ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು ನಾನ್ ಯುಜಿಸಿ ಎನ್ನದೆ, ಮಾನವೀಯತೆ ದೃಷ್ಟಿಯಿಂದ ಎಲ್ಲ ಅತಿಥಿ ಉಪನ್ಯಾಸಕರ ಒಳಿತಿಗಾಗಿ ಒಂದು ಬಾರಿ ಸೇವಾ ಸಕ್ರಮಾತಿಮಾಡಲು ಕಾನೂನು ಸಚಿವಾರದ ಡಾ.ಎಚ್.ಕೆ.ಪಾಟೀಲ್ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಭೆಯಲ್ಲಿ ಚರ್ಚೆಸಲಾಯಿತು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಧರ್ಮವೀರ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನಲ್ಲಿ ರಾಜ್ಯ ಸರ್ಕಾರಿ ಪ್ರಧಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು (ಕಾನೂನು ತೊಡಕು ತಿದ್ದುಪಡಿ) ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಎರ್ಪಡಿಸಿದ್ದ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಕಾನೂನು ಸಚಿವರಾದ ಡಾ.ಎಚ್.ಕೆ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಹಾಗೂ ಅಡ್ವೊಕೇಟ್ ಜನರಲ್ ಜಾಕ್ವೆಲ್ ಜೋತೆಗೆ ಅತಿಥಿ ಉಪನ್ಯಾಸಕರ ಪರವಾಗಿ ಸುಪ್ರೀಂಕೋಟ್ರ್ನ ಹಿರಿಯ ವಕೀಲರಾದ ಎಸ್.ಪಿ.ಕುಲಕರ್ಣಿರವರು, ಆಯುಕ್ತರಾದ ಕು.ಮಂಜುಶ್ರೀ ಅವರು ಉಪಸ್ಥಿತಿರಿದ್ದರು.
ಎಲ್ಲಾ ಅತಿಥಿ ಉಪನ್ಯಾಸಕರಿಗೂ (ಯುಜಿಸಿ ಅಂಡ್ ನಾನ್ ಯುಜಿಸಿ) ಎನ್ನದೆ ಒಂದು ಬಾರಿ ಸೇವಾ ಸಕ್ರಮಾತಿ ಮಾಡಲು ಕಾನೂನು ನುಯಮಾವಳಿಗಳನ್ನು ರೂಪಿಸುವಂತ್ತೆ ಅಡ್ವಕೇಟ್ ಜನರಲ್ ಅವರಿಗೆ ಸಚಿವರು ಸೂಚಿಸಿದ್ದು. 10-15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮಾನವೀಯ ದೃಷ್ಟಿಯಿಂದ ನ್ಯಾಯ ಒದಗಿಸುವ ಭರವಸೆ ನೀಡಿದರು. 2009ರ ಹಿಂದೆ ಪಡೆದ ಎಂಫಿಲ್ ಪದವಿಯನ್ನು ಪರಿಗಣಿಸಲು ಯುಜಿಸಿಗೆ ಇಲಾಖೆ ಪತ್ರ ಬರೆದಿದ್ದು, ಪತ್ರಬಂದ ನಂತರ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಸಭೆಯಲ್ಲಿ ಮಾತನಾಡುತ್ತ ಎಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣೆಗಾಗಿ ಇಲಾಖೆ ಮತ್ತು ಸರ್ಕಾರ ಶ್ರಮಿಸುತ್ತಿದ್ದು ಕಾನೂನು ಸಚಿವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೇವಾ ಸಕ್ರಮಾತಿ ಮಾಡಲು ಬದ್ದರಿದ್ದು, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಯಂತೆ ಅತಿಥಿ ಉಪನ್ಯಾಸಕರ ಸೇವೆಭದ್ರತೆ ಒದಗಿಸಲು ವಿಶೇಷ ನಿಯಮಾವಳಿಗಳನ್ನು ರೂಪಿಸಿಲಾಗುವುದು ಜೊತೆಗೆ ಇಂದಿನ ಸಭೆ ಫಲಪ್ರದಬಾಗಿದೆ ಎಂದು ತಿಳಿಸಿದರು.
ಇತಿಹಾಸದಲ್ಲೇ ಪ್ರಥಮಬಾರಿಗೆ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸಲು ಕಾನೂನು ಸಚಿವರು, ಶಿಕ್ಷಣ ಸಚಿವರು, ಆಯುಕ್ತರು ಜೊತೆಗೆ ಅಡ್ವಕೇಟ್ ಜನರಲ್ ಸೇರಿ ಸಭೆನಡೆಸಿ ಸಮಸ್ಯೆಗಳ ಪರಿಹಾರಕ್ಕೆ ನಾಂದಿ ಹಾಡಿರುವುದು ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ. ಇದು ಕಾರ್ಯಗತಗೊಂಡರೆ ಕಾಂಗ್ರೇಸ್ ಪಕ್ಷಕ್ಕೆ ದೀರ್ಘಕಾಲದ ಸಮಸ್ಯೆಯೊಂದಕ್ಕೆ ಶಾಶ್ವತ ಪರಿಹಾರ ಸೂಚಿಸಿದ ಯಶಸ್ಸು ದೊರೆಯುತ್ತದೆ ಎಂದು ಡಾ.ಧರ್ಮವೀರ ತಿಳಿಸಿದರು.
ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು