ತುಮಕೂರು : ಜಡವಾಗಿರುವ ಆರ್ಥಿಕ ವಲಯಕ್ಕೆ ಆರ್ಥಿಕ ಚಲನೆ ಸಿಕ್ಕಿ ಆಪ್ತ ವಲಯ ಸೃಷ್ಠಿಯಾಗಿ ಜಾತಿ ವ್ಯವಸ್ಥೆಯನ್ನು ತಗ್ಗಿಸಿ, ಸಾಮಾಜಿಕ ದೃಢತೆ ಕಾಣಲು ಸಹಕಾರಿ ಸಂಘಗಳಿಂದ ಸಾಧ್ಯವಾಗಬಹುದೆಂದು ಚಿಂತಕ ಕೆ.ದೊರೈರಾಜ್ ಹೇಳಿದರು.
ಅವರಿಂದು ನಗರದ ಮಹಾತ್ಮ ಗಾಂಧಿ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಸೆಪ್ಟಂಬರ್ 13ರಂದು ಏರ್ಪಡಿಸಿದ್ದ ಮಾನವ ಮಂಟಪ ಸಹಕಾರ ಸಂಘದ 7ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆಳ ಸಮಾಜಗಳು ಆರ್ಥಿಕ ವಲಯದಲ್ಲಿ ಚಲನೆಯನ್ನು ಕಂಡುಕೊಳ್ಳದಿದ್ದರೆ ಆಪ್ತತೆಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ, ಈ ಹಿನ್ನಲೆಯಲ್ಲಿ ಸಹಕಾರಿ ಸಂಘದ ಮೂಲಕವಾದರೂ ಜಡವಾಗಿರುವ ಆರ್ಥಿಕ ವಲಯಕ್ಕೆ ಚಲನೆ ನೀಡಬೇಕಾದ ಅನಿವಾರ್ಯತೆ ಇದೀಗ ಬಂದಿದೆ ಎಂದು ಹೇಳಿದರು.
ಸನ್ಮಾನಕ್ಕೊಳಗಾದ ಪತ್ರಕರ್ತರಾದ ಡಾ.ಎಸ್.ನಾಗಣ್ಣ ಅವರು ಮಾತನಾಡಿ ಸಹಕಾರ ಸಂಘಗಳು ಸದಸ್ಯತ್ವವನ್ನು ಹೆಚ್ಚಳ ಮಾಡಿಕೊಂಡು, ಆರ್ಥಿಕ ದೃಷ್ಠಿಯಲ್ಲೇ ಸಹಕಾರ ಸಂಘಗಳನ್ನು ನಡೆಸಬೇಕು, ಸಿದ್ಧಾಂತಗಳನ್ನು ಇಟ್ಟುಕೊಂಡೇ ಸಹಕಾರ ಸಂಘಗಳನ್ನು ನಡೆಸಲು ಸಾಧ್ಯವಾದರೂ, ಕೆಲವು ವೇಳೆ ಸಿದ್ಧಾಂತಗಳನ್ನು ಬದಿಗಿಟ್ಟು ಸಹಕಾರ ಸಂಘಗಳನ್ನು ಸಬಲೀಕರಣಗೊಳಿಸಬೇಕು, ಸಹಕಾರ ಸಂಘದಲ್ಲಿ ಟೀಕೆಗಳು ಸಹಜ ಅವಕ್ಕೆಲ್ಲಾ ಕಿವಿಗೊಡಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಮಾನವ ಮಂಟಪ ಸಹಕಾರ ಸಂಘ ಶಕ್ತಿ ಸಾಮಥ್ರ್ಯಕ್ಕೆ ತಕ್ಕಂತೆ ಬೆಳವಣಿಗೆಯಾಗಿಲ್ಲ, ಕೌಟುಂಬಿಕ, ದೈನಂದಿನ ಚಟುವಟಿಕೆಯ ಅವಿಭಾಜ್ಯ ಅಂಗ ಅಂತ ಅರಿತು ಕಾರ್ಯನಿತರಾಗಿ ಸಹಕಾರ ಸಂಘದ ಏಳ್ಗೆಗೆ ದುಡಿಯೋಣ ಎಂದು ಹೇಳಿದರು.
ಉಪಾಧ್ಯಕ್ಷರಾದ ಶ್ರೀಮತಿ ಮಲ್ಲಿಕಾಬಸವರಾಜು ಮಾತನಾಡಿ ಈ ಸಹಕಾರಿ ಸಂಘವನ್ನು ಜಾತ್ಯತೀತವಾಗಿ ರೂಪಿಸಿದ್ದೇವೆ, ಆ ಹಿನ್ನಲೆಯಲ್ಲಿ ಸಂಘವನ್ನು ಕೈ ಹಿಡಿದು ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಭೆಯಲ್ಲಿ ನಿರ್ದೇಶಕರಾದ ಮಹಾಲಿಂಗÀಪ್ಪ, ಉಮಾಶಂಕರ್, ಡಾ||ರಾಕೇಶ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಜಿ.ಪ್ರದೀಪ್ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷರಾದ ಡಾ||ಅರುಂಧತಿ ಡಿ. ಸ್ವಾಗತಿಸಿದರು, ಡಾ.ವೀಣಾ ಆಹ್ವಾನ ಪತ್ರಿಕೆ ಓದಿದರು, ಉದ್ಯಮಿ ಡಿ.ಟಿ.ವೆಂಕಟೇಶ್ ಸಂಘದ ಜಮಾ ಖರ್ಚು ತಃಖ್ತೆ ಓದಿದರು.
ಸಂವಿಧಾನ ಪೀಠಿಕೆ ಓದುವ ಮೂಲಕ, ಸಂಘವು ಸಂವಿಧಾನದ ಮೂಲ ಆಶಯಗಳಿಗೆ ಬದ್ದವಾಗಿದೆ ಎಂದು ತಿಳಿಸಲಾಯಿತು, ಮೃತ ಸದಸ್ಯರಿಗೆ ಒಂದು ನಿಮಿಷ ಮೌನ ಆಚರಿಸಲಾಯಿತು. ಕಾರ್ಯದರ್ಶಿ ಗಿರೀಶ್ ವಂದಿಸಿದರು.