ತುಮಕೂರು : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಯಾತ್ಸಂದ್ರ ಟ್ರಕ್ ಟರ್ಮಿಲ್ಗೆ ಬಸ್ ಸೌಲಭ್ಯ ಒದಗಿಸುವಂತೆ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ತುಮಕೂರು ತಾಲೂಕು ಘಟಕದ ಅಧ್ಯಕ್ಷ ಅಣ್ಣೇನಹಳ್ಳಿ ಶಿವಕುಮಾರ್ ಮನವಿ ಮಾಡಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕ್ಯಾತ್ಸಂದ್ರದ ಬಡಾವಣೆಯಲ್ಲಿ ಹಿಂದು ಸಾದರ ಗಂಡು ಮಕ್ಕಳ ಹಾಸ್ಟಲ್ ಜೊತೆಗೆ, ಸರಕಾರದ ವತಿಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಎರಡು ಬಿ.ಸಿ.ಎಂ ಹಾಸ್ಟಲ್,ಪರಿಶಿಷ್ಟ ಜಾತಿ ಮತ್ತು ಪಂಗಡದ ಎರಡು ಪ್ರತ್ಯೇಕ ಹಾಸ್ಟಲ್ಗಳಿದ್ದು, ಒಟ್ಟು 700-800 ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದಾರೆ.ಅವರು ನಗರದಿಂದ ಹಾಸ್ಟಲ್ಗೆ ಹೋಗಿಬರಲು, ಅದರಲ್ಲಿಯೂ ಸಂಜೆ ಮತ್ತು ರಾತ್ರಿಯ ವೇಳೆ ಟ್ಯೂಷನ್, ವಿಶೇಷ ತರಗತಿಗಳನ್ನು ಮುಗಿಸಿಕೊಂಡು ಬರಲು ಸಾಕಷ್ಟು ತೊಂದರೆಯಾಗುತ್ತಿದ್ದು, ಜಿಲ್ಲಾಡಳಿತ ಕ್ಯಾತ್ಸಂದ್ರಕ್ಕೆ ಬರುವ ನಗರಸಾರಿಗೆ ಬಸ್ಸುಗಳನ್ನು ಮಾಜಿ ಮಂತ್ರಿ ಕೆ.ಎನ್.ರಾಜಣ್ಣನವರು ಮನೆಯ ಮುಂಭಾಗದಲ್ಲಿರು ಅಂಡರ್ ಪಾಸ್ ಮೂಲಕ ಬಂದು ಗುಬ್ಬಿ ಬೈಪಾಸ್ ಮೂಲಕ ಕ್ಯಾತ್ಸಂದ್ರ ಪೇಟೆ ಬೀದಿಗೆ ಹೋಗುವಂತೆ ವ್ಯವಸ್ಥೆ ಮಾಡಿದರೆ ನೂರಾರು ವಿದ್ಯಾರ್ಥಿಗಳಿಗೆ, ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಅಲ್ಲದೆ ಅವರಿಗೆ ರಕ್ಷಣೆ ಒದಗಿಸಿದಂತಾಗುತ್ತದೆ.ಕ್ಯಾತ್ಸಂದ್ರದಿಂದ ಬಸ್ ಇಳಿದು ರಾತ್ರಿ ವೇಳೆ ಹೆಣ್ಣು ಮಕ್ಕಳು ಮೂರು ಕಿ.ಮಿ. ನಡೆದು ಹಾಸ್ಟಲ್ ಸೇರಬೇಕಾಗಿದೆ.ಇದರಿಂದ ಸಾಕಷ್ಟು ತೊಂದರೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮತ್ತು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಕ್ಯಾತ್ಸಂದ್ರಕ್ಕೆ ಬರುವ ಸಿಟಿ ಬಸ್ಸುಗಳನ್ನು ಟ್ರಕ್ಟರ್ಮಿನಲ್ ಅಂಡರ್ ಪಾಸ್ ಮೂಲಕ ಗುಬ್ಬಿ ಬೈಪಾಸ್ ರಸ್ತೆಯ ಮೂಲಕ ಹಾದು ಹೋಗಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.