ಅಧ್ಯಾಪನ ಕೇವಲ ವೃತ್ತಿ ಅಲ್ಲ, ಜವಾಬ್ದಾರಿ: ಪ್ರೊ.ಎಂ. ವೆಂಕಟೇಶ್ವರಲು

ತುಮಕೂರು: ಅಧ್ಯಾಪನ ಎನ್ನುವುದು ಕೇವಲ ಉದ್ಯೋಗ ವಾಗಿರದೆ, ಒಂದು ಮಹತ್ತರವಾದ ಜವಾಬ್ದಾರಿಯಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ಕಾಲೇಜು ಮತ್ತು ಕಲಾ ಕಾಲೇಜು ಸಹಯೋಗದೊಂದಿಗೆ ಸೋಮವಾರ ಆಯೋಜಿಸಲಾಗಿದ್ದ ಸಾಮಥ್ರ್ಯ ವಿಕಸನ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂಬಳಕ್ಕೆ ದುಡಿದರೆ ಸಾಲದು, ಅದಕ್ಕೆ ನ್ಯಾಯ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಜ್ಞಾನ ನೀಡುವುದು ನಿಮ್ಮ ನಿಜವಾದ ಹೊಣೆಗಾರಿಕೆ ಎಂದರು.

ಪ್ರತಿಯೊಬ್ಬ ಶಿಕ್ಷಕನು ತಮ್ಮಿಂದ ವಿದ್ಯಾರ್ಥಿಗಳಿಗೆ ಎಷ್ಟು ಜ್ಞಾನ ಹಂಚುತ್ತಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕ ಮತ್ತು ಶಿಕ್ಷಣದ ಪಾತ್ರ ಅಪಾರ ಎಂದರು.

ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕಿಶನ್ ರಾವ್ ಮಾತನಾಡಿ ಪ್ರತಿಯೊಬ್ಬ ಶಿಕ್ಷಕನು ಪ್ರತಿನಿತ್ಯವೂ ಹೊಸದನ್ನು ಕಲಿಯುತ್ತಿರುತ್ತಾನೆ. ಶಿಕ್ಷಕರ ಜವಾಬ್ದಾರಿ ಕೇವಲ ಪಾಠಗಳ ಅರ್ಥವನ್ನು ತಿಳಿಸುವುದಲ್ಲ. ವಿದ್ಯಾರ್ಥಿಗಳಲ್ಲಿ ಜ್ಞಾನ, ನೈತಿಕತೆ, ಶಿಸ್ತಿನ ಮನೋಭಾವ, ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಯೊಬ್ಬನು ಅವನ ಜೀವನದಲ್ಲಿ ಯಶಸ್ವಿ ಹೊಂದಲು ಉತ್ತಮ ಶಿಕ್ಷಕನ ಮಾರ್ಗದರ್ಶನ ಅತಿ ಅಗತ್ಯವಾಗಿರುತ್ತದೆ ಎಂದರು.

ವಿವಿ ಕುಲಸಚಿವ ಪ್ರೊ.. ಎಂ. ಕೊಟ್ರೇಶ್ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕನು ತನ್ನಲ್ಲಿರುವ ಕೀಳರಿಮೆ, ಆತಂಕ, ಭಯವನ್ನು ತೊರೆದು ಆತ್ಮಸ್ಥೈರ್ಯದೊಂದಿಗೆ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಕೆ. ಜಿ. ಪರಶುರಾಮ ಮಾತನಾಡಿ, ವಿಶ್ವವಿದ್ಯಾನಿಲಯದಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಪ್ರತಿಭೆ, ಶ್ರಮಶೀಲತೆ, ಶುದ್ಧ ಮನಸ್ಸು ಇದೆ. ಇಂತಹ ಪ್ರತಿಭೆಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಪಿಎಂಇಬಿ ನಿರ್ದೇಶಕರಾದ ಪ್ರೊ. ಬಿ. ರವೀಂದ್ರ ಕುಮಾರ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ಎಸ್.ಶ್ರೀನಿವಾಸ್, ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ. ದಾಕ್ಷಾಯಿಣಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *