಯರಾದ ಗುಜ್ಜಾರಪ್ಪ, ಶ್ರೀಮತಿ ವಿಶಾಲಾಕ್ಷಿ ಪ್ರಕಾಶ್ಗೌಡ, ರಂಗನಾಥಗೌಡ,ರೈತ ಸಂಘದ ಅಧ್ಯಕ್ಷರಾದ ಡಾ.ಮನೋಹರ್, ಒಕ್ಕಲಿಗರ ಸಂಘದ ನಿರ್ದೇಶಕರಾದ ಗೋವಿಂದರಾಜು, ಪ್ರಕಾಶಗೌಡ, ರಂಗನಾಥ್, ಶಶಿಧರಗೌಡ, ಡಾ.ಆ.ಒ.ಗೌಡ ಹಾಗೂ ಸಾವಿರಾರು ಮೂಡ್ಲಗಿರಿಯಪ್ಪ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.