ಭಾರತೀಯ ಸೇನೆ ವಿಜಯ ಸಾಧಿಸುವಂತೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ತುಮಕೂರು:ಪೆಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಜನರ ಆತ್ಮಕ್ಕೆ ಶಾಂತಿ ಕೋರಿ,ಹಾಗೆಯೇ ಉಗ್ರರ ವಿರುದ್ದ ದಾಳಿಗೆ ಮುಂದಾಗಿರುವ ಭಾರತೀಯ ಸೇನೆ ವಿಜಯ ಸಾಧಿಸಲಿ ಎಂದು ಇಂದು ಮುಸ್ಲಿಂ ಬಾಂಧವರು ನಗರದ ಮೆಕ್ಕಾ ಮಸೀದಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮುತ್ತುವಲ್ಲಿಗಳ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಕರೆಯ ಮೇರೆಗೆ ರಾಜ್ಯದಲ್ಲಿ ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ದೇಶದ ಸೇನಗೆ ನೈತಿಕ ಬೆಂಬಲ ಕೋರಿ, ಹಾಗೂ ಯುದ್ದದಲ್ಲಿ ಭಾರತೀಯ ಸೇನೆಗೆ ವಿಜಯ ಲಭಿಸಲಿ ಎಂದು ಕೋರಿದರು.

ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತ ಮುಖಂಡರಾದ ತಾಜುದ್ದೀನ್ ಷರಿಫ್,ಭಾರತದಲ್ಲಿರುವ ಮುಸ್ಲಿಂರಿಗೆ ಭಾರತವೇ ತಾಯ್ನಾಡು.ದೇಶ ಮೊದಲು ಹಾಗಾಗಿ ಪಾಕಿಸ್ಥಾನದೊಂದಿಗೆ ಆರಂಭಗೊಂಡಿರುವ ಯುದ್ದದಲ್ಲಿ ಭಾರತದ ಸೇನೆ ವಿಜಯ ಸಾಧಿಸುವುದರ ಜೊತೆಗೆ, ಪೆಹಲ್ಗಾಮ್ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ದೊರಕಿಸಲು, ಪ್ರವಾಸಿಗರ ಮೇಲೆ ದಾಳಿ ನಡೆಸಿದ ಎಲ್ಲಾ ಉಗ್ರರನ್ನು ಸದೆ ಬಡೆಯಬೇಕು. ಇನ್ನೂ ಇಂತಹ ದುಸಹಾಸಕ್ಕೆ ಕೈ ಹಾಕದಂತೆ ಉಗ್ರರಿಗೆ ಎಚ್ಚರಿಕೆಯ ಕರೆ ಗಂಟೆ ನೀಡಬೇಕು ಎಂಬುದು ದೇಶದ ಎಲ್ಲಾ ಮುಸ್ಲಿಂರ ಒಕ್ಕೊರಲಿನ ಪ್ರಾರ್ಥನೆಯಾಗಿದೆ ಎಂದರು.

ಅಲ್ಪಸಂಖ್ಯಾತ ಮುಖಂಡರಾದ ಅಫ್ಸರ್ ಖಾನ್ ಮಾತನಾಡಿ,ಭಾರತೀಯ ಸೇನೆ ಬಲಿಷ್ಠವಾಗಿದೆ.ನಮ್ಮ ಸೇನೆಗೆ ನೈತಿಕ ಬಲ ತುಂಬುವ ನಿಟ್ಟಿನಲ್ಲಿ ನಾವು ಇಂದು ಶುಕ್ರವಾರದ ನಮಾಜಿನ ವೇಳೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಸೇನಾ ಕಾರ್ಯಾಚರಣೆ ವೇಳೆ ನಮ್ಮ ದೇಶದ ಒಗ್ಗಟ್ಟು ಪ್ರದರ್ಶನಗೊಂಡಿದೆ.ಹಿಂದು, ಮುಸ್ಲಿಂ, ಕ್ರೈಸ್ತ,ಶಿಖ್, ಪಾರ್ಸಿ ಎಲ್ಲರೂ ಸೇರಿದಾಗ ಮಾತ್ರ ಎಂಬುದನ್ನು ಕಾರ್ಯಚರಣೆಯ ಪೋಟೋಗಳೇ ಸಾಭಿತು ಮಾಡಿವೆ.ಇಡೀ ಮುಸ್ಲಿಂ ಸಮುದಾಯ ಭಾರತದ ಸೇನೆಯೊಂದಿಗೆ ಇದೆ ಎಂದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಮೌಲಾನ ಯಾಸೀನ್ ಸಾಬ್, ಮಸೀದಿ ಕಾರ್ಯದರ್ಶಿ ಅಬ್ದುಲ್ ಸುಭಾನ್, ತಾಜುದ್ದೀನ್ ಷರಿಫ್,ಸೈಯದ್ ಸುಭಾನ್ ಅಪ್ಸರ್ ಪಾಷ,ತನ್ವೀರ್, ಅದೀಬ್ ಅಹಮದ್, ಅಪ್ಸರ್ ಖಾನ್ ಮುಜಾಹಿದ್ ಪಾಷ, ಫಾರೂಕ್ ಅಹಮದ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *