ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿಯಾಗಲಿ, ವಿಮಾನ ನಿಲ್ದಾಣ ಬರಲಿ, ಹಳ್ಳಿಗಳು ಅಭಿವೃದ್ಧಿ ಹೊಂದಿ ರೈತ ಮಕ್ಕಳಿಗೆ ಉದ್ಯೋಗ ಸಿಗಲಿ, ಮದ್ಯದಂಗಡಿಗಳ ಮುಚ್ಚಲಿ-ಶೃಂಗಸಭೆಯಲ್ಲಿ ಸ್ವಾಮೀಜಿಗಳ ಅಭಿಮತ

ತುಮಕೂರು : ತುಮಕೂರು ಜಿಲ್ಲೆಗೆ ಗಟ್ಟಿ ನಾಯಕತ್ವ ಬೇಕಾಗಿದ್ದು, ಆ ನಾಯಕತ್ವ ಗುಣಗಳು ಡಾ.ಜಿ.ಪರಮೇಶ್ವರ ಅವರಲ್ಲಿದ್ದು, ಮುಖ್ಯಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಅಗತ್ಯವಿದೆ ಎಂದು 50ಕ್ಕೂ ಹೆಚ್ಚು ಸ್ವಾಮೀಜಿಗಳು ತಮ್ಮ ಮನದಿಚ್ಛೆಯನ್ನು ಬಿಚ್ಚಿಟ್ಟರು.

ಆಗಸ್ಟ್ 6ರಂದು ಹಾಲಪ್ಪ ಪ್ರತಿಷ್ಠಾನದಿಂದ ತುಮಕೂರಿನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ ವಿವಿಧ ಸ್ವಾಮಿಗಳು ಈ ಮೇಲಿನ ಆಶಯವನ್ನು ವ್ಯಕ್ತಪಡಿಸಿದರು.

ಪಾವಗಡದ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿಗಳು ಮಾತನಾಡಿ ಪಾವಗಡ ತಾಲ್ಲೂಕು ಸೋಲಾರ್ ಪ್ಲಾಂಟ್‍ನಿಂದ ಭೂಮಿ ಬರಡು ಭೂಮಿಯಾಗಿ ಪರಿವರ್ತನೆಯಾಗುತ್ತಿದ್ದು, ಸೋಲಾರ್ ಪ್ಲಾಂಟ್ ಸಹ ಲಿಕ್ಕರ್ ಧಂದೆ ಇದ್ದಂತೆ, ಈ ಸೋಲಾರ್ ಸ್ಥಳಿಯರಿಗೆ ಯಾವುದೇ ಉದ್ಯೋಗವನ್ನು ನೀಡದೆ, ಪಾವಗಡ ತಾಲ್ಲೂಕಿನಲ್ಲಿ ಬೆಳೆಯುತ್ತಿದ್ದ ಕಡ್ಲೆಕಾಯಿಯನ್ನು ಬೆಳೆಯದೆ, ವರ್ಷಕ್ಕಿಷ್ಟು ಹಣ ಎಂಬುದಕ್ಕೆ ಭೂಮಿ ನೀಡಿ ಯುವಕರೆಲ್ಲಾ ಬೆಂಗಳೂರು ಸೇರುವಂತೆ ಮಾಡಲಾಗಿದೆ ಇದರಿಂದ ಹಳ್ಳಿಗಳೆಲ್ಲಾ ವದ್ಧಾಶ್ರಮಗಳಾಗಿವೆ, ಆರೋಗ್ಯಕ್ಕೆ ಸೂಕ್ತ ಪೆÇ್ರೀತ್ಸಾಹ ಸಿಗುತ್ತಿಲ್ಲ. ಶಿಕ್ಷಣದಲ್ಲಿ ಮಾನವೀಯ ಗುಣಗಳಿಲ್ಲ, ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಗೆ ಒಬ್ಬ ಒಳ್ಳೆಯ ನಾಯಕರು ಮುಖ್ಯಮಂತ್ರಿಯಾಗಬೇಕು ಎಂದರು.

ಜಿಲ್ಲೆಯಲ್ಲಿ ನಮಗೆ ಜಾಗ ಕೊಟ್ಟರೆ ಕ್ಯಾನ್ಸರ್, ಹೃದ್ರೋಗ ಆಸ್ಪತ್ರೆ ತೆರೆಯುವುದಾಗಿ ಜಪಾನಂದ ಸ್ವಾಮಿಗಳು ಹೇಳಿದರು.

ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮಿಗಳು ಮಾತನಾಡಿ ಹಳ್ಳಿಗಳನ್ನು ಅಳಿಸಿ, ಪಟ್ಟಣಗಳನ್ನು ಬೆಳೆಸಿ ಅನ್ನುತ್ತಿದ್ದಾರೆ, ಗೋಮಾಳಗಳನ್ನೆಲ್ಲಾ ನುಂಗಿ ಹಾಕಲಾಗಿದೆ, ಇರುವ ಗೋಮಾಳಗಳಲ್ಲಿ ಮರ-ಗಿಡ ನೆಡಿ ಎಂದು ಹೇಳಿದರೂ ಯಾರೂ ಕಿವಿಗೊಡುತ್ತಿಲ್ಲ, ಇರುವ ಗೋಮಾಳಗಳನ್ನು ರಿಯಲ್ ಎಸ್ಟೇಟ್ ಮಾಡಲು ಹೊರಟಿರುವುದು ಸರಿಯಲ್ಲ, ಮರ-ಗಿಡಗಳನ್ನು ಬೆಳೆಸಿದಲ್ಲಿ ಮಳೆ, ಬೆಳೆಯಾಗಲಿದೆ ಮರಗಿಡ ಬೆಳೆಸಲು ಭೂಮಿಯೇ ಇಲ್ಲ ಎಂದರೆ, ಮಳೆ ಎಲ್ಲಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಳ್ಳಿಗಳನ್ನು ಬೆಳಸಬೇಕು. ಪಟ್ಟಣದ ಅಭಿವೃದ್ಧಿಯಿಂದ ಸಮಸ್ಯೆಯಾಗಿದೆ. ಕೃಷಿ ಆಕರ್ಷಣೆ ಯಾಗಬೇಕು. ಹಳ್ಳಿ ಮತ್ತು ರೈತ ಮಕ್ಕಳಿಗೆ ಹೆಣ್ಣು ಸಿಗಬೇಕು, ಬೆಳೆಗೆ ಬೆಲೆ ಸಿಗಬೇಕು. ಪಟ್ಟಣಗಳ ಸುತ್ತಮುತ್ತ ರಿಯಲ್ ಎಸ್ಟೇಟ್ ಮಾಡುತ್ತಿರುವುದನ್ನು ನಿಲ್ಲಿಸಬೇಕು, ಮದ್ಯದ ಅಂಗಡಿ ತೆರೆದು ಕುಡಿಯಬೇಡಿ ಅನ್ನೋದು ಎಷ್ಟು ಸರಿ, ಮದ್ಯ ತಯಾರಿಕೆಯನ್ನೇ ನಿಲ್ಲಿಸಬೇಕು ಎಂದರು.

ಕೈಗಾರಿಕೆಗಳಲ್ಲಿ ಸ್ಥಳಗಳಲ್ಲಿ 50% ಉದ್ಯೋಗ ನೀಡಬೇಕು. ಈಗ ಸಮೃದ್ಧಿಯಾಗಿ ಮಳೆಯಾಗುತ್ತಾ ಇದೆ, ಹರಿದು ಹೋಗುತ್ತಿರುವ ನೀರನ್ನು ಕೆರೆ ಕಟ್ಟೆಗಳಿಗೆ ಹರಿಸಬೇಕು. ಭೂಮಿಗೆ ಬೀಜ ಹಾಕೋಣ ಒಂದಲ್ಲ ಒಂದು ದಿನ ಫಲ ಕೊಡುತ್ತದೆ ಎಂದ ಸಿದ್ಧಗಂಗಾ ಶ್ರೀಗಳು, ಇಂದು ಗೃಹ ಸಚಿವರ ಹುಟ್ಟಿದ ಹಬ್ಬ ಅವರಿಗೆ ಇನ್ನೂ ಉನ್ನತ ಅಧಿಕಾರ ಸಿಗಲಿ ಎಂದು ಹಾರೈಸೋಣ, ಆ ಮೂಲಕ ಜಿಲ್ಲೆಗೆ ಒಂದು ಗಟ್ಟಿ ನಾಯಕತ್ವ ಸಿಗಲಿ ಎಂದು ಹೇಳಿದರು.

ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಶ್ರೀಗಳು ಮಾತನಾಡಿ ಮನುಷ್ಯ ಸಮಾಜದ ಸಮಸ್ಯೆ ಮಹಾಪೂರ, ಅದನ್ನು ಯಾರಿಂದಲೂ ಪೂರೈಸಲು ಸಾಧ್ಯವಿಲ್ಲ, ಮನುಷ್ಯ ತನ್ನ ಆಸೆಗೆ ಮಿತಿ ಹಾಕಿಕೊಳ್ಳಬೇಕು, ಸರ್ಕಾರಕ್ಕೆ ಸಂಸ್ಕಾರ ಇದ್ದಾಗ, ಸಮಾಜದಲ್ಲಿ ಸಂಸ್ಕಾರ ಮೂಡುತ್ತದೆ, ಜಿಲ್ಲೆಯಲ್ಲಿ ಸ್ವಚ್ಚತಾ ಆಂದೋಲನ ಮಾಡಬೇಕು. ಹಾಸ್ಟಲ್ ಗಳಲ್ಲಿ ಶೌಚದ ಸಮಸ್ಯೆ ಇದ್ದು, ಶಿಸ್ತು, ಕಲಿಸಬೇಕು. ಅರಿವು ಮೂಡಿಸಬೇಕು, ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸುಮ್ಮನಿರಬಾರದು. ಸರ್ಕಾರಗಳು ನಿಷ್ಕ್ರಿಯ ವಾಗಿವೆ ಎಂದರು.

ಶಾಲಾ ಮಕ್ಕಳಿಗೆ ಚಾಲನಾ ಪರವಾನಗಿ ಇಲ್ಲ. ಪ್ರವಾಸೋದ್ಯಮ ಕುಡಿತದ ಕೇಂದ್ರಗಳಾಗಿವೆ. ದೇವರ ಸ್ಥಾನಗಳು ಬೆಳಿಗ್ಗೆ ಮುಜರಾಯಿ ಇಲಾಖೆ, ಸಂಜೆ ಅಬಕಾರಿ ಇಲಾಖೆ ಎನ್ನುವಂತಾಗಿದೆ, ಯುವಕರ, ಮಹಿಳೆಯರ, ಶಿಕ್ಷಕರ ಸಮ್ಮೇಳನ ಮಾಡಿ ಅರಿವು ಮೂಡಿಸಬೇಕಾಗಿದೆ, ಪರೀಕ್ಷಾ ನೆಪದಲ್ಲಿ ಸಿಸಿ ಕ್ಯಾಮರ ಹಾಕಿ ಮಕ್ಕಳನ್ನು ಕಿನ್ನತೆಗೆ ಒಳಪಡಿಸಬಾರದು ಎಂದು ಹೇಳಿದರು.

ಸಿದ್ದರಬೆಟ್ಟದ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಕೈಗಾರಿಕೆ ಬಂದಿದೆ, ಹಳ್ಳಿಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ.ತಾಂತ್ರಿಕ ಶಿಕ್ಷಣ ಅವರು ಪಡೆದಿಲ್ಲ. ತಾಂತ್ರಿಕ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು ತರಬೇಕು. ಮೆಟ್ರೋ ಬಂದರೆ ಬೆಂಗಳೂರು ರೀತಿ ತುಮಕೂರು ಬೆಳೆಯುತ್ತದೆ. ತುಮಕೂರಿಗೆ ವಿಮಾನ ನಿಲ್ದಾಣವಾಗಬೇಕು.
ರಾಜಕಾರಣಿಗಳ ಜೊತೆ ಶೃಂಗಸಭೆ ನಡೆಸಬೇಕು ಎಂದು ಹೇಳಿದರು.

ಶೃಂಗಸಭೆಯಲ್ಲಿ ಬಹುತೇಕ ಸ್ವಾಮೀಜಿಗಳು ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಪದವಿ ಸಿಕ್ಕಲ್ಲಿ ಜಿಲ್ಲೆ ಅಭಿವೃದ್ಧಿ ಹೊಂದಲಿದೆ. ಮೈಸೂರು, ಶವಮೊಗ್ಗ, ಹಾಸನ ಜಿಲ್ಲೆಗಳಿಗೆ ಮುಖ್ಯಮಂತ್ರಿ ಸ್ಥಾನ ದೊರೆತ್ತಿದ್ದರಿಂದ ಆ ಜಿಲ್ಲೆಗಳು ಬೆಂಗಳೂರಿಗೆ 70ಕಿ.ಮೀ.ದೂರದಲ್ಲಿರುವ ತುಮಕೂರಿಗಿಂತ ಚೆನ್ನಾಗಿ ಅಭಿವೃದ್ಧಿ ಹೊಂದಿವೆ, ತುಮಕೂರಿಗೂ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಬೆಂಗಳೂರಿಗೆ ಹತ್ತಿರ ಇರುವ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಈಗಾಗಲೇ ಎರಡು ಶೃಂಗ ಸಭೆಗಳನ್ನು ನಡೆಸಿದ್ದು, ಧಾರ್ಮಿಕ ಮುಖಂಡರ ಮೂಲಕ ಈ ಜಿಲ್ಲೆಯ ಅಗತ್ಯತೆಗಳೇನು, ಮತ್ತು ಅವುಗಳನ್ನು ಪಡೆಯಲು ಇರುವ ಅವಕಾಶಗಳ ಕುರಿತಂತೆ ಸಲಹೆ ಸೂಚನೆ ಪಡೆಯಲು ಶೃಂಗಸಭೆ ಆಯೋಜಿಸಲಾಗಿದೆ ಬೆಂಗಳೂರು ಹೌಸ್‍ಫುಲ್‍ಆಗಿದೆ. ಅಲ್ಲಿಯಒತ್ತಡಕಡಿಮೆಯಾಗಬೇಕೆಂದರೆ ಹತ್ತಿರದಲ್ಲಿಯೇಇರುವತುಮಕೂರಿಗೆಎಲ್ಲಾರೀತಿಯ ಸೌಲಭ್ಯಗಳು ದೊರೆಯಬೇಕು. ಇಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರೆ ಐಟಿ ಕಂಪನಿಗಳಿಗೆ ಜಾಗ ಒದಗಿಸಿದರೆ ಹೆಚ್ಚು ಬೆಳವಣಿಗೆಯನ್ನು ನಿರೀಕ್ಷಿಸಬಹುದು.ಇಲ್ಲಿರುವ ತಾಂತ್ರಿಕ ಕಾಲೇಜುಗಳನ್ನು ಉಪಯೋಗಿಸಿಕೊಂಡು ಈ ಕೆಲಸ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇಡಲಾಗಿದೆ ಎಂದರು.

ಇದು ಮೂರನೇ ಶೃಂಗಸಭೆ.ಕೃಷಿ, ಶಿಕ್ಷಣ, ಮಹಿಳಾ ಸಬಲೀಕರಣ,ಯುವಜನರಿಗಾಗಿ ವಿಶೇಷ ಯೋಜನೆಗಳ ಕುರಿತಂತೆ ಸ್ವಾಮೀಜಿಗಳು ನೀಡುವ ಸಂದೇಶವನ್ನುಸರಕಾರಕ್ಕೆ ತಲುಪಿಸಿ,ಜಿಲ್ಲೆಯ ಅಭಿವೃದ್ದಿಗೆ ಅದನ್ನು ಬಳಸಿಕೊಳ್ಳಲು ಮುಂದಾಗಿದ್ದೇವೆ.ಇದರಜೊತೆಗೆ,ಜಿಲ್ಲೆಯ ಸಮಗ್ರಅಭಿವೃದ್ದಿಗೆ ಇಚ್ಚಾಶಕ್ತಿ ಹೊಂದಿರುವ ರಾಜಕಾರಣಿಗೆ ಹೆಚ್ಚಿನ ಅಧಿಕಾರ ದೊರೆತರೆ ಸಾಧ್ಯ ಎಂದರು.

ಶೃಂಗಸಭೆಯಲ್ಲಿ 45ಕ್ಕೂ ಹೆಚ್ಚು ಸ್ವಾಮೀಜಿಗಳು, ರೈತರು, ಪ್ರಗತಿಪರರು, ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *