ಅಂತಃಕರಣ ಪೊರೆವ ಗುಣ ಇರುವವರೆಲ್ಲರೂ ಅಮ್ಮಂದಿರೆ-ಡಾ||ಶಾಲಿನಿ

ತುಮಕೂರು : ಅಮ್ಮ ಅಷ್ಟೇ ಅಮ್ಮ ಅಲ್ಲ.ಹೆತ್ತರಷ್ಟೇ ಅಮ್ಮ ಅಲ್ಲ, ಅಪ್ಪಾಜೀನೂ ಅಮ್ಮಾನೇ, ಅಪ್ಪ ಅಮ್ಮ ಬೇಧ ಇಲ್ಲ ಅಮ್ಮನ ಅಂತಃಕರಣ ಪೊರೆಯುವ ಗುಣ ಇರುವವರೆಲ್ಲರೂ ಅಮ್ಮಂದಿರೆ ನಮ್ಮಲ್ಲಿ ಮಾತೃಹೃದಯ ಇರಬೇಕು “ಎಂದು ಶ್ರೀ ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ನ ಪ್ರಾಂಶುಪಾಲರಾದ ಡಾ|| ಶಾಲಿನಿರವರು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು “ಮಾತೃತ್ವ ನನ್ನ ಅನುಭವ” ಎಂಬ ವಿಷಯದ ಬಗ್ಗೆ ತಾಯಂದಿರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಪ್ರೇಮಾ ಮಲ್ಲಣ್ಣ ದತ್ತಿನಿಧಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಅಂಬೇಡ್ಕರ್ ಭವನದ ಡಾ. ಬಿ.ಆರ್ ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಅಮ್ಮನ ಮಹತ್ವ ಎಷ್ಟು ಹೇಳಿದರೂ ಸಾಲದು, ಅಮ್ಮ ನಮ್ಮ ವ್ಯಕ್ತಿತ್ವ ರೂಪಿಸುವವರು, ಅಮ್ಮ ಏನಾದರೂ ಬುದ್ದಿ ಮಾತು ಹೇಳಿದರೆ ಜಗಳ ಮಾಡಬೇಡಿ,ನೀವು ನಿಮ್ಮ ಅಪ್ಪ ಅಮ್ಮನನ್ನು ಹೇಗೆ ಕಾಣುತ್ತೀರಾ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಪ್ರಮುಖ ಹೆಜ್ಜೆ ಇಡುವಾಗ ಅಮ್ಮನ ಸಲಹೆ ಪಡೆಯಿರಿ, ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡ ಎಂಬುದನ್ನು ನಾನು ಅಮ್ಮನಿಂದ ಕಲಿತೆ ಎಂದು ಹೇಳಿದರು.

ದತ್ತಿದಾನಿಗಳಾದ ಪ್ರೇಮಾ ಮಲ್ಲಣ್ಣ ರವರು ಮಾತಾನಾಡುತ್ತಾ ,ಮನೆಯೆ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ತಾಯಿಯ ಪಾದದ ಕೆಳಗೆ ಸ್ವರ್ಗ ಇದೆ, ಲೇಖಕಿಯರ ಸಂಘ ಕ್ರಿಯಾಶೀಲವಾಗಿರುವುದರಿಂದ ಆರಂಭದಿಂದಲೂ ತಾನು ಸಂಘದ ಒಡನಾಟದಲ್ಲಿ ಇರುವುದರಿಂದ ತಾಯಂದಿರ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ನಡೆಸಲು ಸಂಘದಲ್ಲಿ ದತ್ತಿ ತೊಡಗಿಸಿರುವುದಾಗಿ ತಿಳಿಸಿ ಸ್ಪರ್ಧೆಗೆ ಬಂದ ಪ್ರಬಂಧಗಳ ಪುಸ್ತಕ ರೂಪದಲ್ಲಿ ತರಲು ಸಲಹೆ ನೀಡಿದರು.

