ಅಧಿಕಾರ, ಐಶ್ವರ್ಯ ಬೇಡ, ಜನರ ಪ್ರೀತಿ,ವಿಶ್ವಾಸ ಸಾಕು- ಕೆ.ಎನ್.ರಾಜಣ್ಣ

ತುಮಕೂರು- ಮುಂದಿನ ದಿನಗಳಲ್ಲಿ ನನಗೆ ಯಾವ ಅಧಿಕಾರವೂ ಬೇಡ, ಐಶ್ವರ್ಯವೂ ಬೇಡ. ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋದರೆ ಸಾಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಇಂದಿಲ್ಲಿ ಹೇಳಿದರು.

ಎಲ್ಲ ವರ್ಗದ ಜನರು, ಎಲ್ಲ ಪಕ್ಷದವರು ಸೇರಿ ಈ ಸಮಾರಂಭದ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ. ಮುಂದಿನ ದಿನಗಳಲ್ಲಿ ನನಗೆ ಯಾವ ಅಧಿಕಾರ, ಐಶ್ವರ್ಯ ಬೇಡ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವನ್ನು ನಾನು ಸಾಯುವವರೆಗೂ ಉಳಿಸಿಕೊಂಡು ಹೋದರೆ ಸಾಕು. ಮುಂದಿನ ಆಶಯ ಏನೂ ಇಲ್ಲ ಎಂದು ತಿಳಿಸಿದರು.

ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ದೇವಾಲಯಕ್ಕೆ ತೆರಳುವ ಮುನ್ನ ಸರ್ಕಲ್‍ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಅವರು ಹೇಳಿದರು.

ರಾಜ್ಯಮಟ್ಟದಲ್ಲಿ ಕ್ಯಾತ್ಸಂದ್ರ ರಾಜಣ್ಣ ಎಂದು ಗುರುತಿಸುವ ಅವಕಾಶ ಕ್ಯಾತ್ಸಂದ್ರದ ಜನರಿಂದ ನನಗೆ ದೊರೆತಿದೆ ಎಂದರು.

ನನ್ನ ಬೆಳವಣಿಗೆಗೆ ಕ್ಯಾತ್ಸಂದ್ರದ ಹಿರಿಯ ನಾಗರಿಕರು ಹೆಚ್ಚು ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನಾನು ಇಂದು ರಾಜಕೀಯ ರಂಗ, ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ನನ್ನನ್ನು ನಿಮ್ಮೆ ತಂದೆ, ತಾಯಿ ಹಾಗೂ ತಾತಂದಿರು ಹೇಗೆ ವಿಶ್ವಾದಿಂದ ಬೆಳೆಸಿದ್ದಾರೋ ಅದೇ ವಿಶ್ವಾಸವನ್ನು ನೀವು ಇಟ್ಟುಕೊಂಡಿದ್ದೀರೆಂದು ಭಾವಿಸಿದ್ದೇನೆ ಎಂದು ನೆರೆದಿದ್ದ ಜನತೆಗೆ ತಿಳಿಸಿದರು.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ನಿರಂತರವಾಗಿ ನನ್ನ ಜೀವಿತಾವಧಿಯವರೆಗೂ ಇರಲಿ ಎಂದು ಮನವಿ ಮಾಡಿದರು.

ನನಗೆ ಕೆ.ಎನ್. ನರಸಿಂಹಯ್ಯನವರು ಸೇರಿದಂತೆ ಬಹಳಷ್ಟು ಮಂದಿ ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ. ಅವರೆಲ್ಲರ ಹಾದಿಯಲ್ಲಿ ನಾನು ಸಹ ನಡೆದು ಬಂದಿದ್ದೇನೆ ಎಂದ ಅವರು, ರಾಜ್ಯಮಟ್ಟದಲ್ಲಿ ಕ್ಯಾತ್ಸಂದ್ರ ರಾಜಣ್ಣ ಎಂದು ಗುರುತಿಸುವ ಅವಕಾಶ ನಿಮ್ಮೆಲ್ಲರಿಂದ ಒದಗಿ ಬಂದಿದೆ ಎಂದು ಹೇಳಿದರು.

ಇದೇ ಸಂದರ್ಭ ಚಂದ್ರಮೌಳೀಶ್ವರ ದೇವಾಲಯಕ್ಕೆ ಪತ್ನಿ ಶಾಂತಲಾ ರಾಜಣ್ಣ ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿದ ಸಚಿವ ಕೆ.ಎನ್. ರಾಜಣ್ಣನವರು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ
ಸಹಕಾರ ಸಚಿವ ಕೆ.ಎನ್. ರಾಜಣ್ಣನವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಅಂಗವಾಗಿ ಅಭಿಮಾನಿಗಳು ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯ ಸೇರಿದಂತೆ 21 ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಲ್ಲಹಳ್ಳಿ ದೇವರಾಜು, ಪಿ. ಮೂರ್ತಿ, ಜಿ.ಆರ್. ರವಿ, ಕೆ.ಜಿ. ಆನಂದ್, ಜಯರಾಮ್, ಇನಾಯತ್ ಉಲ್ಲಾ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *