“ಅಂತರ್ಯಾಮಿ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್

ತುಮಕೂರು: ನಗದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹಳೆ ವಿದ್ಯಾರ್ಥಿ ಪ್ರಣವ್ (ನವೀನ್ ಎನ್.ಜಿ.) ನಟನೆ ಮತ್ತು ನಿರ್ಮಾಣದ ಚಲನಚಿತ್ರ ‘“ಅಂತರ್ಯಾಮಿ” ಚಿತ್ರದ ಪೋಸ್ಟರ್ ನ್ನು ಗೃಹಸಚಿವ ಹಾಗೂ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಬಿಡುಗಡೆ ಮಾಡಿದ್ದಾರೆ.

ನಗರದ ಎಸ್‍ಎಸ್‍ಐಟಿ ಕ್ಯಾಂಪಸ್‍ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಅಂತರ್ಯಾಮಿ ಸಿನಿಮಾದ ನಾಯಕ ನಟ ನಮ್ಮ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ. ಜೊತೆಗೆ ಮತ್ತೋರ್ವ ಹಳೇ ವಿದ್ಯಾರ್ಥಿ ವಿನಯ್ ಕಾವ್ಯಕಾಂತಿ ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾದಲ್ಲಿ ಮಾಧ್ಯಮ ವಿದ್ಯಾರ್ಥಿಗಳು ಅಭಿನಯಿಸಿರುವುದು ಇನ್ನೂ ವಿಶೇಷ, ಈ ಅಂತರ್ಯಾಮಿ ಸಿನಿಮಾ ಅಭೂತ ಪೂರ್ವ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಇತ್ತೀಚಿನ ದಿನದಲ್ಲಿ ಸಾಮಾಜಿಕ ಮಾಧ್ಯಮಗಳ ಗೀಳು ಯುವ ಜನತೆಯನ್ನು ಅಪಾರವಾಗಿ ಕಾಡುತ್ತಿದೆ. ಚಿಕ್ಕ ಮಕ್ಕಳು ಇಂದು ಮೊಬೈಲ್ ವ್ಯಾಮೋಹಕ್ಕೆ ಬಿದ್ದು ತಮ್ಮ ಅಮೂಲ್ಯವಾದ ಬಾಲ್ಯದ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳು ಹಾಗೂ ಯುವಕರು ದಾರಿ ತಪ್ಪಿಸುವಂತಹ ಸಾಮಾಜಿಕ ಜಾಲತಾಣಗಳಿಂದ ಹೊರಬಂದು ತಮ್ಮ ಜೀವನವನ್ನು ಸುಂದರಾಗಿಸಿಕೊಳ್ಳಬೇಕು. ಈ ನೆಲಗಟ್ಟಿನಲ್ಲಿ ಸಿನಿಮಾವನ್ನು ನಿರ್ಮಾಣವನ್ನು ಮಾಡಲಾಗಿದೆ. ಈ ಸಿನಿಮಾ ಸಾಮಾಜಿಕ ಜಾಲತಾಣಗಳಿಂದ ಬಳಲುತ್ತಿರುವ ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಡಾ.ಜಿ.ಪರಮೇಶ್ವರ್ ಅವರು ಅಭಿಪ್ರಾಯಪಟ್ಟರು.

ಸಾಮಾಜಿಕ ಜಾಲತಾಣಗಳು ಜನರಮೇಲೆ ಅನೇಕ ರೀತಿಯಾದಂತಹ ಪರಿಣಾಮಗಳನ್ನು ಉಂಟುಮಾಡುತ್ತಿದೆ ಇದರಿಂದ ಯುವಜನತೆ ಹಾದಿತಪ್ಪುತ್ತಿದ್ದಾರೆ ಇಂತಹ ಯುವಜನತೆಯನ್ನು ಎಚ್ಚರಿಸುವ ನಿಟ್ಟಿನಲ್ಲಿ ಒಂದು ಅದ್ಬುತವಾದ ಸಂದೇಶವನ್ನು ನೀಡಲು ಸಿದ್ದವಾಗಿರುವ ಅಂತರ್ಯಾಮಿ ಸಿನಿಮಾ ಯಶಸ್ವಿಯಾಗಲಿ ಎಂದು ಕರ್ನಾಟಕ ಸರ್ಕಾರದ ಗೃಹಮಂತ್ರಿಗಳು ಹಾಗೂ ಸಾಹೇ ವಿವಿ. ಕುಲಾಧಿಪತಿಗಳಾದ ಡಾ. ಜಿ.ಪರಮೇಶ್ವರ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ.ಸಾಣಿಕೊಪ್ಪ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಮೊದಲಾದವರು ಹಾಜರಿದ್ದರು.

