ಬೆಂಗಳೂರು : ಅಲೆಮಾರಿ ಸಮುದಾಯಗಳಿಗೆ ಎಡ- ಬಲ ತಲಾ ಶೇಕಡ ಅರ್ಧದಷ್ಟು ಮತ್ತು ಸ್ಪರ್ಶ ಜಾತಿಗಳು ಶೇಕಡ ಒಂದರಷ್ಟು ಬಿಟ್ಟು ಕೊಡಬೇಕೆಂಬುದಕ್ಕೆ ಒಪ್ಪಬೇಕು, ಈ ನಿರ್ಣಯವನ್ನು ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಲು ಸಾಹಿತಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇಂದು ಬೆಂಗಳೂರಿನ ಶಾಸಕರ ಭವನದಲ್ಲಿ ಕರೆಯಲಾಗಿದ್ದ ಅಲೆಮಾರಿಗಳಿಗೆ ಒಳಮೀಸಲಾತಿ ಯಲ್ಲಿ ಆಗಿರುವ ಅನ್ಯಾಯವನ್ನು ಸರ ಪಡಿಸುವ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಈ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಯೂ ತಬ್ಬಲಿ ಅಲೆಮಾರಿ ಸಮುದಾಯದ ಮುಖಂಡರು ದುಕ್ಕಳಿಸಿ ಅತ್ತಿದ್ದು, ಅವರಿಗಾದ ಘನಘೋರ ಅನ್ಯಾಯ ಹೇಗಿದೆ ಎಂಬುದು ಎದ್ದು ಕಾಣುವಂತಿತ್ತು.
ಸಭೆಯಲ್ಲಿ ಮಾದಿಗ ಸಂಬಂಧಿತ ಅಲೆಮಾರಿ ಜಾತಿಗಳಿಗೆ ಮಾದಿಗ ಒಳಮೀಸಲಾತಿಯಲ್ಲಿ ಶೇಕಡ ಅರ್ಧ ಬಿಟ್ಟು ಕೊಡುವುದು, ಹೊಲೆಯ ಸಂಬಂಧಿತ ಅಲೆಮಾರಿ ಜಾತಿಗಳಿಗೆ ಹೊಲೆಯ ಒಳಮೀಸಲಾತಿಯಲ್ಲಿ ಶೇಕಡ ಅರ್ಧ ಬಿಟ್ಟು ಕೊಡುವುದು, ಮತ್ತು ಉಳಿದ ಅಲೆಮಾರಿ ಜಾತಿಗಳಿಗೆ ಸ್ಪರ್ಶ ಜಾತಿಗಳ ಶೇಕಡ ಒಂದರಷ್ಟು ಮೀಸಲಾತಿಯನ್ನು ಬಿಟ್ಟು ಕೊಡಬೇಕೆಂದು ಸಾಹಿತಿಗಳ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಈ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಗೆ ಈ ಸಾಹಿತಿಗಳ ನಿಯೋಗ ಹೋಗಿ ಇಂದು ತೆಗೆದುಕೊಂಡ ನಿರ್ಣಯವನ್ನು ಮನದಟ್ಟು ಮಾಡುವುದು.
ಒಳಮೀಸಲಾತಿ ಜಾರಿಗೆ ಬರಬೇಕು ಎಂಬ ಆಗ್ರಹಕ್ಕೆ ಮೂಲ ಕಾರಣವೇ ಅತಿ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಆದ್ಯತೆಯ ಮೇರೆಗೆ ಮೀಸಲಾತಿ ಸೌಲಭ್ಯ ಸಿಗಬೇಕು ಎಂಬುದಾಗಿತ್ತು, ಆದರೆ ರಾಜ್ಯ ಸರಕಾರ ಇನ್ನೂ ಅಕ್ಷರವನ್ನೆ ನೋಡದ ಅನೇಕ ಅಲೆಮಾರಿ ಸಮುದಾಯವನ್ನು ಅಕ್ಷರಸ್ಥ ಮತ್ತು ಮುಂದುವರಿದ ಜಾತಿಗಳ ಜೊತೆಗೆ ಸೇರಿಸಿ ಒಳಮೀಸಲಾತಿ ಕಲ್ಪಿಸಿರುವುದು ಸಾಮಾಜಿಕ ನ್ಯಾಯಕ್ಕೆ ಮಾಡಿದ ದ್ರೋಹವಾಗಿದೆ.
