ಪಿ.ವಿ.ನಾರಾಯಣ್ ಅವರಿಗೆ ಗೌರವ, ಮಾನ್ಯತೆ ಸಿಗಲಿಲ್ಲ

ತುಮಕೂರು: ಪಿ.ವಿ.ನಾರಾಯಣರವರಿಗೆ ಸಿಗಬೇಕಾದಷ್ಟು ಮಾನ್ಯತೆ, ಗೌರವ, ಸನ್ಮಾನಗಳು ಸಿಗಲಿಲ್ಲ ಎಂದು ಇತಿಹಾಸ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ತುಮಕೂರು ಮತ್ತು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಯಲ್ಲಾಪುರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಕೋರ ಸಾಹಿತ್ಯ ಉಪನ್ಯಾಸ ಮಾಲಿಕೆಯಲ್ಲಿ ಡಾ.ಪಿ.ವಿ.ನಾರಾಯಣ ನಡೆದು ಬಂದ ದಾರಿ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಪ್ರಧಾನ್ ವೆಂಕಪ್ಪ ನಾರಾಯಣ ಅವರು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರದವರು. ಪಿ.ವಿ.ಎನ್ ಎಂದೇ ಹೆಸರಾದವರು. ಹೈದರಾಲಿ ಆಡಳಿತದಲ್ಲಿ ಪ್ರಧಾನರಾಗಿದ್ದ, ಪ್ರಧಾನ್ ವೆಂಕಪ್ಪಯ್ಯ ಅವರ ವಂಶಸ್ಥರು. ಪಿವಿಎನ್ ಅವರು ‘ವಚನ ಸಾಹಿತ್ಯ ಒಂದು ಸಾಂಸ್ಕøತಿಕ ಅಧ್ಯಯನ’ ಎಂಬ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡರು. ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರವಾಸ ಕಥನ ಮತ್ತು ಸೃಜನಶೀಲ ಕೃತಿಗಳೂ ಸೇರಿದಂತೆ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಎಂದರು.

ಪಿವಿಎನ್ ಅನುವಾದ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. 9 ಕಾದಂಬರಿಗಳನ್ನು ರಚಿಸಿದ್ದು ಅವರ ‘ಧರ್ಮಕಾರಣ’ ಕಾದಂಬರಿ ನಿμÉೀಧಕ್ಕೊಳಗಾಯ್ತು. ಅದು ಸಂಶೋಧನಾ ವಿಷಯ ಆಧರಿಸಿದ ಕಾದಂಬರಿ. ನಂಬಿಕೆ ಎಂದೂ ಇತಿಹಾಸವಾಗಲಾರದು. ನಂಬಿಕೆಗೆ ಧಕ್ಕೆಯಾಗುವ ವಿಚಾರ ಬಂದಾಗ ಸಂಶೋಧನೆ ಸಾಯುತ್ತದೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದ ಪಿವಿಎನ್ ಕನ್ನಡಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡ ಶಕ್ತಿ ಕೇಂದ್ರದ ಸಕ್ರಿಯ ಸಂಚಾಲಕರಾಗಿದ್ದರು. ಬಿಎಂಶ್ರೀ ಪ್ರತಿμÁ್ಠನದ ಅಧ್ಯಕ್ಷರಾಗಿ ಅಪಾರವಾದ ಕೆಲಸ ಮಾಡಿದರು. ನಾಲ್ಕು ನಿಘಂಟುಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯೆ ಸುಮಾ ಸತೀಶ್ ಮಾತನಾಡಿ, ಪಿವಿಎನ್ ಕನ್ನಡ ಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು. ಇಳಿವಯಸ್ಸಿನಲ್ಲಿ ಕಂಪ್ಯೂಟರ್ ಬಳಸುವುದನ್ನು ಕಲಿತು, ತಮ್ಮ ಬರಹಗಳನ್ನು ಕಂಪೂಟರ್ ನಲ್ಲಿ ಟೈಪ್ ಮಾಡುತ್ತಿದ್ದರು ಎಂದರು.

ಕಾಲೇಜಿನ ಪ್ರಾಂಶುಪಾಲ ಎಂ.ಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಜಿಲ್ಲೆಯ ಚಕೋರ ಸಂಚಾಲಕ ಡಾ. ನಾಗಭೂಷಣ ಬಗ್ಗನಡು ಪ್ರಸ್ತಾವನೆ ಮಾಡಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಸ್ವಾಗತಿಸಿ, ಕಾಲೇಜಿನ ಉಪನ್ಯಾಸಕಿ ಮೇ.ನಾ.ತರಂಗಿಣಿ ನಿರೂಪಿಸಿರು.

Leave a Reply

Your email address will not be published. Required fields are marked *