ಛಲವಾದಿಗಳು ಜಾತಿ ಗಣತಿಯಲ್ಲಿ ಧರ್ಮ-ಭೌದ್ಧ, ಜಾತಿ ಛಲವಾದಿ(ಹೊಲೆಯ) ಎಂದು ನಮೂದಿಸಲು ಮನವಿ

ತುಮಕೂರು:ರಾಜ್ಯ ಸರಕಾರದ ಶಾಶ್ವತ ಹಿಂದುಳಿದ ಆಯೋಗದ ವತಿಯಿಂದ ಸೆಪ್ಟಂಬರ್ 22 ರಿಂದ ಅಕ್ಟೋಬರ್ 07ರವರೆಗೆ ನಡೆಯುವ ಸಾಮಾಜಿಕ, ಅರ್ಥಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಜಾತಿಗಳ ಜನರು ತಮ್ಮ ಧರ್ಮದ ಕಲಂನಲ್ಲಿ ಭೌದ್ಧ,ಜಾತಿಯ ಕಲಂನಲ್ಲಿ ಪರಿಶಿಷ್ಟ ಜಾತಿ, ಉಪಜಾತಿ ಕಲಂನಲ್ಲಿ ಛಲವಾದಿ ಅಥವಾ ಹೊಲೆಯ ಎಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ತುಮಕೂರು ಜಿಲ್ಲಾ ಸಂಚಾಲಕ ಸಿ.ಭಾನುಪ್ರಕಾಶ್ ಮನವಿ ಮಾಡಿದ್ದಾರೆ.

ನಗರದ ಛಲವಾದಿ ಮಹಾಸಭಾ ಸಾಂಸ್ಕøತಿಕ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಪತ್ರಿಕಾ ಹೇಳಿಕೆ ನೀಡಿರುವ ಅವರು,ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1956ರಲ್ಲಿಯೇ ಭೌದ್ಧ ಧರ್ಮವನ್ನು ಸ್ವೀಕಾರ ಮಾಡಿ, ಪರಿಶಿಷ್ಟ ಜಾತಿಯ ಜನರು ಭೌದ್ಧ ಧರ್ಮ ಸ್ವೀಕಾರ ಮಾಡುವುದರಿಂದ ಸರಕಾರದ ಸವಲತ್ತುಗಳನ್ನು ಪಡೆಯಲು ಯಾವುದೇ ತೊಂದರೆಯಾಗದು ಎಂಬುದನ್ನು ನಿರೂಪಿಸಿದ್ದಾರೆ.ಹಾಗಾಗಿ ಸಮೀಕ್ಷೆಯ ಕಲಂ 08ರಲ್ಲಿ ಕ್ರಮ ಸಂಖ್ಯೆ 06ರಲ್ಲಿರುವ ಭೌದ್ಧ, ಕಲಂ 09ರಲ್ಲಿ ಪರಿಶಿಷ್ಟ ಜಾತಿ, ಕಲಂ 10ರ ಉಪಜಾತಿ ಕಲಂನಲ್ಲಿ ಛಲವಾದಿ ಅಥವಾ ಹೊಲಯ ಎಂದು ನಮೂದಿಸಬೇಕು. ಛಲವಾದಿ ಸಮುದಾಯದ ಜನರು ಯಾವ ಕಾರಣಕ್ಕೂ ತಮ್ಮ ಜಾತಿ ಮತ್ತು ಉಪಜಾತಿ ಕಲಂನಲ್ಲಿ ಎಕೆ, ಎಡಿ, ಎಎ ಎಂಬ ಸಮುದಾಯ ಸಂಕೇತಗಳನ್ನು ನಮೂದಿಸಬಾರದು ಎಂದು ಕಳಕಳಿಯ ಮನವಿ ಮಾಡಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಛಲವಾದಿ/ಹೊಲಯ ಜಾತಿಯವರು ಕಡ್ಡಾಯವಾಗಿ ಭಾಗವಹಿಸಬೇಕು. ಇದು ಸಮುದಾಯದ ಶೈಕ್ಷಣಿಕ, ಅರ್ಥಿಕ, ರಾಜಕೀಯ ಬೆಳವಣಿಗೆಗೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಡಾ.ಪಿ.ಚಂದ್ರಪ್ಪ ತಿಳಿಸಿದ್ದಾರೆ.

ಜಾತಿವಾರು ಸಮೀಕ್ಷೆಯಲ್ಲಿ ಜಿಲ್ಲೆಯ ಛಲವಾದಿ/ಹೊಲಯ ಜಾತಿಯವರು ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದೆ ಇರುವ ಪರಿಣಾಮ ಸರಕಾರ ಕೈಗೊಂಡ ತೀರ್ಮಾನದಿಂದ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿದೂಗಿಸಿಕೊಳ್ಳಲು ಇದು ಸಕಾಲವಾಗಿದೆ.ಹಿಂದುಳಿದ ವರ್ಗಗಳ ಆಯೋಗವೂ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ನಮ್ಮ ಪಾಲನ್ನು ಪಡೆಯಲು ಸಹಕರಿಸಬೇಕೆಂದು ಮುಖಂಡರಾದ ಬಿ.ಎಸ್.ದಿನೇಶ್ ತಿಳಿಸಿದ್ದಾರೆ.

ಈ ಸಮೀಕ್ಷೆಯ ಅವಧಿಯಲ್ಲಿ ಜಿಲ್ಲೆಯ ತಾಲೂಕು ಹೋಬಳಿ ಮಟ್ಟದ ಮುಖಂಡರುಗಳು ಸಕ್ರಿಯವಾಗಿ ಮನೆ ಮನೆಗೆ ತೆರಳಿ ಈ ಮಾಹಿತಿಯನ್ನು ತಲುಪಿಸುವ ಮೂಲಕ ಜಾಗೃತಿ ಮೂಡಿಸಲು ಕರೆ ನೀಡಿದರು.

ಸಭೆಯಲ್ಲಿ ಮುಖಂಡರಾದ ಅಪ್ಪಾಜಯ್ಯ, ಛಲವಾದಿ ಶೇಖರ್, ಸಿದ್ದಲಿಂಗಯ್ಯ, ಹೆಗ್ಗರೆ ಕೃಷ್ಣಮೂರ್ತಿ, ಶಿರಾ ತಾ.ಬಲರಾಮು, ದಾಸಪ್ಪ, ಕುಣಿಗಲ್ ತಾ.ಎಸ್.ಆರ್.ಚಿಕ್ಕಣ್ಣ, ದಲಿತ್ ನಾರಾಯಣ್,ಪಾವಗಡ ತಾ. ಕೆ.ಟಿ.ನಾಗರಾಜು, ಕಣುಮಪ್ಪ, ಮಧುಗಿರಿ ತಾ.ಸಿದ್ದಲಿಂಗಪ್ಪ, ತುರುವೇಕೆರೆ ಜಯರಾಮಯ್ಯ ಕಲ್ಲುಬೋರನಹಳ್ಳಿ , ಬಾಳೆಕಾಯಿ ಶೇಖರ್, ಸಂಪತ್‍ಕುಮಾರ್, ಹೆಚ್,.ಎಸ್.ಚಿರಂಜೀವಿ,ಲೇಕಾಪಕ್ಷಯ್ಯ ಮನವಿ ಮಾಡಿದರು.

Leave a Reply

Your email address will not be published. Required fields are marked *