ಇಬ್ಬರು ಸಮಾನರ ನಡುವೆ ಸ್ಪರ್ಧೆ ನಡೆದರೆ ಅದು ಸಮಾನತೆ, ಬಲಿಷ್ಠರು ಮತ್ತು ಅಸಹಾಯಕ ನಡುವೆ ಸ್ಪರ್ಧೆ ನಿರ್ಮಿಸಿ ಪ್ರಾತಿನಿಧ್ಯ ಪಡೆಯಿರಿ ಎಂದರೇನೆ ಅಸಮಾನತೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ರಾಜಕಾರಣ ಮತ್ತು ಜನಸಂಖ್ಯಾವಾರು ಜಾತಿ ಪ್ರಾಬಲ್ಯ ಬಲಿಷ್ಠವಾದರೆ, ನ್ಯಾವ್ಯಾರು ಸಾಮಾಜಿಕ ಸಮಾನತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಈ ನಿರ್ಣಯವನ್ನು ಒಪ್ಪದೆ ಅಲೆಮಾರಿಗಳಿಗೆ ಒಳಮೀಸಲಾತಿ ಕಲ್ಪಿಸದಿದ್ದರೆ ಒಳಮೀಸಲಾತಿ ವಂಚಿತ ಅಲೆಮಾರಿ ಸಮುದಾಯಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂಬ ನಿರ್ಣಯವನ್ನು ಸಹ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಾಹಿತಿಗಳಾದ ರಹಮತ್ ತರೀಕೆರೆ, ರಾಜಪ್ಪ ದಳವಾಯಿ, ಎಲ್.ಎನ್.ಮೂರ್ತಿ, ಕೆ.ಪಿ.ಲಕ್ಷ್ಮಣ್, ಹುಲಿಕುಂಟೆ ಮೂರ್ತಿ, ಬಾಲಗುರುಮೂರ್ತಿ, ವಿರೂಪಾಕ್ಷ ಡಾಗೇರಹಳ್ಳಿ, ಡಿ.ಟಿ.ವೆಂಕಟೇಶ್, ಮನುಚಕ್ರವರ್ತಿ ,ಹಂದಿಜೋಗಿ ಸಂಘದ ರಾಜ್ಯಾಧಕ್ಷರಾದ ರಾಜೇಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು, ಎಂ.ವಿ. ವೆಂಕಟರಮಣಯ್ಯ, ತಿಮ್ಮಪ್ಪ ಸೇರಿದಂತೆ ಹಲವಾರು ಸಾಹಿತಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೊಂಬಿದಾಸ, ಹಂದಿಜೋಗಿ, ಸುಡುಗಾಡು ಸಿದ್ದ, ದಕ್ಕಲಿಗ, ಮುಂತಾದ ಅಲೆಮಾರಿ ಸಮುದಾಯದ ಮುಖಂಡರು ಭಾಗವಹಿಸಿ ತಮ್ಮ ಸಮುದಾಯಗಳಿಗೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಬಿಚ್ಚಿಟ್ಡರು.
ಕೆಲ ಅಲೆಮಾರಿ ಸಮುದಾಯಗಳ ಮುಖಂಡರು ಮಾತನಾಡುವಾಗ ಕಣ್ಣೀರು ಹಾಕಿದ್ದು ಸಾಹಿತಿಗಳಿಗೆ ಈ ಸಮುದಾಯಗಳ ತಬ್ಬಲಿತನ ಹೇಗಿದೆ ಎಂದು ಮನ ನೊಂದುಕೊಂಡರು. ಅದರಲ್ಲೂ ಚಿಕ್ಕನಾಯಕನಹಳ್ಳಿ ಯ ದಕ್ಕಲಿಗ ಸಮಾಜದ ಶಾಂತಪ್ಪ ದುಕ್ಕಳಿಸಿ ಅತ್ತಿದ್ದು ಎಂತಹವರ ಮನಕಲಕುವಂತಿತ್ತು.