ಪ್ರಣವ್ ನಾಯಕನಟನಾಗಿ ಅಭಿನಯಿಸಿ, ತಮ್ಮದೇ ಬ್ಯಾನರ್ ಗುರುರೇಣುಕಾ ಪೆÇ್ರಡಕ್ಷನ್ನಲ್ಲಿ ನಿಮಾರ್ಣವಾಗಿರುವ ‘ಅಂತರ್ಯಾಮಿ’ ಸಿನಿಮಾದ ನಿರ್ದೇಶನವನ್ನು ಕೆ. ಧನಂಜಯ್ ಮಾಡಿದ್ದಾರೆ.

ಈ ಚಿತ್ರದಲ್ಲಿ ನಾಯಕ ನಟನಾಗಿ ಪ್ರಣವ್ ನಟಿಸಿದ್ದು, ನಾಯಕಿಯಾಗಿ ಮೋಹಿರಾ ಆಚಾರ್ಯ ಅಭಿನಯಿಸಿದ್ದಾರೆ. ಮಂಡ್ಯ ಸಿದ್ದು, ಕಾಮಿಡಿ ಕಿಲ್ಲಾಡಿ ಖ್ಯಾತಿಯ ಉದಯ್, ರುದ್ರಮುನಿ ಪಂಡಿತ್ , ರೇಣುಕಾಂಬ, ಶರತ್ ಘಾಟಿ, ಶ್ರೀ ಕೃಷ್ಣ ಮಂಜೀವಾ, ಬೇಬಿ ಹಾನ್ಸಿ, ಹೇಮಮಾಲಿನಿ, ಬಾಲಕೃಷ್ಣ ಬರಗೂರು, ವಸಂತ್, ಯೋಗೀಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಈ ಚಿತ್ರಕ್ಕೆ ಛಾಯಾಗ್ರಹಣವನ್ನು ಎಸ್ ಬಾಲು ನಿರ್ವಹಿಸಿದರೆ, ದೇಸೀ ಮೋಹನ್ ಅವರ ಸಂಗೀತವಿದೆ, ಸಾಹಿತ್ಯವನ್ನು ವಿನಯ್ ಕಾವ್ಯಕಾಂತಿ ಬರೆದಿದ್ದಾರೆ. ನೃತ್ಯ ಸಂಯೋಜನೆಯನ್ನು ಬಾಲ ಮಾಸ್ಟರ್ ನಿರ್ವಹಿಸಿದರೆ, ಅರವಿಂದರಾಜ್ ಸಂಕಲನವನ್ನು ಮಾಡಿದ್ದಾರೆ. ಇನ್ನು ತಾಂತ್ರಿಕ ಸಲಹೆಯನ್ನು ಶ್ರೀಕಾಂತ್ ಶ್ರಾಪ್ ನೀಡಿದ್ದಾರೆ. ಎಂಜೆಎಸ್ಪಿಆರ್ ಯವರು ಪಿಆರ್‍ಓ ಕಾರ್ಯನಿರ್ವಹಿಸಿದ್ದರೆ, ರವಿಶಂಕರ್ ಅವರು ಸಹ ನಿದೇಶನವನ್ನು ¸ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ವಸಂತ್, ನಾಗರಾಜ್ ಹೂಗಾರ್, ಗೌತಮ್ ವಿ. ಅರೆಯೂರು ಸಾಥ್ ನೀಡಿದ್ದಾರೆ.

Leave a Reply

Your email address will not be published. Required fields are marked *