ನಾವೆಲ್ಲರೂ ಒಂದೇ ಎಂದು ಭಾವಿಸಿ ,ಸಹೋದರಿತ್ವದ ನೆಲೆಯಲ್ಲಿ ಈ ಕಥೆಗಳನ್ನು ಓದಿದರೆ ,ಇಲ್ಲಿನ ಸಂಕಟ ನಮಗೆ ತಾಕುತ್ತೆ .ಇವು ನಮ್ಮ ಕಣ್ಣನ್ನು ತೆರೆಸುತ್ತವೆ ಎಂದು ಲೇಖಕಿ ಗೀತಾವಸಂತ ರವರು ಹೇಳಿದರು.
ಅವರು ಕರ್ನಾಟಕ ಸಾಹಿತ್ಯ ಆಕಾಡೆಮಿ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಣಿಗಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ , ಚಕೋರ ಸಾಹಿತ್ಯ ವಿಚಾರ ವೇದಿಕೆ ಉಪನ್ಯಾಸ ಮಾಲಿಕೆಯಲ್ಲಿ ,ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ರವರ ಬದುಕು ಬರಹ ಕುರಿತು ಮಾತನಾಡಿದರು.
ನಮ್ಮದೇ ನೆಲದ , ನಮ್ಮದೇ ನಾಡಿನ ಮುಸ್ಲಿಂ ಹೆಣ್ಣುಮಕ್ಕಳ ಬಡತನ ,ನೋವು ,ಸಂಕಟ ,ಅನ್ಯಾಯ ,ದೌರ್ಜನ್ಯ ,ಬದುಕು ಬವಣೆಗಳ ಕುರಿತು ,ಬಾನು ಮುಷ್ತಾಕ್ ರವರು ಕನ್ನಡದಲ್ಲಿ ಬರೆದ ಕಥೆಗಳ ಸಂಕಲನ “ಎದೆಯ ಹಣತೆ ” , ಈ ಕಥೆಗಳು Heart lamp ಹೆಸರಲ್ಲಿ ದೀಪಾ ಬಸ್ತಿರವರು ಇಂಗ್ಲೀಷ್ ಗೆ ಅನುವಾದಿಸಿದ್ದು, ಈ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದ್ದು , ಇಡೀ ಜಗತ್ತಿನ ಗಮನ ಸೆಳೆದಿದೆ.ಕನ್ನಡ ಕಥನದ ಸತ್ವವನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಬಾನು ಮುಷ್ತಾಕ್ ರವರದ್ದು ಎಂದು ಹೇಳಿದರು.
ಬಾನು ಮುಷ್ತಾಕ್ ರವರು ವಕೀಲರಾಗಿ , ಸಾಮಾಜಿಕ ಹೋರಾಟಗಾರ್ತಿ ಯಾಗಿ ,ಪತ್ರಕರ್ತೆಯಾಗಿ ,ಜಾಗೃತ ಮಹಿಳೆಯಾಗಿ ತಾವು ಕಂಡದ್ದನ್ನು ,ಅನುಭವಿಸಿದ್ದನ್ನು ಕಥೆಗಳಲ್ಲಿ ಅಭಿವ್ಯಕ್ತಿ ಸಿದ್ದಾರೆ .
ಧರ್ಮದ ಬಗ್ಗೆ ಪ್ರಶ್ನಿಸುವುದು ,ಅದರಲ್ಲೂ ಹೆಣ್ಣು ಮಕ್ಕಳು ಮಾತನಾಡುವುದು ಇಂದಿಗೂ ಅಪರಾಧ ಎಂಬಂತಿರುವಾಗ ,ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ,ಅನ್ಯಾಯ ವನ್ನು .ಸಮುದಾಯದ ಹುನ್ನಾರಗಳನ್ನು , ಸಣ್ಣತನಗಳನ್ನು ಬಾನು ರವರ ಕಥೆಗಳು ಬಿಚ್ಚಿಡುತ್ತವೆ.ಹೆಣ್ಣು ಜಗತ್ತನ್ನು ಎಚ್ಚರಿಸುತ್ತವೆ .ನಮ್ಮ ಹೆಜ್ಜೆಗಳನ್ನು ದಿಟ್ಟವಾಗಿ ಇಡಲು ಪ್ರೇರೇಪಿಸುತ್ತವೆ ಎಂದು ಹೇಳಿದರು.
ಕರ್ನಾಟಕ. ಸಾಹಿತ್ಯ ಆಕಾಡೆಮಿ ಅಧ್ಯಕ್ಷರಾದ ಎಲ್.ಎನ್ .ಮುಕುಂದರಾಜ್ ರವರು , ಗೀತಾ ವಸಂತ ರವರ ಕವಿತೆಯೊಂದನ್ನು ಓದುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ , ಹೆಣ್ಣುಮಕ್ಕಳ ಮೇಲೆ ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ ,ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಂಕಟ ಬಹಳ ದೊಡ್ಡದು . ಜಾತಿ, ಧರ್ಮ ,ಲಿಂಗ ದ ಹೆಸರಿನಲ್ಲಿ ನಾವೇ ಶ್ರೇಷ್ಠ ಎಂಬುದನ್ನು ಬಿಟ್ಟು
ನಾವು ಎಲ್ಲರನ್ನೂ ,ಎಲ್ಲ ಧರ್ಮದವರನ್ನೂ ಗೌರವಿಸಬೇಕು. ಸೈರಣೆ ಸಹಿಷ್ಣುತೆ ಇರಬೇಕು.ನಮ್ಮ ಭಾಷೆ ,ಸಾಹಿತ್ಯ ದ ಬಗ್ಗೆ ಪ್ರೀತಿ ಇರಬೇಕು ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯರಾದ ಸುಮಾ ಸತೀಶ್ ರವರು ಪ್ರಸ್ತಾವನೆ ಮಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ್ ರವರು ಅಧ್ಯಕ್ಷ ತೆ ವಹಿಸಿದ್ದರು.
ಚಕೋರ ಸಾಹಿತ್ಯ ವಿಚಾರ ವೇದಿಕೆ ಯ ತುಮಕೂರು ಜಿಲ್ಲಾ ಸಂಚಾಲಕರಾದ ಮಲ್ಲಿಕಾ ಬಸವರಾಜು ರವರು,
ಕುಣಿಗಲ್ ರಾಮಚಂದ್ರ ರವರು ಉಪಸ್ಥಿತರಿದ್ದರು.
ನರಸೀಪ್ರಸಾದ್ ರವರು ಕಾರ್ಯಕ್ರಮ ನಿರೂಪಿಸಿದರು.