ಕೆ.ಎನ್‍.ಆರ್. ವಜಾ ಖಂಡಿಸಿ ಬೆಂಬಲಿಗರ ಬೃಹತ್ ಪ್ರತಿಭಟನೆ

ತುಮಕೂರು: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಒತ್ತಾಯಿಸಿ ಜಿಲ್ಲೆಯಾದ್ಯಂತ ಆಗಮಿಸಿದ್ದ ಸಹಸ್ರಾರು ಅಭಿಮಾನಿಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಕ್ಷದ ಹೈಕಮಾಂಡ್‍ಗೆ ತಪ್ಪು ಮಾಹಿತಿ ನೀಡಿದ ಕಾಣದ ಕೈಗಳ ಪಿತೂರಿಯಿಂದ ಕೆ.ಎನ್.ಆರ್ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎನ್.ಆರ್, ಆರ್.ಆರ್ ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ ಸಮಾಜಗಳ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರಪಾಲಿಕೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮುಖಂಡರು ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದರು. ಕೆ.ನ್.ರಾಜಣ್ಣನವರ ಭಾವಚಿತ್ರದ ಬಾವುಟ ಪ್ರದರ್ಶಿಸುತ್ತಾ, ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ, ಕೆ.ಎನ್.ರಾಜಣ್ಣನವರು ಯಾವ ತಪ್ಪು ಮಾಡಿದರು ಎಂದು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದಿರಿ? ಕನಿಷ್ಟ ಒಂದು ನೋಟೀಸೂ ಕೊಡದೆ, ಸಮಾಜಾಯಿಷಿಯನ್ನೂ ಕೇಳದೆ, ಅಷ್ಟೂ ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಲು ಶ್ರಮಿಸಿದ ಪ್ರಭಾವಿ ನಾಯಕನನ್ನು ಏಕಾಏಕಿ ಸಚಿವ ಸಂಪುಟದಿಂದ ತೆಗೆದು ಅಪಮಾನ ಮಾಡಲಾಗಿದೆ. ಇದರ ಹಿಂದೆ ಕೆಲವರ ಪಿತೂರಿ ಇದೆ. ವಾಲ್ಮೀಕಿ ಸಮಾಜವನ್ನು ತುಳಿಯುವ ಹುನ್ನಾರ ನಡೆದಿದೆ. ಹಿಂದೆ ನಾಗೇಂದ್ರ, ಈಗ ಕೆ.ಎನ್.ರಾಜಣ್ಣನವರನ್ನು ರಾಜಕೀಯವಾಗಿ ತುಳಿಯಲಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 174 ತಾಲ್ಲೂಕುಗಳಲ್ಲಿ ವಾಲ್ಮೀಕಿ ಸಮಾಜದವರು ಚುನಾವಣೆ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಅವರು, ವಜಾ ಆದೇಶವನ್ನು ಕೂಡಲೇ ವಾಪಸ್ ಪಡೆದು ಕೆ.ಎನ್.ರಾಜಣ್ಣನವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು. ಅಲ್ಲಿಯತನಕ ನಿರಂತರವಾಗಿ ಹೋರಾಟ ಮುಂದುವರೆಸುವುದಾಗಿ ಹೇಳಿದರು.

ಮುಖಂಡ ಕಲ್ಲಹಳ್ಳಿ ದೇವರಾಜು ಮಾತನಾಡಿ, ಸುಮಾರು 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು, ಸಹಕಾರ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಕೆ.ಎನ್.ರಾಜಣ್ಣನವರನ್ನು ಪಿತೂರಿ ಮಾಡಿ ಸಚಿವ ಸ್ಥಾನದಿಂದ ತೆಗೆದಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ನೋವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮತ್ತೆ ಸ್ಥಾನಮಾನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಎನ್.ಗಂಗಣ್ಣ ಮಾತನಾಡಿ, ಕೆ.ಎನ್.ರಾಜಣ್ಣನವರ ಹೇಳಿಕೆಯನ್ನು ತಿರುಚಿ, ತಪ್ಪಾಗಿ ಬಿಂಬಿಸಿ ಅವರ ವಿರುದ್ಧ ಷಡ್ಯಂತರ ಮಾಡಲಾಗಿದೆ. ರಾಜಣ್ಣನವರು ಕಾಂಗ್ರೆಸ್ ಪಕ್ಷದ ಸಂಘಟನಾ ಶಕ್ತಿಯಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರವಂತಹ ಸಂಘಟನಾ ಸಾಮಥ್ರ್ಯ ಹೊಂದಿದ್ದಾರೆ. ಇವರಿಗೆ ಮಂತ್ರಿ ಸ್ಥಾನ ವಂಚಿಸಿ ಅವಮಾನ ಮಾಡಿರುವುದು ಖಂಡನೀಯ. ಪಕ್ಷದ ಬೆಳವಣಿಗೆಗೆ ಕೆ.ಎನ್.ಆರ್ ಆವರಿಗೆ ಮತ್ತೆ ಗೌರವದ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಜಿಲ್ಲೆಯ ಬಡ ಜನರ ಪಾಲಿಗೆ ದೇವರಾಜ ಅರಸು ಆಗಿ ಸೇವೆ ಮಾಡುತ್ತಿರುವ ಕೆ.ಎನ್.ರಾಜಣ್ಣನವರಿಗೆ ಈ ರೀತಿ ಅಪಮಾನ ಮಾಡಿರುವುದನ್ನು ಸಹಿಸಲಾಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇವರು ಕೊಟ್ಟ ಕೊಡುಗೆ, ಮಾಡಿದ ತ್ಯಾಗವನ್ನೂ ಗುರುತಿಸದೆ ಸಚಿವ ಸ್ಥಾನ ವಂಚಿಸಿರುವುದು ಅಭಿಮಾನಿಗಳಿಗೆ ದು:ಖವಾಗಿದೆ. ಪುನ: ಸಚಿವ ಸ್ಥಾನ ನೀಡದಿದ್ದರೆ ಅಭಿಮಾನಿಗಳನ್ನು ಕಾಂಗ್ರೆಸ್ ಪಕ್ಷ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗಳಿಸಲು ಕೆ.ಎನ್.ಆರ್ ಕೊಡುಗೆ ಇದೆ. 30 ವರ್ಷಗಳಿಂದ ಕಾಂಗ್ರೆಸ್ ಗೆಲುವು ಸಾಧ್ಯವಾಗದ ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆಯಲು ಅಲ್ಲಿನ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರು ಪಕ್ಷನಿಷ್ಠೆ ಕಾರ್ಯತಂತ್ರ ಕಾರಣ. ಸರ್ಕಾರದ ಅನೇಕ ಯೋಜನೆಗಳಿಗೆ ಪ್ರೇರಣೆಯಾಗಿರುವ ಪ್ರಭಾವಿ ನಾಯಕ ರಾಜಣ್ಣನವರನ್ನು ಸಚಿವ ಸ್ಥಾನದಿಂದ ತೆಗೆದಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷ ಮತ್ತಷ್ಟು ಸದೃಢವಾಗಿ ಸಂಘಟನೆಯಾಗಬೇಕಾದರೆ ಕೆ.ಎನ್.ರಾಜಣ್ಣನವರಿಗೆ ಮತ್ತೆ ಗೌರವದ ಸ್ಥಾನಮಾನ ನೀಡಬೇಕು. ಇಲ್ಲವಾದಲ್ಲಿ ತುಮಕೂರು ಬಂದ್ ಮಾಡಿ, ನಿರಂತರ ಹೋರಾಟ ನಡೆಸುವುದಾಗಿ ಹೇಳಿದರು.

ನಗರ ಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ಜಿಲ್ಲಾ ವಾಲ್ಮೀಕಿ ಸಂಘದ ಕಾರ್ಯದರ್ಶಿ, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ವಿವಿಧ ಸಂಘಸಂಸ್ಥೆಗಳ ಮುಖಂಡರಾದ ಜಿ.ಜೆ.ರಾಜಣ್ಣ, ಮಿಡಿಗೇಶಿ ಮಲ್ಲಿಕಾರ್ಜುನಯ್ಯ, ಪಿ.ಮೂರ್ತಿ, ಜಿ.ಆರ್.ರವಿ, ನಾಗೇಶ್‍ಬಾಬು, ಬಿ.ಜಿ.ವೆಂಕಟೇಗೌಡ, ಲಕ್ಷ್ಮೀನಾರಾಯಣ, ನಾರಾಯಣಗೌಡ, ತರಕಾರಿ ನಾಗರಾಜ್, ಟಿ.ವಿ.ಮಹಾಲಿಂಗಪ್ಪ, ರಾಮಚಂದ್ರಯ್ಯ, ಕೆಂಪಹನುಮಯ್ಯ, ಕುಂದೂರು ತಿಮ್ಮಯ್ಯ, ಪ್ರತಾಪ್ ಮದಕರಿ, ಮಾರುತಿ ಗಂಗಹನುಮಯ್ಯ, ನರಸೀಯಪ್ಪ, ಹೆಚ್.ಆರ್.ಹನುಮಂತರಾಯಪ್ಪ, ನಿಸಾರ್ ಅಹ್ಮದ್, ಕಿಡಿಗಣ್ಣಪ್ಪ, ಮಲ್ಲಸಂದ್ರ ಶಿವಣ್ಣ, ವೆಂಕಟಾಚಲ, ಶಾಂತಕುಮಾರ್, ಗುರುರಾಘವೇಂದ್ರ, ಶ್ರೀಧರ್, ಮಂಜೇಶ್ ಸೇರಿದಂತೆ ವಕೀಲರು, ವಿವಿಧ ಸಹಕಾರ ಸಂಸ್ಥೆಗಳ ಮುಖಂಡರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸದಸ್ಯರು, ವಿವಿಧ ಸಮಾಜಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿ

Leave a Reply

Your email address will not be published. Required fields are marked *