ತೀರ್ಪುಗಾರರ ಪರವಾಗಿ ಸಿ.ಎಲ್ ಸುನಂದಮ್ಮ ರವರು ಮಾತನಾಡಿ ,ಸ್ಪರ್ಧೆಗೆ ಬಂದ ಪ್ರಬಂಧಗಳೆಲ್ಲವೂ ಉತ್ತಮವಾಗಿದ್ದವು .ಭಾವಪೂರ್ಣವಾಗಿದ್ದವು ಎಂದು ತಿಳಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್ ನ ಅಧ್ಯಕ್ಷ ರಾದ ಜಯಶೀಲ ರವರು ಮಾತನಾಡುತ್ತಾ ” ತಂದೆ ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದೇ ಆಗಿದೆ. ಅವರನ್ನು ವೃದ್ಧಾಶ್ರಮಗಳಿಗೆ ದೂಡುವುದು ನಮ್ಮ ಸಂಸ್ಕøತಿ ಅಲ್ಲ .ಪ್ರೀತಿ,ಕರುಣೆ ,ವಿಶ್ವಾಸ ಕಡಿಮೆ ಆಗುತ್ತಾ ಇದೆ, ಸಾಮಾಜಿಕ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಳ್ಳೋಣ” ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಮಾತನಾಡುತ್ತಾ ತಾಯಿಯು ತನ್ನ ಜೀವವನ್ನು ಒತ್ತೆ ಇಟ್ಟು ಮಗುವಿಗೆ ಜನ್ಮ ಕೊಡುವಳು ಹೆರಿಗೆಯೆಂಬುದು ಅವಳಿಗೆ ಮರುಹುಟ್ಟು, ತಾಯಿಯ ಅಂತಃಕರಣ ಮತ್ತು ಪ್ರೀತಿಯಿಂದ ಸಮಾಜವನ್ನು ತಿದ್ದಿ ಮುನ್ನಡೆಸೋಣ ” ಎಂದರು .

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ತೋವಿಕೆರೆ ಗಿರಿಜಮ್ಮನವರಿಗೆ 2ಸಾವಿರ, ದ್ವಿತೀಯ ಬಹುಮಾನ ಪಡೆದ ಹೆಬ್ಬೂರು ಶಾಂತಲಕ್ಷ್ಮೀರವರಿಗೆ ಒಂದೂವರೆ ಸಾವಿರ ಮತ್ತು ತೃತೀಯ ಬಹುಮಾನವನ್ನು ಬಾಣಸಂದ್ರದ ಆಕಾಶ್.ಬಿ.ಆರ್.ವರಿಗೆ 1ಸಾವಿರ ಮತ್ತು ಸಮಾಧಾನಕರ ಬಹುಮಾನವಾಗಿ ಐನೂರು ರೂ.ಗಳನ್ನು ತುಮಕೂರಿನ ನಿದಾ ಆಪ್ರಿನ್‍ರವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತೀರ್ಪು ಗಾರರಾಗಿದ್ದ ಸಿ.ಎನ್.ಸುಗುಣಾದೇವಿ,ಸಿ ಎಲ್ . ಸುನಂದಮ್ಮ, ಉಪಾಧ್ಯಕ್ಷ ರಾದ ಸಿ.ಎ.ಇಂದಿರಾ,ಲಲಿತ ಮಲ್ಲಪ್ಪ, ಶೈಲಜಾ, ಸುಮಾ ಬೆಳಗೆರೆ , ಉಪಸ್ಥಿತರಿದ್ದರು.
ಮ£ Éಕೆಲಸ ಮಾಡುತ್ತಾ ಕಷ್ಟ ಪಟ್ಟು ತನ್ನ ಮೂರು ಮಕ್ಕಳನ್ನೂ ವಿದ್ಯಾವಂತರಾಗಿ ಮಾಡಿದ ವರಲಕ್ಷ್ಮಿ ರವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯ್ತು.

ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್ ನ ಕಾರ್ಯದರ್ಶಿ ಗಳಾದ ನಾಗರಾಜು ರವರು ಸ್ವಾಗತಿಸಿ ,ಸುಮಾ ಪ್ರಸನ್ನರವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *