ತುಮಕೂರು : ಪರಿಶಿಷ್ಟ ವರ್ಗದ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಮಾಜಿ ಸಂಸದ ಜಿ.ಎಸ್.ಬಸವರಾಜು ಖಂಡಿಸಿದ್ದಾರೆ.
ಸಹಕಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರು ಎಸ್ಟಿ ಸಮುದಾಯದ ಮುಖಂಡರು ಹಾಗೂ ದಲಿತ ನಾಯಕರು. ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದು, ಜಾತಿ ಧರ್ಮಗಳನ್ನು ಮೀರಿದ ಜನನಾಯಕ. ಸರ್ಕಾರ ಇವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವುದು ಖಂಡನೀಯ ಎಂದಿದ್ದಾರೆ.
ಇವರು ನೇರ ನುಡಿ ರಾಜಕಾರಣಿ, ಕ್ಷೇತ್ರದ ಜನರ ಸರ್ವಾಂಗಿಣ ಅಭಿವೃದ್ಧಿಗೆ ದುಡಿಯುವ ಹಠಗಾರರು, ಛಲಗಾರರು. ಸರ್ವ ಜನಾಂಗದ ಬಡ ಜನರಿಗೆ ಸಹಾಯ ಮಾಡಿರುವ ಇವರನ್ನು ವಜಾ ಮಾಡಿರುವುದು ವಿಷಾದಕರ ಎಂದು ಮಾಜಿ ಸಂಸದ ಜೆ.ಎಸ್.ಬಸವರಾಜ್ ರವರು ಬೇಸರ ವ್ಯಕ್ತಪಡಿಸಿದ್ದಾರೆ.