ರಾಜಸ್ಥಾನ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಒಂದೇ ಓವರಿನಲ್ಲಿ 6,4,6,4,4,6 ಹೊಡೆಯವು ಮೂಲಕ 30 ರನ್ ಗಳಿಸಿ,ತಮ್ಮ ಅದ್ಭುತ ಇನ್ನಿಂಗ್ಸ್ನಿಂದ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಕೇವಲ 14 ವರ್ಷ 32 ದಿನಗಳ ವಯಸ್ಸಿನ ಈ ಬಾಸ್ ಬೇಬಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದರು.
ಈ ಗೆಲುವಿನೊಂದಿಗೆ ಅವರು 2009 ರಲ್ಲಿ ಮನೀಶ್ ಪಾಂಡೆ ನಿರ್ಮಿಸಿದ್ದ 19 ವರ್ಷ ಮತ್ತು 253 ದಿನಗಳ ದಾಖಲೆಯನ್ನು ಮುರಿದರು.
210 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಓಪನರ್ ಆಗಿ ಜೈಸ್ವಾಲ್ ಜೊತೆ ಬಂದ ಸೂರ್ಯವಂಶಿ ತಮ್ಮ ವಯಸ್ಸಿಗೂ ಮೀರಿದ ಪ್ರಬುದ್ಧತೆ ಮತ್ತು ಧೈರ್ಯದಿಂದ ಬ್ಯಾಟಿಂಗ್ ಮಾಡಿದರು.
ಪವರ್ಪ್ಲೇನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 87/0 ಸ್ಕೋರ್ನಲ್ಲಿ ಅವರ ವೇಗದ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತು. ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ ಗಳಿಸಿದರು. ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಯಾರ್ಕರ್ನಿಂದ ಕ್ಲೀನ್ ಬೌಲ್ಡ್ ಆದರು. ಆದರೆ ಇಡೀ ಕ್ರೀಡಾಂಗಣ ಎದ್ದು ನಿಂತು ಅವರಿಗೆ ಚಪ್ಪಾಳೆ ತಟ್ಟಿತು.
ವೈಭವ್ ಸೂರ್ಯವಂಶಿ ರಚಿಸಿದ ದಾಖಲೆಗಳು:
ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ (14 ವರ್ಷ 32 ದಿನಗಳು): ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಸೂರ್ಯವಂಶಿ ಅವರನ್ನು ಭಾರತೀಯ ಕ್ರಿಕೆಟ್ನ ಭವಿಷ್ಯ ಎಂದು ಪರಿಗಣಿಸಲಾಗುತ್ತಿದೆ.

ಮಾಜಿ ಕ್ರಿಕೆಟಿಗರು ಅವರ ಶಾಟ್-ಹಿಟ್ಟಿಂಗ್ ಅನ್ನು “ಪ್ರೈಮ್ ಯುವರಾಜ್ ಸಿಂಗ್” ಶೈಲಿಗೆ ಹೋಲಿಸಿದ್ದಾರೆ. 14ನೇ ವಯಸ್ಸಿನಲ್ಲಿ ಇμÉ್ಟೂಂದು ಧೈರ್ಯದಿಂದ ಆಡಿದ್ದು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದೆ. ಇದನ್ನೆಲ್ಲಾ ನೋಡುವಾಗ ಇದು ವೈಭವ್ ಸೂರ್ಯವಂಶಿಯವರ ಪ್ರಯಾಣದ ಆರಂಭವμÉ್ಟೀ ಎಂದು ತೋರುತ್ತದೆ. ಪಿಕ್ಚರ್ ಅಭಿ ಬಾಕಿ ಹೈ ಎಂಬಂತಿದೆ.
ಒಂದೇ ಟಿ20 ಪಂದ್ಯದಲ್ಲಿ ಶತಕ ದಾಖಲಿಸಿ ಅತ್ಯಂತ ಕಿರಿಯ ಆಟಗಾರ: ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಮಾತ್ರವಲ್ಲದೆ ಇಡೀ ಟಿ20 ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 2013 ರಲ್ಲಿ ವಿಜಯ್ ಜೋಲ್ ರಚಿಸಿದ್ದ 18 ವರ್ಷ 118 ದಿನಗಳ ದಾಖಲೆಯನ್ನು ಮುರಿದರು.
ಐಪಿಎಲ್ 2025 ರಲ್ಲಿ ಅತಿ ವೇಗದ ಅರ್ಧ ಶತಕ: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 17 ಎಸೆತಗಳಲ್ಲಿ 50 ರನ್ ಪೂರೈಸಿದರು. ಈ ಮೂಲಕ ಐಪಿಎಲ್ 2025 ರಲ್ಲಿ ಅತಿ ವೇಗದ ಅರ್ಧ ಶತಕ ಸಿಡಿಸಿದರು. 3 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದ್ದಾರೆ.
14 ವರ್ಷ 32 ದಿನಗಳಲ್ಲಿ ಈ ಸಾಧನೆ ಮಾಡಿದ ವೈಭವ್ ಐಪಿಎಲ್ ಮತ್ತು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅರ್ಧ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಆಗಿದ್ದಾರೆ. ವೈಭವ್ ಅವರಿಗೂ ಮೊದಲು ರಿಯಾನ್ ಪರಾಗ್ ಈ ದಾಖಲೆ ಬರೆದಿದ್ದರು. ರಿಯಾನ್ ಪರಾಗ್ 17 ವರ್ಷ 175 ದಿನಗಳಲ್ಲಿ ಈ ಸಾಧನೆ ಅರ್ಧ ಶತಕ ಗಳಿಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ: ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿ ಅಗ್ರಸ್ಥಾನದಲ್ಲಿರುವುದು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್. ಅವರು 30 ಎಸೆತಗಳಲ್ಲಿ ಶತಕ ಗಳಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಸಿಡಿಸಿದ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಆಗಿದ್ದಾರೆ. 35 ಎಸೆತಗಳಲ್ಲಿ 100 ರನ್ ಗಳಿಸಿದರು.
ಐಪಿಎಲ್ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ: ವೈಭವ್ ಸೂರ್ಯವಂಶಿ ಮೊದಲ 17 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಅರ್ಧ ಶತಕ ಸಿಡಿಸಿದರು. ಇದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧ ಶತಕ ಪೂರೈಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐಪಿಎಲ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ: 14 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದ ದಿನವೇ ಈ ದಾಖಲೆ ರಚಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.
ಐಪಿಎಲ್ನಲ್ಲಿ ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಆಟಗಾರ: ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಮೊದಲನೇ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆ ರಚಿಸಿದ್ದಾರೆ.
ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಆಟಗಾರ: ವೆಸ್ಟ್ ಇಂಡೀಸ್ನ ಆಂಡ್ರೆ ರಸೆಲ್, ಆಸ್ಟ್ರೇಲಿಯಾದ ರಾಬ್ ಕ್ವಿನಿ, ಕೆರಿಬಿಯನ್ನ ಕೆವೊನ್ ಕೂಪರ್, ವೆಸ್ಟ್ ಇಂಡೀಸ್ ಆಲ್ರೌಂಡರ್ ಕಾರ್ಲೋಸ್ ಬ್ರೈತ್ವೈಟ್, ಟೀಮ್ ಇಂಡಿಯಾದ ಅನಿಕೇತ್ ಚೌಧರಿ, ವೆಸ್ಟ್ ಇಂಡೀಸ್ನ ಜಾವೊನ್ ಸಿಯಲ್ರ್ಸ್, ಭಾರತದ ಸಿದ್ಧೇಶ್ ಲಾಡ್, ಶ್ರೀಲಂಕಾದ ಮಹೇಶ್ ತೀಕ್ಷಣಾ ಮತ್ತು ಭಾರತದ ಸಮೀರ್ ರಿಜ್ವಿ ಇವರೆಲ್ಲ ಐಪಿಎಲ್ ಆಡುವಾಗ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದರು. ಈ ಸಾಲಿಗೆ ಸೂರ್ಯವಂಶಿ ಸೇರಿದ್ದು ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಅತಿ ವೇಗದ ಅರ್ಧಶತಕ: ವೈಭವ್ ಸೂರ್ಯವಂಶಿ 17 ಎಸೆತಗಳಲ್ಲಿ 50 ರನ್ ಪೂರೈಸಿದರು. ಗುಜರಾತ್ ಟೈಟಾನ್ಸ್ ವಿರುದ್ಧ ಅತಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಎರಡನೇ ಅತಿ ವೇಗದ ಅರ್ಧಶತಕ: ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಬೌಂಡರಿಗಳ ಮಳೆಲೇಗರೆದ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಎರಡನೇ ಅತಿ ವೇಗದ ಅರ್ಧಶತಕ ಸಿಡಿಸಿ ನೂತನ ಇತಿಹಾಸ ರಚಿಸಿದ್ದಾರೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ ಮೆಗಾ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂ.ಗಳಿಗೆ ಖರೀದಿಸಿತು. ಇದರೊಂದಿಗೆ ವೈಭವ್ ಐಪಿಎಲ್ ಒಪ್ಪಂದ ಪಡೆದ ಅತ್ಯಂತ ಕಿರಿಯ ಆಟಗಾರರಾದರು.