ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ನಸಿರ್ಂಗ್ ಕಾಲೇಜು ಮತ್ತು ನೆಲಮಂಗಲದ ಸಮೀಪದ ಟಿ-ಬೇಗೂರಿನಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ಆಫ್ ನಸಿರ್ಂಗ್ ಸೈನ್ಸ್ಆಂಡ್ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಮೊದಲನೆ ವರ್ಷದ ಬಿ.ಎಸ್ಸಿ ಮತ್ತು ಜಿ.ಎನ್.ಎಮ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ (ಲ್ಯಾಂಪ್ ಲೈಟಿಂಗ್ ಸೆರಮನಿ) ಹಾಗೂ ಪದವಿ ಪ್ರಧಾನ ಸಮಾರಂಭ ಏ.8ರ ಮಂಗಳವಾರದಂದು ನಡೆಯಲಿದೆ.
ಶಿಕ್ಷಣ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಸಭಾಂಗಣದಲ್ಲಿ ಏರ್ಪಟ್ಟಿರುವ ಕಾರ್ಯಕ್ರಮವನ್ನು ಬೆಳಿಗ್ಗೆ 9ಕ್ಕೆ ಸಾಹೇ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆಡಳಿತಾ ಮಂಡಳಿ ಸದಸ್ಯರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾ.ಬಿ.ಎಲ್. ಸುಜಾತ ರಾಥೋಡ್, ಗೌರವ ಅತಿಥಿಗಳಾಗಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಕಾಲೇಜ್ ಆಫ್ ನಸಿರ್ಂಗ್ ಪ್ರಾಂಶುಪಾಲರಾದ ಡಾ.ಲೀನಾ ಸ್ವಾಮಿ, ಸಾಹೇ ಉಪಕುಲಪತಿಗಳು ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ.ಅಶೋಕ್ ಮೆಹ್ತಾ ಹಾಗೂ ಉಭಯ ಕಾಲೇಜುಗಳ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಹಾಜರಿರುವರು.