ಪಿ.ಯು.ಗಣಿತವನ್ನು ಸುಸಲಿತವಾಗಿ ಬೋಧಿಸಿ – ಡಾ.ಬಾಲಗುರುಮೂರ್ತಿ

ತುಮಕೂರು : ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಬಹಳಷ್ಟು ಆರ್ಥಿಕವಾಗಿ ಹಿಂದುಳಿದಿದ್ದು ಅಂತಹವರನ್ನೂ ಆಕರ್ಷಿಸುವ ರೀತಿಯಲ್ಲಿ, ಸುಲಲಿತವಾಗಿ ಗಣಿತ ಪಾಠ ಬೋಧನೆ ಮಾಡಬೇಕೆಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಡಾ.ಬಾಲಗುರುಮೂರ್ತಿ ತಿಳಿಸಿದರು.

ಅವರು ಆಗಸ್ಟ್ 19 ರ ಮಂಗಳವಾರ ಸರ್ವೋದಯ ಕಾಲೇಜಿನಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) , ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಗಣಿತ ಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ಸರ್ವೋದಯ ಪದವಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗಣಿತಸಾಸ್ತ್ರ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಗಣಿತವನ್ನು ಸುಲಲಿತವಗಿ ಕೊನೆಯ ಬೆಂಚಿನ ವಿದ್ಯಾರ್ಥಿಗಳನ್ನೂ ತಲುಪುವಂತೆ ಮನಮುಟ್ಟುವಂತೆ ಹೇಗೆ ಪಾಠ ಮಾಡಬೇಕೆಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಎಲ್ಲಾ ಕಾಲೇಜುಗಳಲ್ಲಿ ಅತಿಹೆಚ್ಚು ಫಲಿತಾಂಶ ಬರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕೆಂದು ಉಪನ್ಯಾಸಕರಿಗೆ ತಿಳಿಸಿದರು.

ಗಣಿತ ಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಕೆ.ಆರ್. ಲೋಕೇಶ್ ಬಾಬುರವರು ಪ್ರಾಸ್ತಾವಿಕ ಮಾತನಾಡಿ ಕಾರ್ಯಾಗಾರದ ಉದ್ದೇಶಗಳು ಮತ್ತು ಪ್ರತಿಭಾ ಪುರಸ್ಕಾರದ ಆಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಧ್ಯದಲ್ಲೇ ನಿವೃತ್ತಿಯಾಗಲಿರುವ ಉಪನ್ಯಾಸಕರÀನ್ನು ಉಪ ನಿರ್ದೇಶಕರು ಸನ್ಮಾನ ಮಾಡಿದರು.

ಸಂಪನ್ಮೂಲ ವ್ಯಕ್ತಿ ವಾಸುದೇವ ಮೂರ್ತಿ ಮಾತನಾಡಿ ಕೌಶಲ್ಯ ಆಧಾರಿತ ಪ್ರಶ್ನೆಗಳು ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳಲ್ಲಿ ಹೇಗೆ ರೂಪಿಸಬಹುದು ಮತ್ತು ಅವುಗಳನ್ನು ಬಿಡಿಸುವ ವಿಧಾನಗಳನ್ನು ತಿಳಿಸಿಕೊಟ್ಟರು.

ಎರಡನೇ ಗೋಷ್ಠಿಯಲ್ಲಿ ಮಾತನಾಡಿದ ಪ್ರೇರಣಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚೋಳ ಸತೀಶ್‍ಕುಮಾರ್ ಅವರು ಪಿಯುಸಿ ವಿದ್ಯಾರ್ಥಿಗಳೂ ಪಾಸಿಂಗ್ ಪ್ಯಾಕೇಜ್‍ನ್ನು ವಿವರಿಸಿದರು.

ಮೂರನೇ ಗೋಷ್ಠಿಯಲ್ಲ್ಲಿ ಕುಣಿಗಲ್ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕಿ ಶ್ರೀಮತಿ ನಿರ್ಮಲ ಹೆಚ್.ಆರ್. ಅವರು ಬೋಧನೆಯಲ್ಲಿ ಪರಿಣಾಮಕಾರಿ ಹೊಸ ವಿಧಾನಗಳ ಅಳವಡಿಕೆಗಳ ಬಗ್ಗೆ ವಿವರಿಸಿದರು.

ನಾಲ್ಕನೇ ಗೋಷ್ಠಿಯಲ್ಲಿ ಸರ್ವೋದಯ ಕಾಲೇಜು ಉಪನ್ಯಾಸಕ ಕೃಷ್ಣ ಚೈತನ್ಯ ಮಾತನಾಡಿ ದಿನ ನಿತ್ಯದ ಬದುಕಿನಲ್ಲಿ ಗಣಿತದ ಉಪಯೋಗಗಳನ್ನು ತಿಳಿಸಿದರು.

ಅಧ್ಯಕ್ಷತೆಯನ್ನು ಸರ್ವೋದಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಟಿ.ಜಿ.ಜಮುನಾರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಜಿ.ಸೀತಾರಂ, ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಸರ್ವೋದಯ ಪದವಿ ಕಾಲೇಜು ಪ್ರಾಚಾರ್ಯರಾದ ಹೆಚ್.ಆರ್.ಕಮಲ, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಪುಷ್ಪಾವತಿ, ಎಂ.ಬಿ.ಲೋಕೇಶ್, ಖಜಾಂಚಿ ವಸಂತಕುಮಾರ್ ಹಾಗೂ ತಾಲ್ಲೂಕು ಪ್ರತಿನಿಧಿಗಳು ಉಪಸ್ಥಿತರಿದ್ದರು.

ಉಪನ್ಯಾಸಕಿ ಶ್ರೀಮತಿ ಪುಷ್ಪಾ ಸ್ವಾಗತಿಸಿ, ಉಪನ್ಯಾಸಕರಾದ ಹನುಮಂತಯ್ಯ ನಿರೂಪಿಸಿ, ಉಪನ್ಯಾಸಕರಾದ ಜಾನಕಿರಾಮ್ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *