ಸಾರಿಗೆ ನೌಕರರ ಸಂಘ ಒಪ್ಪಿದರೆ 14 ಹಿಂಬಾಕಿ ಕೊಡಲು ಸಿದ್ದ- ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್

ಸಾರಿಗೆ ನೌಕರರ ಸಂಘದವರು ಒಪ್ಪಿಕೊಂಡರೆ 14 ತಿಂಗಳ 714 ಕೋಟಿ ಹಿಂಬಾಕಿ ಕೊಡಲು ಸರ್ಕಾರ ಸಿದ್ದವಿದೆ. ಅವರೇ ವೇತನ ಪರಿಷ್ಕರಣೆಯನ್ನು 4 ವರ್ಷಕ್ಕೆ ಮಾಡುವುದು ಎಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಈ ಒಡಂಬಡಿಕೆ ನಮ್ಮ ಸರ್ಕಾರದಲ್ಲಿ ಆಗಿಲ್ಲ. ಒಡಂಬಡಿಕೆಯಂತೆ ನಮ್ಮ ಸರ್ಕಾರ ವೇತನ ಪರಿಷ್ಕರಣೆ ಮಾಡಲಿದೆ ಎಂದು ಕೆಎಸ್ಆರ್ ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಹೇಳಿದರು.

ತುಮಕೂರು ನಗರದ ಡಿ. ದೇವರಾಜು ಅರಸು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜೋಗ್ ಪಾಲ್ಸ್‍ಗೆ ವಿಶೇಷ ಪ್ರವಾಸ ಪ್ಯಾಕೇಜ್ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆಯನ್ನು 2016 ರಲ್ಲಿ ಮಾಡಲಾಗಿತ್ತು. ಬಳಿಕ 2020 ರಲ್ಲಿ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು. ಆದರೆ ಕೊರೊನಾ ಬಂದಿದ್ದರಿಂದ ಆ ಸಂದರ್ಭದಲ್ಲಿ ಸರ್ಕಾರದಿಂದಲೇ ಸಂಸ್ಥೆಯ ನೌಕರರಿಗೆ ವೇತನ ಕೊಡಲಾಗಿತ್ತು. ಆ ಸಂದರ್ಭದಲ್ಲೂ ಸಹ ನೌಕರರು ಪ್ರತಿಭಟನೆ ಮಾಡಿದ್ದರು. ಆಗ ಶೇ. 15 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿತ್ತು.ವೇತನ ಪರಿಷ್ಕರಣೆಗೆ 1-3-2023ರಲ್ಲಿ ನೋಟಿಫಿಕೇಷನ್ ಆಗಿತ್ತು. ಆದರೆ 2020 ರಿಂದ 24ಕ್ಕೆ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಬೇಡಿಕೆಯಾಗಿದೆ. ಅಂದು ನೌಕರರ ಸಂಘದವರು 1-3-2023 ರಲ್ಲಿ ವೇತನ ಪರಿಷ್ಕರಣೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದರ ಪ್ರಕಾರ ನಮ್ಮ ಸರ್ಕಾರ 1-3-2027ಕ್ಕೆ ವೇತನ ಪರಿಷ್ಕರಣೆ ಮಾಡಬೇಕಾಗಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ನೌಕರರು 1800 ಕೋಟಿ ಹಿಂಬಾಕಿ ಇದೆ ಕೊಡಿ ಎಂದು ಕೇಳಿದ್ದಾರೆ. ಈ ಸಂಬಂಧ ಸರ್ಕಾರ ಒನ್ ಮ್ಯಾನ್ ಕಮಿಟಿ ಮಾಡಿತ್ತು. ಕೋವಿಡ್ ಇದ್ದ ಸಂದರ್ಭದ ಹಿಂಬಾಕಿ ಕೊಡಲು ಕಮಿಟಿ ಒಪ್ಪಿಲ್ಲ. ಸರ್ಕಾರ 14 ತಿಂಗಳ ಹಿಂಬಾಕಿ ಕೊಡಬಹುದು ಎಂದು ಕಮಿಟಿ ವರದಿಯಲ್ಲಿ ಹೇಳಿದೆ. ಹಾಗಾಗಿ ಕಮಿಟಿಯ ವರದಿ ಆಧಾರದಲ್ಲಿ 714 ಕೋಟಿ ಕೊಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದರು.

ವಿಧಾನಸಭೆ ಅಧಿವೇಶನ ಮುಗಿದ ನಂತರ ಕುಳಿತು ಚರ್ಚಿಸಲು ನೌಕರರ ಸಂಘದ ಪದಾದಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಆದರೂ ಕೂಡಾ ಅವರು ಪ್ರತಿಭಟನೆ ಮಾಡಿದ್ದಾರೆ. ಈ ಸಂಬಂಧ ನ್ಯಾಯಾಲಯ ಕೂಡಾ ಆ. 28ಕ್ಕೆ ತೀರ್ಪಿನ ಆದೇಶ ಮುಂದೂಡಿದೆ. ಈಗಲೂ ನೌಕರರ ಸಂಧಾನ ಸಭೆ ಮಾಡುತ್ತೇವೆ ಎಂದು ಹೇಳಿದರು.

ನೌಕರರ ಸಂಘದವರು ಒಪ್ಪಿಕೊಂಡರೆ 14 ತಿಂಗಳ 714 ಕೋಟಿ ಹಿಂಬಾಕಿ ಕೊಡಲು ಸರ್ಕಾರ ಸಿದ್ದವಿದೆ. ಅವರೇ ವೇತನ ಪರಿಷ್ಕರಣೆಯನ್ನು 4 ವರ್ಷಕ್ಕೆ ಮಾಡುವುದು ಎಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಈ ಒಡಂಬಡಿಕೆ ನಮ್ಮ ಸರ್ಕಾರದಲ್ಲಿ ಆಗಿಲ್ಲ. ಒಡಂಬಡಿಕೆಯಂತೆ ನಮ್ಮ ಸರ್ಕಾರ ವೇತನ ಪರಿಷ್ಕರಣೆ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ತಾಂತ್ರಿಕ ಅಭಿಯಂತರರಾದ ಆಸೀಫುಲ್ಲಾ ಷರೀಫ್, ಮಂಜುನಾಥ್, ತೇಜಸ್ ಇದ್ದರು.

ಜೋಗ್ ಪಾಲ್ಸ್ ಗೆ ಬಸ್ ಸೇವೆ:

ವಿಶ್ವ ವಿಖ್ಯಾತ ಜೋಗ್‍ಪಾಲ್ಸ್ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳುತ್ತಿದ್ದು, ಇವರ ಅನುಕೂಲಕ್ಕಾಗಿ ತುಮಕೂರಿನಿಂದ ಈ ವಿಶೇಷ ಪ್ರವಾಸ ಪ್ಯಾಕೇಜ್ ಸಾರಿಗೆ ಸಂಚಾರವನ್ನು ಆರಂಭಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಪ್ರವಾಸೋದ್ಯಮ ಉತ್ತೇಜನಗೊಳಿಸುವುದಕ್ಕಾಗಿ ಪ್ರತಿ ಭಾನುವಾರ ಮತ್ತು ರಜಾ ದಿನಗಳಲ್ಲಿ ಜೋಗ ಫಾಲ್ಸ್ ಮತ್ತು ಶಿವಮೊಗ್ಗ ಭಾಗದಲ್ಲಿರುವ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಲಾಗಿದೆ. ಈ ಪ್ರವಾಸಕ್ಕೆ ತೆರಳಲು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಸಾರ್ವಜನಿಕರು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *