ತುಮಕೂರು : ತುಮಕೂರಿನಲ್ಲಿ ಕಾಂಗ್ರೆಸ್ ಭವನ ಕಟ್ಟಲು ಎರಡು ಎಕರೆ ಜಮೀನನ್ನು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದನ್ನು ರಾಜ್ಯ ಸರ್ಕಾರ ಸ್ಪಷ್ಟ ಉತ್ತರವನ್ನು ಜನತೆಗೆ ತಿಳಿಸಬೇಕೆಂದು ಕೇಂದ್ರ ಜಲ ಸಂಪನ್ಮೂಲ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಆಗ್ರಹಿಸಿದರು.
ಅವರಿಂದು ತುಮಕೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮತನಾಡಿ ಗೃಹ ಸಚಿವರು ಮತ್ತು ಜಿಲ್ಲಾ ಸಚಿವರಾದ ಡಾ ಜಿ ಪರಮೇಶ್ವರ್ ರವರು ಕಾಂಗ್ರೆಸ್ ಕಚೇರಿ ಕಟ್ಟಲು ಕಸವಿಲೇವಾರಿ ಮಾಡುವ ಮಹಾನಗರ ಪಾಲಿಕೆಯ ಜಾಗವೇ ಬೇಕಿತ್ತಾ ಎಂದು ಲೇವಡಿ ಮಾಡಿದರು.
ಮೈಸೂರು ಮಹಾರಜರು 1943ರಲ್ಲಿ ಕಸ ಹಾಕಲು ನೀಡಿದಂತಹ ಜಮೀನನ್ನು ಇಂದು ಕಾನೂನು ಬಾಹಿರವಾಗಿ ಕಾಂಗ್ರೆಸ್ ಭವನ ಕಟ್ಟಲು ಸರ್ಕಾರ ಮಂಜೂರು ಮಾಡಿರುವುದು ಸರಿಯಲ್ಲ, ಈಗಲೂ ಆ ಜಮೀನು ಶ್ರೀಮತಿ ಗಂಗಮ್ಮ ಕೋಂ ಕೋದಂಡರಾಮಯ್ಯ ಅವರು ತಮಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ಧಾವೆ ಹೂಡಿದ್ದರೂ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಿರುವುದು ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ತಿಳಿಸಿದರು.
ಈ ಜಾಗವನ್ನು ಕಾಂಗ್ರೆಸ್ ಗೆ ಮಂಜೂರು ಮಾಡಿರುವ ಜಾಗವನ್ನು ನೊಂದಾವಣಿ ಮಾಡಬಾರದು ಎಂದು ಬಿಜೆಪಿ ಕಾರ್ಯಕರ್ತರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದರೆ ಪೊಲೀಸರಿಂದ ಬೆದರಿಕೆ ಮತ್ತು ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇನೆ ಎಂದ ಸೋಮಣ್ಣ ಪೆÇಲೀಸ್ ನವರು ತಾರತಮ್ಯ ಮಾಡಬಾರದು ಇಂದು ಕಾಂಗ್ರೆಸ್ ಇರುತ್ತದೆ ನಾಳೆ ಬಿಜೆಪಿ ಸರ್ಕಾರ ರಚನೆ ಮಾಡಬಹುದು ಎಂದು ಪರೋಕ್ಷವಾಗಿ ಎಚ್ಚರಿಸಿದರು.
ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಈ ಜಾಗವನ್ನು ಕೈಬಿಡಬೇಕು, ಎಸ್ ಆರ್ ವ್ಯಾಲ್ಯು ಶೇ 5% ಮಾಡಲಾಗಿದೆ ಇದು ಯಾವ ನೀತಿ.ಪರಮೇಶ್ವರ್ ರವರು ಸಜ್ಜನ ರಾಜಕಾರಣಿ ಎಂದು ಭಾವಿಸಿದೇನೆ ಈ ಜಾಗದಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಬಾರದು ಎಂದು ಕಿವಿ ಮಾತೇಳಿದರು.
ಟಂಡರ್ ನಲ್ಲಿ ಜಮೀನು ನೀಡಬೇಕಿತ್ತು. ಹೀಗೆ ಮಾಡುವುದರಿಂದೇನು ಪ್ರಯೋಜನ. ಹೇಯವಾದ ಕಾರ್ಯ, ಸಾಮಾನ್ಯ ಜನ ಖಾತೆ ಮಾಡಿಸಲು ಪರದಾಟ. ಸ್ವಲ್ಪವಾದರೂ ಮರ್ಯಾದೆ ಇಲ್ಲ, ಸಾಮಾನ್ಯ ಜನರಿಗೊಂದು ಕಾನೂನು, ಬೇರೆಯವರಿಗೊಂದು ಕಾನೂನು ಜಮೀನನ್ನು ಕೂಡಲೇ ಮಹಾನಗರ ನಗರ ಪಾಲಿಕೆಗೆ ವಾಪಸ್ಸು ನೀಡಬೇಕೆಂದು ಆಗ್ರಹಿಸಿದರು.
ಚೆನೈ ಬೆಂಗಳೂರು ಮತ್ತು ತುಮಕೂರು ರವರೆಗೆ ರೈಲ್ವೆ ಕಾರಿಡಾರನ್ನು ವಿಸ್ತರಿಸಲಾಗುವುದು ಇನ್ನೂ ಹತ್ತು ವರ್ಷಕ್ಕೆ ತುಮಕೂರು ಬೆಂಗಳೂರು ಯಾವುದೆಂದು ಹೇಳಲು ಸಾದ್ಯವಾಗದಷ್ಟು ಬೆಳವಣಿಗೆ ಹೊಂದುತ್ತದೆ.ತುಮಕೂರು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 80 ಕೋಟಿ ಬಿಡುಗಡೆ ಮಾಡಿಸಲಾಗಿದೆ ಮುಂದಿನ ದಿನದಲ್ಲಿ ಹೈ ಟೇಕ್ ಪ್ಲಾಟ್ ಪಾರಂಗಳನ್ನು ನಿರ್ಮಾಣ ಮಾಡಲಾಗುತ್ತದೆ. ತುಮಕೂರು ರಾಯದುರ್ಗ,ತುಮಕೂರು ದಾವಣಗೆರೆ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ.ತುಮಕೂರು ಸಮೀಪದ ಊರುಕೆರೆಯಲ್ಲಿ ರಾಯದುರ್ಗ ಮತ್ತು ದಾವಣಗೆರೆ ರೈಲ್ವೆ ಮಾರ್ಗಗಳು ಸಂದಿಸುವ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸೋಮಣ್ಣ ಹೇಳಿದರು.
ಧರ್ಮಸ್ಥಳ ಘಟನೆ ಬಗ್ಗೆ ಇಡಿ ವಿಶ್ವವೆ ನೋಡಿದೆ ಕೋಟ್ಯಾಂತರ ಭಕ್ತರಿಗೆ ನೋವಾಗಿದೆ.ಯಾರ,ಯಾರ ಮಾತುಗಳನ್ನು ಕೇಳಿಕೊಂಡು ಸಿದ್ದರಾಮಯ್ಯ ಎಸ್.ಐ.ಟಿ ಮಾಡಿ ತಪ್ಪು ಕೆಲಸ ಮಾಡಿದ್ದಾರೆ, ಇದು ಅವರಿಗೆ ಕುತ್ತು ತರಲಿದೆ, ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸಕ್ಕೆ ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಕೇಳಲಿ ಎಂದು ಹೇಳಿದರು.
ಪದೇ ಪದೇ ಗೋವಿಂದರಾಜ ನಗರ ಎಂಬುದಕ್ಕೆ ಆಕ್ಷೇಪ :
ಸಚಿವ ವಿ.ಸೋಮಣ್ಣನವರು ಪದೇ ಪದೇ ಬೆಂಗಳೂರಿನ ಗೋವಿಂದರಾಜ ನಗರವನ್ನು ಹೇಗೆ ಅಭಿವೃದ್ಧಿ ಮಾಡಿದ್ದೇನೆ ನೋಡಿಕೊಂಡು ಬನ್ನಿ ಎಂದು ಹೇಳುವುದಕ್ಕೆ ಪತ್ರಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ನೀವು ತುಮಕೂರಿನಿಂದ ಗೆದ್ದಿರುವುದು ತುಮಕೂರಿನ ಹೆಸರೇಳಿ ಎಂದಾಗ, ಇನ್ನು ಮುಂದೆ ಗೋವಿಂದರಾಜ ನಗರದ ಹೆಸರು ಹೇಳುವುದಿಲ್ಲ ಎಂದು ಸಿಟ್ಟಾಗಿ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಜಿ ಎಸ್ ಬಸವರಾಜು, ಮಾಜಿ ಶಾಸಕ ಹೆಚ್ ನಿಂಗಪ್ಪ, ಮಾಜಿ ಜಿ ಪಂ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ,ಬಿಜೆಪಿ ಮುಖಂಡರಾದ ಶಿವಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.